»   » 'ರುದ್ರತಾಂಡವ' ಲೇಟೆಸ್ಟ್ ಟ್ರೇಲರ್ ನೋಡಿ...

'ರುದ್ರತಾಂಡವ' ಲೇಟೆಸ್ಟ್ ಟ್ರೇಲರ್ ನೋಡಿ...

Posted by:
Subscribe to Filmibeat Kannada

'ಸ್ವೀಟಿ' ರಾಧಿಕಾ ಕುಮಾರಸ್ವಾಮಿ ಮತ್ತು ಚಿರಂಜೀವಿ ಸರ್ಜಾ ನಟಿಸಿರುವ ಸಿನಿಮಾ 'ರುದ್ರತಾಂಡವ'. ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡುತ್ತಿರುವ 'ರುದ್ರತಾಂಡವ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಲವ್ವರ್ ಬಾಯ್ ಆಗಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದರೆ, ಮಿಡ್ಲ್ ಸ್ಕೂಲ್ ಟೀಚರ್ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಮಿಂಚಿದ್ದಾರೆ. ಇಬ್ಬರಿಗಿಂತ ಟ್ರೇಲರ್ ನಲ್ಲಿ ರವಿಶಂಕರ್ 'ಸಿಂಹ' ಘರ್ಜನೆಯೇ ಹೆಚ್ಚು.


ಖತರ್ನಾಕ್ ಖೇಡಿಯಾಗಿರುವ ರವಿಶಂಕರ್ ವಿರುದ್ಧ ಚಿರಂಜೀವಿ ಸರ್ಜಾ 'ರುದ್ರತಾಂಡವ'ವಾಡುವುದೇ ಚಿತ್ರದ ಕಥಾಹಂದರ. ಹೀಗಾಗಿ ಸಿನಿಮಾದಲ್ಲಿ 'ಮುಂಗಾರು ಮಳೆ'ಯಂತಹ ನವಿರಾದ ಪ್ರೇಮ ಕಥೆ ಇದೆ. ಹಾಗೇ, 'ದುನಿಯಾ' ರೇಂಜಿಗೆ ಸೂಪರ್ ಡ್ಯೂಪರ್ ಫೈಟ್ಸೂ ಇವೆ. [ಚಿರಂಜೀವಿ ಸರ್ಜಾಗೆ ಪುನೀತ್ 'ಲವ್ ಟ್ರೇನಿಂಗ್']


Watch Kannada Movie Rudra Tandava trailer

ಆಕ್ಷನ್ ಮಧ್ಯೆ ಪ್ರೇಕ್ಷಕರನ್ನ ರಿಲ್ಯಾಕ್ಸ್ ಮಾಡುವುದಕ್ಕೆ ಚಿಕ್ಕಣ್ಣ ಕಾಮಿಡಿ ಕಚಗುಳಿ ಇಡುತ್ತಾರೆ. 'ಮದರಂಗಿ' ಕೃಷ್ಣ, ಕುಮಾರ್ ಗೋವಿಂದ್, ಗಿರೀಶ್ ಕಾರ್ನಾಡ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಕೂಡ ಇದೆ.


ವಿ.ಹರಿಕೃಷ್ಣ ಸಂಗೀತ ಈಗಾಗ್ಲೇ ಕನ್ನಡಾಭಿಮಾನಿಗಳ ಮನಗೆದ್ದಿದೆ. ತಮಿಳಿನ 'ಪಾಂಡಿಯ ನಾಡು' ಚಿತ್ರದ ರೀಮೇಕ್ ಆದರೂ, ಕನ್ನಡ ನೇಟಿವಿಟಿಗೆ ತಕ್ಕಂತೆ ನಿರ್ದೇಶಕ ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳಿದ್ದಾರೆ. ['ರುದ್ರತಾಂಡವ' ಟ್ರೇಲರ್ ಗೆ ಮಾರುಹೋದ ತಮಿಳು ನಟ]


ಕಾಲಿವುಡ್ ನಟ ವಿಶಾಲ್ ಭೇಷ್ ಅಂದಿರುವ 'ರುದ್ರತಾಂಡವ' ಚಿತ್ರದ ಟ್ರೇಲರ್ ಗೆ ಚಿರು ಫ್ಯಾನ್ಸ್ ಬೌಲ್ಡ್ ಆಗಿದ್ದಾರೆ. ಸದ್ಯದಲ್ಲೇ 'ರುದ್ರತಾಂಡವ' ತೆರೆಮೇಲೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Chiranjeevi Sarja and Radhika Kumaraswamy starrer Kannada Movie Rudra Tandava trailer is out.
Please Wait while comments are loading...

Kannada Photos

Go to : More Photos