»   » ಟ್ರೈಲರ್: 'ಜಾಗ್ವಾರ್'...ದಿ ಕಿಲ್ಲರ್ ಅಬ್ಬರ ಬೊಂಬಾಟ್ ಗುರು

ಟ್ರೈಲರ್: 'ಜಾಗ್ವಾರ್'...ದಿ ಕಿಲ್ಲರ್ ಅಬ್ಬರ ಬೊಂಬಾಟ್ ಗುರು

Posted by:
Subscribe to Filmibeat Kannada

ಬಹುಶಃ ಇಷ್ಟು ಗ್ರ್ಯಾಂಡ್ ಲಾಂಚ್ ಕನ್ನಡದ ಯಾವ ಸ್ಟಾರ್ ಗಾಗಲಿ, ಸ್ಟಾರ್ ಪುತ್ರರಿಗಾಗಲಿ ಇದುವರೆಗೂ ಸಿಕ್ಕಿಲ್ಲ. ಅಷ್ಟು ವಿಜೃಂಭಣೆಯಿಂದ ತಮ್ಮ ಪುತ್ರ ನಿಖಿಲ್ ಕುಮಾರ್ ರನ್ನ ಸ್ಯಾಂಡಲ್ ವುಡ್ ಗೆ ಪರಿಚಯ ಮಾಡುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಕಮ್ ನಿರ್ಮಾಪಕ ಎಚ್.ಡಿ.ಕುಮಾರಸ್ವಾಮಿ.

ನಿಖಿಲ್ ಕುಮಾರ್ ರವರ ಚೊಚ್ಚಲ ಸಿನಿಮಾ 'ಜಾಗ್ವಾರ್' ಮುಹೂರ್ತ ಸಮಾರಂಭ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಅದ್ಧೂರಿ ಆಗಿ ನಡೆದಿತ್ತು. ಈಗ 'ಜಾಗ್ವಾರ್' ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಮಂಡ್ಯದಲ್ಲಿ ನೆರವೇರಿದೆ. ['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಿನ್ನೆ (ಸೆಪ್ಟೆಂಬರ್ 2) ನಡೆದ 'ಜಾಗ್ವಾರ್' ಧ್ವನಿಸುರುಳಿ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿ ಆಗಿದ್ದರು. ಮುಂದೆ ಓದಿ....


ಹೇಗಿದೆ 'ಜಾಗ್ವಾರ್' ಟ್ರೈಲರ್.?

ಹೇಗಿದೆ 'ಜಾಗ್ವಾರ್' ಟ್ರೈಲರ್.?

ಬಹು ನಿರೀಕ್ಷಿತ 'ಜಾಗ್ವಾರ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ನಲ್ಲಿ ನಿಖಿಲ್ ಕುಮಾರ್ ಅಕ್ಷರಶಃ ಜಾಗ್ವಾರ್ ನಂತೆ ಘರ್ಜಿಸಿದ್ದಾರೆ. [ಆಡಿಯೋ ರಿಲೀಸ್ ಮೊದಲೇ 'ಜಾಗ್ವಾರ್' ಹಾಡು ಔಟ್ ಆಯ್ತು, ಒಮ್ಮೆ ಕೇಳ್ಬಿಡಿ..]


ಮೇನ್ ಹೈಲೈಟ್ ಸ್ಟಂಟ್.!

ಮೇನ್ ಹೈಲೈಟ್ ಸ್ಟಂಟ್.!

ಇದೀಗ ಬಿಡುಗಡೆ ಆಗಿರುವ 'ಜಾಗ್ವಾರ್' ಚಿತ್ರದ ಟ್ರೈಲರ್ ನ ಮೇನ್ ಹೈಲೈಟ್ ಅಂದ್ರೆ ನಿಖಿಲ್ ಕುಮಾರ್ ಮಾಡಿರುವ ಮೈನವಿರೇಳಿಸುವ ಸ್ಟಂಟ್ಸ್ ಮತ್ತು ಆಕ್ಷನ್ ಸೀಕ್ವೆನ್ಸ್. [ಓಹೋ.! 'ಜಾಗ್ವಾರ್' ನಿರ್ಮಾಪಕರ ತಲೆಯಲ್ಲಿ ಇವ್ರೂ ಇದ್ದಾರೆ.!]


'ಜಾಗ್ವಾರ್' ನಿಖಿಲ್ ಕುಮಾರ್ 'ಕಿಲ್ಲರ್'?

'ಜಾಗ್ವಾರ್' ನಿಖಿಲ್ ಕುಮಾರ್ 'ಕಿಲ್ಲರ್'?

'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ 'ಕಿಲ್ಲರ್' ಆಗಿ ಅಭಿನಯಿಸಿದ್ದಾರಾ? ಈ ಪ್ರಶ್ನೆ ಟ್ರೈಲರ್ ನೋಡಿದ ಎಲ್ಲರ ತಲೆಯಲ್ಲಿ ಮೂಡುವುದು ಸಹಜ.


ಎರಡು ಶೇಡ್ ನಲ್ಲಿ ನಿಖಿಲ್.!

ಎರಡು ಶೇಡ್ ನಲ್ಲಿ ನಿಖಿಲ್.!

