»   » ದಸರಾ ಉಡುಗೊರೆ : ಶ್ರೀಮುರಳಿ 'ರಥಾವರ' ಟೀಸರ್ ಔಟ್

ದಸರಾ ಉಡುಗೊರೆ : ಶ್ರೀಮುರಳಿ 'ರಥಾವರ' ಟೀಸರ್ ಔಟ್

Posted by:
Subscribe to Filmibeat Kannada

ಬ್ಲಾಕ್ ಬಸ್ಟರ್ 'ಉಗ್ರಂ' ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿರುವ ಸಿನಿಮಾ 'ರಥಾವರ'. ಕಳೆದ ವರ್ಷವೇ 'ರಥಾವರ' ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು.

ಇದೀಗ ದಸರಾ ಹಬ್ಬದ ಅಂಗವಾಗಿ ಶ್ರೀಮುರಳಿ ಅಭಿಮಾನಿಗಳಿಗೆ ಸ್ಪೆಷಲ್ ಉಡುಗೊರೆ ಲಭಿಸಿದೆ. 'ರಥಾವರ' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ ನೋಡಿ.....

rathaavara-teaser

'''ಕೇಸ್ ಮಾಡೋದು ದೊಡ್ಡ ವಿಷ್ಯ ಅಲ್ಲ. ಮಾಡಿದ್ರೆ ಇಂತಹ ಕೇಸ್ ಇದ್ಯಾ ಅಂತ ಲಾಯರ್ ಗಳು ತಡಕಾಡಬೇಕು, ಪೊಲೀಸ್ ನವರು ಹುಡುಕಾಡಬೇಕು.'' ಅಂತ ಪಂಚಿಂಗ್ ಡೈಲಾಗ್ ಇರುವ ಈ 'ರಥಾವರ' ಟೀಸರ್ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. [ಉಗ್ರಂ ಮುರಳಿ 'ರಥಾವರ' ಶೂಟಿಂಗ್ ಮುಗಿಯೋದ್ಯಾವಾಗ?]

ಶ್ರೀಮುರಳಿ ನಿಂತಿರುವ ಸ್ಟೈಲ್, ಹೊಡೆದಿರುವ ಡೈಲಾಗ್ ನೋಡಿದ್ರೆ, 'ರಥಾವರ' ಆಕ್ಷನ್ ಥ್ರಿಲ್ಲರ್ ಸಿನಿಮಾ ಅಂತ ಮೊದಲ ನೋಟಕ್ಕೆ ಅನಿಸುವುದು ಸಹಜ. ಆಕ್ಷನ್ ಜೊತೆ ಸಿನಿಮಾದಲ್ಲಿ ಲವ್ ರೋಮ್ಯಾನ್ಸ್ ಕೂಡ ಇದೆ. ಮೊದಲ ಬಾರಿಗೆ ಶ್ರೀಮುರಳಿ ಜೊತೆ ಡ್ಯುಯೆಟ್ ಹಾಡಿರುವುದು 'ಬುಲ್ ಬುಲ್' ಬೆಡಗಿ ರಚಿತಾ ರಾಮ್. [ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್]

rathaavara-teaser

'ರಥಾವರ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಮಾಡಿರುವುದು ಚಂದ್ರಶೇಖರ್ ಬಂಡಿಯಪ್ಪ. ಯಾವುದೇ ಕೊರತೆ ಬಾರದಂತೆ ಬಂಡವಾಳ ಹಾಕಿರುವುದು ಧರ್ಮಶ್ರೀ ಮಂಜುನಾಥ್.ಎನ್. [ಉಗ್ರಂ 'ಶ್ರೀಮುರುಳಿ'ಯ ರೌದ್ರಾವತಾರ ನೋಡಿದ್ದೀರಾ?]

ದಸರಾ ಕೊಡುಗೆಯಾಗಿ ಸದ್ಯಕ್ಕೆ 'ರಥಾವರ' ಟೀಸರ್ ರಿಲೀಸ್ ಆಗಿದೆ. ಕೆಲವೇ ದಿನಗಳಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ. ಕಾಯ್ತಾಯಿರಿ....

English summary
Kannada Actor Srimurali starrer 'Rathaavara' teaser is out. Watch the teaser here.
Please Wait while comments are loading...
Best of 2016

Kannada Photos

Go to : More Photos