»   » 'ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ' ಟ್ರೈಲರ್ ಸೂಪರ್ ಕಣ್ರೀ

'ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ' ಟ್ರೈಲರ್ ಸೂಪರ್ ಕಣ್ರೀ

Posted by:
Subscribe to Filmibeat Kannada

ನಿರ್ದೇಶಕ ಸುನಿ ಅವರು ಆಕ್ಷನ್-ಕಟ್ ಹೇಳಿದ್ದ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾ ಬರೀ ಡೈಲಾಗ್ ಗಳಿಂದ ಭಾರಿ ಫೇಮಸ್ ಆಗಿ ಸಿನಿಮಾ ಸೂಪರ್ ಹಿಟ್ ಆಗುವುದರ ಜೊತೆಗೆ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಶ್ವೇತಾ ಶ್ರೀವಾತ್ಸವ್ ಅವರಿಗೆ ಬ್ರೇಕ್ ಕೂಡ ನೀಡಿತ್ತು.

ಇದೀಗ ಅದೇ ಸುನಿ ಮತ್ತೆ 'ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ' ಅಂತ ಪ್ರೀತಿ-ಪ್ರೇಮದ ಕಥೆ ಹೇಳಲು ಹೊರಟಿದ್ದಾರೆ. ಅಂದಹಾಗೆ ಈ ಬಾರಿ ಲವ್ ಸ್ಟೋರಿಯಲ್ಲಿ ಇರುವ ಹಿರೋ-ಹೀರೋಯಿನ್ ನಟ ಪ್ರವೀಣ್ ಮತ್ತು ನಟಿ ಮೇಘನಾ ಗಾಂವ್ಕರ್.

Watch Kannada Movie 'Simple Aaginnond Love Story' Official Trailer

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ 'ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಸಖತ್ ಸೂಪರ್ ಆಗಿದೆ. ಇಲ್ಲೂ ಡೈಲಾಗ್ ಗಳ ಸುರಿಮಳೆಯೇ ಇದ್ದು, ಪ್ರೇಕ್ಷಕರಿಗೆ ಹೊಸ ಅನುಭವ ಕೊಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

'ರಾಧಾ ಕಲ್ಯಾಣ' ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದ ಅಶು ಬೆದ್ರ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಚಾರ್ ಮಿನಾರ್' ಸಿನಿಮಾದ ನಂತರ ನಟಿ ಮೇಘನಾ ಗಾಂವ್ಕರ್ ಅವರು ಮತ್ತೆ ಬಬ್ಲಿ ಬಬ್ಲಿ ಆಗಿ ನಟಿಸಿದ್ದಾರೆ.

ಚಿತ್ರದ ಟ್ರೈಲರ್ ನಲ್ಲಿ ನಿರ್ದೇಶಕ ಸುನಿ ಅವರ ಮೊದಲ ಸಿನಿಮಾ 'ಸಿಂಪಲ್ ಲವ್ ಸ್ಟೋರಿ'ಯಲ್ಲಿ ನಟಿಸಿದ್ದ ನಟಿ ಶ್ವೇತಾ ಶ್ರೀವಾತ್ಸವ್ ಅವರ ಕಾಲೆಳೆದಿದ್ದು, ಸಖತ್ ಕ್ಯೂಟ್ ಆಗಿದೆ.

Watch Kannada Movie 'Simple Aaginnond Love Story' Official Trailer

ಇನ್ನು ಚಿತ್ರದ ಟ್ರೈಲರ್ ಬಗ್ಗೆ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಾಕಿಕೊಂಡಿದ್ದು, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಂಗೀತ ನಿರ್ದೇಶಕ ಬಿ.ಜೆ ಭರತ್ ಅವರ ಮ್ಯೂಸಿಕ್ ಕಂಪೋಸಿಷನ್ ನಲ್ಲಿ ಮೂಡಿ ಬಂದಿರುವ ಹಾಡುಗಳು ಸೂಪರ್ ಹಿಟ್ ಆಗಿದೆ. 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟ ಪ್ರವೀಣ್ ಮತ್ತು ನಟಿ ಮೇಘನಾ ಗಾಂವ್ಕರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ' ಚಿತ್ರದ ಟ್ರೈಲರ್ ನ ಝಲಕ್ ಇಲ್ಲಿದೆ ನೋಡಿ...

English summary
Watch Simple Aaginnond Love Story Official Trailer, starring Praveen, Meghana Gaonkar and others. Directed by Suni. Music composed by Bharath BJ & Sai Kiran.
Please Wait while comments are loading...

Kannada Photos

Go to : More Photos