ಒಮ್ಮೆ ಬ್ಯಾಟ್ ಮ್ಯಾನ್ ಅವತಾರದಲ್ಲಿ ಕಾಣಿಸಿಕೊಂಡು ಸೂಪರ್ ಸ್ಟಂಟ್ಸ್ ಮಾಡುವ ನಿಖಿಲ್, ಇನ್ನೊಮ್ಮೆ ಡಾಕ್ಟರ್ ಆಗಿ ಮಿಂಚುತ್ತಾರೆ.


ನಿಖಿಲ್ ಸ್ಟೈಲ್ ಸೂಪರ್

ನಿಖಿಲ್ ಸ್ಟೈಲ್ ಸೂಪರ್

ವಾಯ್ಸ್ ನಲ್ಲಿ ಸ್ವಲ್ಪ ಇಂಪ್ರೂವ್ ಆಗ್ಬೇಕು ಅನ್ನೋದು ಬಿಟ್ಟರೆ, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಸ್ಟೈಲ್ ನಲ್ಲಿ ನಿಖಿಲ್ ಕುಮಾರ್ ಸೂಪರ್.


ಸಾಧು ಕೋಕಿಲ ಕಾಮಿಡಿ ಪಂಚ್

ಸಾಧು ಕೋಕಿಲ ಕಾಮಿಡಿ ಪಂಚ್

ಮನರಂಜನೆಗಾಗಿ ಎಲ್ಲಾ ಮಸಾಲೆ ಮಿಕ್ಸ್ ಆಗಿರುವ 'ಜಾಗ್ವಾರ್' ಚಿತ್ರದಲ್ಲಿ ಕಾಮಿಡಿ ಹೂರಣ ನೀಡಲು ಸಾಧು ಕೋಕಿಲ ಇದ್ದಾರೆ.


ದೊಡ್ಡ ಕಲಾವಿದರ ದಂಡು

ದೊಡ್ಡ ಕಲಾವಿದರ ದಂಡು

ಜಗಪತಿ ಬಾಬು, ರಮ್ಯಾಕೃಷ್ಣ ಕೂಡ ಮುಖ್ಯಭೂಮಿಕೆಯಲ್ಲಿ ಇರುವುದು 'ಜಾಗ್ವಾರ್' ಚಿತ್ರದ ಮೇಲಿರುವ ನಿರೀಕ್ಷೆ ಡಬಲ್ ಆಗುವಂತೆ ಮಾಡಿದೆ.


ರೊಮ್ಯಾನ್ಸ್ ಇದೆ

ರೊಮ್ಯಾನ್ಸ್ ಇದೆ

ಆಕ್ಷನ್, ಕಾಮಿಡಿ ಜೊತೆ 'ಜಾಗ್ವಾರ್' ಚಿತ್ರದಲ್ಲಿ ರೊಮ್ಯಾನ್ಸ್ ಕೂಡ ಹೈಲೈಟ್. ದೀಪ್ತಿ ಸತಿ ಜೊತೆ ನಿಖಿಲ್ ಕುಮಾರ್ ಕೆಮಿಸ್ಟ್ರಿ ವರ್ಕ್ ಆಗಿದೆ ಎಂಬುದಕ್ಕೆ ಟ್ರೈಲರ್ ಸಾಕ್ಷಿ.


ಲಿಪ್ ಲಾಕ್ ಸೀನ್ ಇದೆ

ಲಿಪ್ ಲಾಕ್ ಸೀನ್ ಇದೆ

'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ತುಟಿಗೆ ದೀಪ್ತಿ ಸತಿ ತುಟಿ ಒತ್ತಿರುವ ಸೀನ್ ಕೂಡ ಇದೆ.!


ಮಹಾದೇವ್ ನಿರ್ದೇಶನ

ಮಹಾದೇವ್ ನಿರ್ದೇಶನ

ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗಿರುವ 'ಜಾಗ್ವಾರ್' ಚಿತ್ರಕ್ಕೆ ಎಸ್.ಎಸ್.ರಾಜಮೌಳಿ ಶಿಷ್ಯ ಮಹಾದೇವ್ ಆಕ್ಷನ್ ಕಟ್ ಹೇಳಿದ್ರೆ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.


ಅಕ್ಟೋಬರ್ ಗೆ ಚಿತ್ರ ಬಿಡುಗಡೆ

ಅಕ್ಟೋಬರ್ ಗೆ ಚಿತ್ರ ಬಿಡುಗಡೆ

ಚೆನ್ನಾಂಬಿಕ ಬ್ಯಾನರ್ ಮೂಲಕ ಅನಿತಾ ಕುಮಾರಸ್ವಾಮಿ ನಿರ್ಮಿಸಿರುವ 'ಜಾಗ್ವಾರ್' ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆ ಆಗಲಿದೆ.


ಟ್ರೈಲರ್ ನೋಡಿ

ಟ್ರೈಲರ್ ನೋಡಿ

'ಜಾಗ್ವಾರ್' ಚಿತ್ರದ ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....


English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. The Action trailer of 'Jaguar' is out. Watch the video here.
Please Wait while comments are loading...

Kannada Photos

Go to : More Photos