»   » ಕನ್ನಡಾಭಿಮಾನಿಗಳೇ..ಮಿಸ್ ಮಾಡ್ದೆ ಈ ವಿಡಿಯೋ ನೋಡಿ

ಕನ್ನಡಾಭಿಮಾನಿಗಳೇ..ಮಿಸ್ ಮಾಡ್ದೆ ಈ ವಿಡಿಯೋ ನೋಡಿ

Posted by:
Subscribe to Filmibeat Kannada

ಈಗೇನಿದ್ದರೂ ಇಂಗ್ಲೀಷ್ ಯುಗ. ಎಲ್ಲಿ ನೋಡಿದರೂ ಆಂಗ್ಲ ಭಾಷೆಯದೇ ಕಾರುಬಾರು. ಹೀಗಿರುವಾಗ ನಮ್ಮ ಕನ್ನಡಕ್ಕೆ ಬೆಲೆ ಎಲ್ಲಿದೆ ಕಣ್ರೀ. ನಮ್ಮ ಸಿಲಿಕಾನ್ ಸಿಟಿಯಲ್ಲಂತೂ ಕೇಳಲೇಬೇಡಿ. ಇಲ್ಲಿ ಕನ್ನಡ ಮಾತಾಡೋರಿಗಿಂತ ಬೇರೆ ಭಾಷಿಗರೇ ಹೆಚ್ಚು.

ಈಗ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ, ನಮ್ಮ ಮಾತೃಭಾಷೆ ಕನ್ನಡದ ಬಗ್ಗೆ ಮಾಡಿರುವ, 'ಕನ್ನಡ ಗೊತ್ತಿಲ್ಲ ಸ್ವಲ್ಪ ಜಾಸ್ತಿ' ಅನ್ನುವ ಒಂದು ವಿಶಿಷ್ಟ ವಿಡಿಯೋ.

Watch 'Kannad Gothilla Swalpa Jaasthi' video

ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿವರೆಗೂ ನೀವು ಈ ವಿಡಿಯೋನ ನೋಡಿಲ್ಲಾಂದ್ರೆ ಈಗಲೇ ನೋಡಿ....

ಅಂದ್ಹಾಗೆ ಈ ವಿಡಿಯೋವನ್ನ ರೆಡಿ ಮಾಡಿರುವುದು 'ಇನಾಮ್' ಟೀಮ್. ಇತ್ತೀಚೆಗೆ 'ಕನ್ನಡ'ಪದ ಕನ್ನಡೇತರ ಜನಗಳಿಂದ ಕೇವಲ 'ಕನ್ನಡ್' ಅಂತ ಮಾತ್ರ ಬಳಕೆ ಆಗುತ್ತಿದೆ. ಇದರ ಇಂಪ್ಯಾಕ್ಟ್ ಈಗ ರಿಲೀಸ್ ಆಗಿರುವ 'ಕನ್ನಡ್ ಅಲ್ಲಾ ಕನ್ನಡ' ವಿಡಿಯೋ.

ಸಂಜನಾ ಪ್ರಕಾಶ್, ಟಿವಿ ರಿಪೋರ್ಟರ್ ಯತೀಶ್ ಮತ್ತು ಇನ್ನಿತರ ಯುವ ಪ್ರತಿಭೆಗಳು ಈ ವಿಡಿಯೋದಲ್ಲಿ ಕಾಣಿಸಿಕೊಂಡು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಸಣ್ಣ ಪ್ರಯತ್ನ ಮಾಡಿದ್ದಾರೆ.

ಚಿತ್ರನಟ ರಕ್ಷಿತ್ ಶೆಟ್ಟಿ, ಡೈರೆಕ್ಟರ್ ಕೆ.ಎಮ್.ಚೈತನ್ಯ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕರು ಈ ವಿಡಿಯೋ ನೋಡಿ ತಮ್ಮ ಸೋಷಿಯಲ್ ನೆಟ್ ವರ್ಕಿಂಗ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.

ಇದಕ್ಕೂ ಮೊದಲು ಬಂದಂತಹ 'ಯಂಗ್ ಎಂಗೋ', 'ಗಾಂಚಲಿ ಬಿಡಿ ಕನ್ನಡ ಮಾತಾಡಿ' ಅನ್ನುವ ಅನೇಕ ಕನ್ನಡ ವಿಡಿಯೋಗಳು ಕನ್ನಡಿಗರ ಮೇಲೆ ಉತ್ತಮ ಪರಿಣಾಮ ಬೀರಿತ್ತು. ಇನ್ನೂ 'ಕನ್ನಡ ಗೊತ್ತಿಲ್ಲ ಸ್ವಲ್ಪ ಜಾಸ್ತಿ' ಸಮಾಜದಲ್ಲಿ ಯಾವ ರೀತಿಯ ಬದಲಾವಣೆ ತರುತ್ತದೆ ಅಂತ ಕಾದು ನೋಡೋಣ.

English summary
'Kannad Gothilla Swalpa Jaasthi', video is becoming viral in the web world. Watch the Video.
Please Wait while comments are loading...

Kannada Photos

Go to : More Photos