»   » ನಗರದ ಸುಖ ದುಃಖದ ಕಥೆ ಹೇಳುವ 'ಕಹಿ' ಚಿತ್ರದ ಟ್ರೈಲರ್

ನಗರದ ಸುಖ ದುಃಖದ ಕಥೆ ಹೇಳುವ 'ಕಹಿ' ಚಿತ್ರದ ಟ್ರೈಲರ್

Posted by:
Subscribe to Filmibeat Kannada

'ರಂಗಿತರಂಗ'ದ ಭರ್ಜರಿ ಯಶಸ್ಸಿನ ನಂತರ ಗಾಂಧಿನಗರದಲ್ಲಿ ಇದೀಗ ಮತ್ತೆ ಹೊಸಬರ ಚಿತ್ರಕ್ಕೆ ರೆಕ್ಕೆ ಬಲಿತಂತಾಗಿದೆ. ಸದ್ಯಕ್ಕೆ ಮತ್ತೊಂದು ಹೊಸಬರ ಚಿತ್ರ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದು, ಎಲ್ಲ ಹೊಸ ಮುಖಗಳೇ ಕಾಣಸಿಗುತ್ತಿದೆ.

ಹೊಸ ನಿರ್ದೇಶಕ, ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ಅರವಿಂದ ಶಾಸ್ತ್ರೀ ಆಕ್ಷನ್-ಕಟ್ ಹೇಳಿರುವ ಮಿಸ್ಟರಿ, ಥ್ರಿಲ್ಲರ್ ಕಥೆ ಹೊಂದಿರುವ 'ಕಹಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕೆಲವೇ ಕೆಲವು ದಿನಗಳಲ್ಲಿ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಸೂರಜ್ ಗೌಡ, ಹಾಗು ಕೃಶಿ ತಾಪಂಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಕಹಿ ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...

Watch Kannada movie 'Kahi' official trailer

ಚಿತ್ರದ ಟ್ರೈಲರ್ ನೋಡುತ್ತಿದ್ದಂತೆ ಭಾರಿ ಕುತೂಹಲ ಹುಟ್ಟುತ್ತಿದೆ. ಅಂತೂ ಇಂತೂ 'ರಂಗಿತರಂಗ' ಚಿತ್ರದ ನಂತರ ಮತ್ತೊಂದು ಮಿಸ್ಟರಿ, ಥ್ರಿಲ್ಲರ್ ಕಥೆಯೊಂದನ್ನ ಗಾಂಧಿನಗರಕ್ಕೆ ಟೆಕ್ಕಿಗಳ ಗುಂಪು ಹೊತ್ತು ತಂದಿದೆ.

ಭರ್ಜರಿ ಕುತೂಹಲ ಕೆರಳಿಸಿರುವ 'ಕಹಿ' ಟ್ರೈಲರ್ ನಲ್ಲಿ ಸಂತಸ, ನಂಬಿಕೆ, ಜೀವನ, ಹವ್ಯಾಸ, ಒಟ್ಟಿನಲ್ಲಿ ಮಿಳಿತವಾಗಿರುವುದು ಹೈಲೈಟ್ ಆಗುತ್ತಿದೆ.

ಒಟ್ಟಾರೆ ಹೇಳಬೇಕೆಂದರೆ ಸದ್ಯದ ಮಾಡರ್ನ್ ಬೆಂಗಳೂರಿನ ಸುತ್ತಮುತ್ತ 'ಕಹಿ' ಚಿತ್ರವನ್ನು ಹೆಣೆಯಲಾಗಿದೆ ಅಂತಾನೇ ಹೇಳಬಹುದು. ಟೋಟಲಿ ಗನ್ನು, ರಕ್ತ, ಜೊತೆಗೆ ಹುಡುಕಾಟದಲ್ಲಿಯೇ 'ಕಹಿ' ಚಿತ್ರ ಕಳೆದುಹೋಗುತ್ತದೆ.

'ರಂಗಿತರಂಗ' ಚಿತ್ರವನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದಂತೆ 'ಕಹಿ' ಚಿತ್ರವನ್ನು ನಮ್ಮ ಗಾಂಧಿನಗರದ ಮಂದಿ ಸ್ವಾಗತಿಸುತ್ತಾರೋ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Kannada Movie 'Kahi' official trailer is released. 'Kahi' features Actor Suraj Gowda, Actress Krishi Thapanda, in the lead role. The movie is directed by Arvind Sastry.
Please Wait while comments are loading...

Kannada Photos

Go to : More Photos