»   » ತಮ್ಮ ಮನದನ್ನೆ 'ಪ್ರಿಯಾಂಕ' ಬಗ್ಗೆ ರಿಯಲ್ ಉಪ್ಪಿ ಏನಂದ್ರು?

ತಮ್ಮ ಮನದನ್ನೆ 'ಪ್ರಿಯಾಂಕ' ