»   » ವಿಡಿಯೋ: 'ಲೂಸಿಯಾ' ಪವನ್ ಗೆ ಕ್ಯಾನ್ಸರ್ ಗಿಂತ ಕೆಟ್ಟ ಕಾಯಿಲೆ ಇದೆ.!

ವಿಡಿಯೋ: 'ಲೂಸಿಯಾ' ಪವನ್ ಗೆ ಕ್ಯಾನ್ಸರ್ ಗಿಂತ ಕೆಟ್ಟ ಕಾಯಿಲೆ ಇದೆ.!

Posted by:
Subscribe to Filmibeat Kannada

ನಿರ್ದೇಶಕ ಪವನ್ ಕುಮಾರ್ ಗೊತ್ತಲ್ವಾ.? ಸದಾ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವವರಿಗೆ ಪವನ್ ಗೊತ್ತಿರಲೇಬೇಕು ಬಿಡಿ. 'ಲೂಸಿಯಾ' ಸಿನಿಮಾ ನೋಡಿ ತಲೆಗೆ ಹೆಬ್ಬಾವು ಬಿಟ್ಕೊಂಡು 'ಯು ಟರ್ನ್' ಹೊಡೆದ ಸಿನಿ ಪ್ರಿಯರಿಗೆಲ್ಲಾ ಪವನ್ ಪರಿಚಯ ಇದ್ದೇ ಇರುತ್ತೆ.

ಈಗ ಪವನ್ ಬಗ್ಗೆ ನಾವು ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣ ಡಾ.ಕಾಮೇಶ್.! ಪವನ್ ಕುಮಾರ್ ಗೆ ಕ್ಯಾನ್ಸರ್ ಗಿಂತಲೂ ಭಯಾನಕ ಕಾಯಿಲೆ ಇದ್ಯಂತೆ. ಆ ಕಾಯಿಲೆಯನ್ನ ಪತ್ತೆ ಹಚ್ಚಿರುವವರು ಡಾ.ಕಾಮೇಶ್.

ಯಾರೀ ಡಾ.ಕಾಮೇಶ್.? ಭಯಾನಕ ಕಾಯಿಲೆ ಯಾವುದು.?

ಯಾರೀ ಡಾ.ಕಾಮೇಶ್.? ಭಯಾನಕ ಕಾಯಿಲೆ ಯಾವುದು.?

ನಿರ್ದೇಶಕ ಪವನ್ 'HFPS' ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದನ್ನ ಗುಣಪಡಿಸುವಲ್ಲಿ ಪವನ್ ಕುಮಾರ್ ಗೆ ಕೌನ್ಸಿಲಿಂಗ್ ನೀಡುತ್ತಿರುವವರು ಡಾ.ಕಾಮೇಶ್.![ಟ್ವಿಟ್ಟರ್ ನಲ್ಲಿ ಸುದೀಪ್ ಮತ್ತು ಪವನ್ ಪ್ರಶ್ನೋತ್ತರ ಕಲರವ]

ಗಾಬರಿ ಆಗಬೇಡಿ...

ಗಾಬರಿ ಆಗಬೇಡಿ...

ಇದೆಲ್ಲ ಹಂಡ್ರೆಡ್ ಪರ್ಸೆಂಟ್ ರೀಲ್ ಸುದ್ದಿ. ರಿಯಲ್ ಅಲ್ಲ.! ರಿಯಲ್ ಅಂತ ನೀವು ಭಾವಿಸುವ ಹಾಗೂ ಇಲ್ಲ. ಯಾಕಂದ್ರೆ, ಕೆ.ಇ.ಬಿ ಎಂಬ ಯೂಟ್ಯೂಬ್ ಚಾನೆಲ್ ರೆಡಿ ಮಾಡಿರುವ ವಿಡಿಯೋ ಒಂದರ ಬಗ್ಗೆ ನಾವು ಹೇಳ್ತಿದ್ದೀವಿ ಅಷ್ಟೇ.[ಟಾಲಿವುಡ್, ಕಾಲಿವುಡ್ ನಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಪವನ್ ಕುಮಾರ್]

ಕಿಸಕ್ ಅಂತ ನಗಿಸುವ ವಿಡಿಯೋ...

ಕಿಸಕ್ ಅಂತ ನಗಿಸುವ ವಿಡಿಯೋ...

ಸಿನಿಮಾ ಕಥೆಗಿಂತ ಪ್ರಮೋಷನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ನಿರ್ದೇಶಕರ ಕಾಲೆಳೆದಿರುವ ಈ ವಿಡಿಯೋದಲ್ಲಿ 'ಹೈಪರ್ ಫಿಲ್ಮ್ ಪ್ರಮೋಷನ್ ಸಿಂಡ್ರೋಮ್' ಪೀಡಿತ ಡೈರೆಕ್ಟರ್ ಆಗಿ ಪವನ್ ನಟಿಸಿದ್ದಾರೆ.

ನೀವು ತಪ್ಪದೇ ನೋಡಿ...

ನೀವು ತಪ್ಪದೇ ನೋಡಿ...

ನಾಗಭೂಷಣ.ಎನ್.ಎಸ್ ನಿರ್ದೇಶಿಸಿರುವ ಈ ವಿಡಿಯೋ ಕುರಿತು ನಾವು ವಿವರಣೆ ನೀಡುವ ಬದಲು ನೀವೇ ನೋಡಿ ಎಂಜಾಯ್ ಮಾಡುವುದೇ ಉತ್ತಮ. ಅಂದ್ಹಾಗೆ, ಪವನ್ ಗೆ ಕ್ಯಾನ್ಸರ್ ಗಿಂತಲೂ ಕೆಟ್ಟ ಕಾಯಿಲೆ ಇದೆ ಅಂತ ಹೇಳಿದವರು ಇದೇ ನಾಗಭೂಷನ್. ಈ ಲಿಂಕ್ ಕ್ಲಿಕ್ ಮಾಡಿ, ವಿಡಿಯೋ ನೋಡಿ...

English summary
KEB, YouTube Channel has come up with a New video in which Director Pawan Kumar has been diagnosed with Chronic HFPS. Watch the hilarious video here.
Please Wait while comments are loading...

Kannada Photos

Go to : More Photos