»   » ಜಬರ್ದಸ್ತ್ ಟೀಸರ್ ನಲ್ಲಿ ದರ್ಶನ್ ನ, 'ವಿರಾಟ್' ದರ್ಶನ

ಜಬರ್ದಸ್ತ್ ಟೀಸರ್ ನಲ್ಲಿ ದರ್ಶನ್ ನ, 'ವಿರಾಟ್' ದರ್ಶನ

Posted by:
Subscribe to Filmibeat Kannada

ಬ್ಲಾಕ್ ಬಸ್ಟರ್ ಹಿಟ್ 'ಸಾರಥಿ' ಸಿನಿಮಾದ ನಂತರ ತೆರೆಗೆ ಬರಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಸಿನಿಮಾ ಶೂಟಿಂಗ್ ಆರಂಭಿಸಿ ತುಂಬಾ ದಿನಗಳೇ ಆಯಿತು.

ಸುಮಾರು ಕೋಟಿಗಟ್ಟಲೆ ಬಂಡವಾಳ ಸುರಿದು ಮಾಡುತ್ತಿರುವ ದರ್ಶನ್ ಅವರ 'ವಿರಾಟ್' ಸಿನಿಮಾಕ್ಕೆ ನಿರ್ದೇಶಕ ಹೆಚ್ ವಾಸು ಅವರು ಆಕ್ಷನ್-ಕಟ್ ಹೇಳಿದ್ದಾರೆ.

Watch Kannada Movie 'Viraat' Official Teaser

ಇದೀಗ ಸದ್ಯಕ್ಕೆ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸತಾಯಿಸುವುದನ್ನು ನಿಲ್ಲಿಸಿ ಕೊನೆಗೂ 'ವಿರಾಟ್' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಸಖತ್ ಸ್ಟೈಲಿಷ್ ಲುಕ್ ನಲ್ಲಿ ಮಿಂಚಿರುವ ದರ್ಶನ್ ಅವರು ಟೀಸರ್ ನಲ್ಲಿ ಹೈಲೈಟ್ ಆಗುತ್ತಾರೆ.[ದರ್ಶನ್ 'ವಿರಾಟ್' ಚಿತ್ರಕ್ಕೆ ಕಡೆಗೂ ಕೂಡಿಬಂತು ಗಳಿಗೆ]

'Mr ಐರಾವತ' ಚಿತ್ರದ ನಂತರ ಮತ್ತೊಮ್ಮೆ ದರ್ಶನ್ ಅವರು 'ವಿರಾಟ್' ಚಿತ್ರದ ಮೂಲಕ ಭರ್ಜರಿ ಆಕ್ಷನ್-ಫೈಟ್ ಜೊತೆಗೆ ಸ್ಯೈಲಿಷ್ ಲುಕ್ ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

Watch Kannada Movie 'Viraat' Official Teaser

ಅಂದಹಾಗೆ ದರ್ಶನ್ ಅವರು ಮೂವರು ನಾಯಕಿಯರಾದ ವಿದಿಷಾ ಶ್ರೀವಾತ್ಸವ್, ಇಷಾ ಚಾವ್ಲಾ ಮತ್ತು ಚೈತ್ರಾ ಚಂದ್ರನಾಥ್ ಎಂಬ ಮೂರು ಸುಂದರಿಯರ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ನಿರ್ಮಾಪಕ ಸಿ ಕಲ್ಯಾಣ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಚಿತ್ರದ ಜಬರ್ದಸ್ತ್ ಟೀಸರ್ ನ ಝಲಕ್ ಇಲ್ಲಿದೆ ನೋಡಿ..

Watch Kannada Movie 'Viraat' Official Teaser

English summary
Watch Kannada Movie 'Viraat' Official Teaser, starring Darshan, Vidhisha Srivatsav, Isha Chawla, Chaitra Chandranath and others. Directed by H.Vasu. Music Composed by V. Harikrishna.
Please Wait while comments are loading...

Kannada Photos

Go to : More Photos