»   » ಪ್ರೀತಿಯ ಷಹಜಹಾನ್ ನ 'ಮುಮ್ತಾಜ್' ಟ್ರೈಲರ್ ಬಿಡುಗಡೆ

ಪ್ರೀತಿಯ ಷಹಜಹಾನ್ ನ 'ಮುಮ್ತಾಜ್' ಟ್ರೈಲರ್ ಬಿಡುಗಡೆ

Posted by:
Subscribe to Filmibeat Kannada

ನವಗ್ರಹ' ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ 'ಕಣ್ಣ್ ಕಣ್ಣ ಸಲಿಗೆ' ಅಂತಾ ಡ್ಯುಯೆಟ್ ಹಾಡಿದ ಚಾಕಲೇಟು ಹುಡುಗ ನಿಮಗೆ ನೆನಪಿದೆಯಾ. ಅವರು ಯಾರು ಗೊತ್ತಾ. ಇದ್ಯಾರಪ್ಪಾ ಅಂದುಕೊಂಡ್ರಾ. ಅವರೇ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಪರದೆ ಮೇಲೆ ವಿಲನ್ ಆಗಿ ಮಿಂಚುತ್ತಿದ್ದ ಕೀರ್ತಿ ರಾಜ್ ಪುತ್ರ ಧರ್ಮ ಕೀರ್ತಿ ರಾಜ್, '

ಯಾಕೋ ಅದೃಷ್ಟ ನೆಟ್ಟಗಿಲ್ಲದೇ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದ ಧರ್ಮ ಮತ್ತೆ 'ಮುಮ್ತಾಜ್' ಗೆ ಪ್ರೀತಿಯ ಷಹಜಹಾನ್ ಆಗಿ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಧರ್ಮಕೀರ್ತಿ ರಾಜ್, ಶರ್ಮಿಳಾ ಮಾಂಡ್ರೆ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿರುವ 'ಮುಮ್ತಾಜ್' ಟ್ರೈಲರ್‌ ಬಿಡುಗಡೆಯಾಗಿದೆ.

ಆಕ್ಷನ್-ಕಟ್ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಮುಮ್ತಾಜ್' ಚಿತ್ರದ ಬಿಡುಗಡೆಯಾಗಿರುವ ಟ್ರೈಲರ್ ನೀವೇ ನೋಡಿ.

Watch Kannada Movie 'Mumtaaz' trailer

ಅಂದು ಆ ಷಹಜಹಾನ್ ತನ್ನ ಪ್ರೀತಿಯ ಮುಮ್ತಾಜ್ ಗೆ ತಾಜಮಹಲ್ ಕಟ್ಟಿಕೊಟ್ಟನಂತೆ, ಇಂದು ಈ ಷಹಜಹಾನ್, ತನ್ನ ಹುಡುಗಿಗೋಸ್ಕರ ತನ್ನ ಪ್ರೀತಿಯನ್ನೆ ಬಿಟ್ಟುಕೊಡ್ತಾನ ಅನ್ನೋದು 'ಮುಮ್ತಾಜ್' ಚಿತ್ರದ ಹೈಲೈಟ್ಸ್.

ಐದು ನಿಮಿಷಕ್ಕಿಂತಲೂ ಜಾಸ್ತಿ ಇರುವ 'ಮುಮ್ತಾಜ್' ಟ್ರೈಲರ್ ನಲ್ಲಿ ಪ್ರೀತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಶೇಷ ಪಾತ್ರದಲ್ಲಿ 'ಚಾಲೆಂಜಿಂಗ್' ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ. 'ಗುರು ಇಲ್ಲದೇ ಗುರಿ ಇಲ್ಲದೇ, ಹುಟ್ಟೋದು ಪ್ರೀತಿ ಮಾತ್ರ. ವಿಷ ಕುಡಿದು ಬದುಕಬಹುದು, ಆದ್ರೆ ಪ್ರೀತಿಯನ್ನ ಮನಸ್ಸಲ್ಲಿ ತುಂಬಿಕೊಂಡು ಬದುಕುವುದು ತುಂಬಾನೇ ಕಷ್ಟ' ಹೀಗೆ ಸಖತ್ ಪಂಚ್ ಡೈಲಾಗ್ ಗಳು ಇರುವ ಮುಮ್ತಾಜ್ ಟ್ರೈಲರ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

'ಮುಮ್ತಾಜ್' ಚಿತ್ರಕ್ಕೆ ವಿ.ರಾಘವ ಮುರಳಿ ಆಕ್ಷನ್-ಕಟ್ ಹೇಳಿದ್ದು, ಕೆ.ಬಿ ಪ್ರವಿಣ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ 'ಮುಮ್ತಾಜ್' ಚಿತ್ರದ ಹಾಡುಗಳು ಸಖತ್ ಹಿಟ್ ಆಗಿದೆ. ಇನ್ನು ಚಿತ್ರ ಹೇಗಿದೆ ಎಂದು ನೋಡಲು ತೆರೆಗೆ ಬರುವವರೆಗೂ ಕಾಯಬೇಕಿದೆ.

English summary
Kannada Actor Dharma keertiraj, Kannada Actress Sharmila Mandre starrer Kannada movie 'Mumtaaz' official trailer released, Watch V.Raghava Murali directorial 'Mumtaaz' trailer here.
Please Wait while comments are loading...

Kannada Photos

Go to : More Photos