»   » ಎಲ್ಲರೂ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿದ ದರ್ಶನ್

ಎಲ್ಲರೂ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿದ ದರ್ಶನ್

Posted by:
Subscribe to Filmibeat Kannada

ತೂಗುದೀಪ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರ್ಪಿಸುವ ಫ್ಯಾಮಿಲಿ ಎಂರ್ಟಟೈನರ್ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ಈ ಟೀಸರ್ ನಲ್ಲಿ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಎಲ್ಲಾ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ 'ಈ ಮದುವೆ ಚಿತ್ರಮಂದಿರಗಳಲ್ಲಿ ನಡೆಯುತ್ತಿದೆ ಎಲ್ಲರೂ ಮದುವೆಗೆ ಬನ್ನಿ ಎಂದು 'ಮದುವೆಯ ಕರೆಯೋಲೆ' ನೀಡಿದ್ದಾರೆ.

ಗೀತರಚನೆಕಾರರಾಗಿದ್ದ ಕವಿರಾಜ್ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ಇದೇ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿರುವ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ಈಗಾಗಲೇ ಬಿಡುಗಡೆಗೆ ತಯಾರಾಗಿ ನಿಂತಿದೆ.[ಕುಂಬಳಕಾಯಿಯತ್ತ, 'ಮದುವೆಯ ಮಮತೆಯ ಕರೆಯೋಲೆ' ]

Watch Kannada Movie

ನವನಟ ಸೂರಜ್ ಮತ್ತು ಸ್ಯಾಂಡಲ್ ವುಡ್ ನ ಬೇಬಿ ಡಾಲ್ ಅಮೂಲ್ಯ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮದುವೆಯ ಮಮತೆಯ ಕರೆಯೋಲೆ' ಚಿತ್ರ ಜನವರಿ ತಿಂಗಳಿನಲ್ಲಿ ಹೊಸ ವರ್ಷಕ್ಕೆ ರಿಲೀಸ್ ಆಗುತ್ತಿದೆ.[ಕಿಚ್ಚನಿಗೆ 'ಮದುವೆಯ ಕರೆಯೋಲೆ' ನೀಡಲು ಅರಮನೆಗೆ ಬಂದ ಅಮೂಲ್ಯ]

ಈಗಾಗಲೇ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಆಡಿಯೋ ಸೂಪರ್ ಹಿಟ್ ಆಗಿದ್ದು, ಚಿತ್ರದಲ್ಲಿ ಅನಂತ್ ನಾಗ್, ಚಿತ್ರಾ, ಅಚ್ಯುತ್ ಕುಮಾರ್, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರು ಮಿಂಚಿದ್ದಾರೆ.

ತೂಗುದೀಪ ಪ್ರೊಡಕ್ಷನ್ಸ್ ಅಡಿಯಲ್ಲಿ ನಡೆಯಲಿರುವ ಮದುವೆಗೆ ದರ್ಶನ್ ಅವರು ಯಾವ ರೀತಿ ಕರೆಯೋಲೆ ನೀಡಿದ್ದಾರೆ ಎಂಬುದು ಈ ವಿಡಿಯೋ ಝಲಕ್ ನಲ್ಲಿದೆ ನೋಡಿ..

Watch Kannada Movie
English summary
Watch "Maduveya Mamatheya Kareyole" Teaser - Darshan Talking about Maduveya Mamatheya Kareyole. Kareyole featuring Amulya, Suraj Gowda. Movie is produced by Thoogudeepa Productions, and directed by Kaviraj. Music composer V Harikrishna has scored music for the movie.
Please Wait while comments are loading...

Kannada Photos

Go to : More Photos