»   » ಫೇಸ್ ಬುಕ್ಕಲ್ಲಿ ಜಗ್ಗೇಶ್ ಜಾಲಿ 'ಡಬ್ ಸ್ಮಾಷ್'

ಫೇಸ್ ಬುಕ್ಕಲ್ಲಿ ಜಗ್ಗೇಶ್ ಜಾಲಿ 'ಡಬ್ ಸ್ಮಾಷ್'

Posted by:
Subscribe to Filmibeat Kannada

ಡಬ್ ಸ್ಮಾಷ್ ಅನ್ನೋದು ಇತ್ತೀಚೆಗೆ ಟ್ರೆಂಡ್ ಆಗ್ತಾ ಇದೆ. ಮಾತ್ರವಲ್ಲದೇ ಇದು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ. ಸ್ಟಾರ್ ನಟರೆಲ್ಲಾ ಜಾಲಿ ಮೂಡಿನಲ್ಲಿರುವಾಗ ಮಾಡಿರುವ ಡಬ್ಬಿಂಗ್ ಸ್ಮಾಷ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟ ಜಗ್ಗೇಶ್, ಡಾ.ರಾಜ್ ಕುಮಾರ್ ಅಭಿನಯಿಸಿದ್ದ 'ಬಬ್ರುವಾಹನ' ಚಿತ್ರದ 'ಏನು ಪಾರ್ಥ' ಫೇಮಸ್ ಡೈಲಾಗನ್ನು ಡಬ್ ಸ್ಮಾಷ್ ಮಾಡಿ ತಮ್ಮ ಫೇಸ್ ಬುಕ್ಕಿನಲ್ಲಿ ಹರಿಯಬಿಟ್ಟಿದ್ದಾರೆ. ಜಗ್ಗೇಶ್ ಡಬ್ಬಿಂಗ್ ಸ್ಮಾಷ್ ಫೇಸ್ ಬುಕ್ಕಿನಲ್ಲಿ ನೀವೆ ನೋಡಿ.

ನಾಳೆ ಯಾವುದಾದರು ನಿಮಗೆ ಇಷ್ಟ ಆಗೊ ವಿಷಯ ತರ್ತೀನಿ... ಸ್ವಲ್ಪ ಈ ತಿಂಗಳು ಬ್ಯುಸಿಯಾದೆ... ಆದರು ಮನಸ್ಸು ನಿಮ್ಮ ಬಗ್ಗೆಯೇ ಯೋಚಿಸುತ್ತಿದೆ... ಅಲ್ಲಿಯವರೆಗು ಈ ಡಬ್ ಸ್ಮ್ಯಾಷ್ ನೋಡಿ ಮಜಾ ತಗ್ಗೊಳ್ಳಿ... ಧನ್ಯವಾದ ಹಾಗು ಶುಭರಾತ್ರಿ...

Posted by Jaggesh Shivalingappa onWednesday, July 8, 2015

ಇತ್ತೀಚೆಗೆ ಸಖತ್ ಸೌಂಡ್ ಮಾಡುತ್ತಿರುವ ಡಬ್ಬಿಂಗ್ ಸ್ಮಾಷ್ ಗಳು ತುಂಬಾ ಕಾಮಿಡಿಯಾಗಿರುತ್ತವೆ. ಅದ್ರಲ್ಲೂ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಜಗ್ಗೇಶ್ ವಾಯ್ಸ್ ಅಂತೂ ಡಿಫರೆಂಟಾಗಿದ್ದು, ಡಬ್ಬಿಂಗ್ ಸ್ಮಾಷ್ ನಲ್ಲಿ ಸಖತ್ ಆಗಿ ಮೂಡಿಬಂದಿದೆ.

Watch Jaggesh's Dubsmash Video

ಡಬ್ಬಿಂಗ್ ಸ್ಮಾಷ್ ಅಂದ್ರೆ ಮಿಮಿಕ್ರಿ ಅನ್ನೋದು ಕೆಲವರು ಅಭಿಪ್ರಾಯ. ಆದರೆ ಇದು ಮಿಮಿಕ್ರಿ ಥರಾ ಅಲ್ಲಾ ಬದಲಾಗಿ ಪ್ಲೇ ಆಗುತ್ತಿರುವ ವಾಯ್ಸ್ ಜೊತೆಗೆ ಸರಿಯಾಗಿ ಲಿಪ್ ಮುಮೆಂಟ್, ಹಾಗೂ ಮುಖದಲ್ಲಿ ಅಕ್ಷನ್ ಇರಬೇಕು ಇದನ್ನೇ ನಮ್ಮ ಎಲ್ಲಾ ಫಿಲಂ ಸ್ಟಾರ್ ಗಳು ವಿಡಿಯೋ ಮಾಡಿ ತಮ್ಮ ತಮ್ಮ ಫೇಸ್ ಬುಕ್ ಗಳಲ್ಲಿ ಹರಿಯಬಿಡುತ್ತಾರೆ.

ಏನೇ ಇರಲಿ ಇತ್ತೀಚೆಗೆ ಎಲ್ಲವೂ ಫೇಸ್ ಬುಕ್, ಟ್ವಿಟ್ಟರ್ ಲೋಕವಾಗಿರುವ ಈ ಸಂದರ್ಭದಲ್ಲಿ ಇಂತಹ ಜಾಲಿ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತವೆ ಅಂದ್ರೆ ಸಾಮಾಜಿಕ ಜಾಲತಾಣಗಳನ್ನು ನೋಡುವವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಅಲ್ವಾ. ನೀವೇನಂತೀರಾ.

English summary
Watch Kannada actor Jaggesh's Dubsmash Video from Dr. Rajkumar's Famous 'Babruvahana' Dialogueos on facebook.
Please Wait while comments are loading...

Kannada Photos

Go to : More Photos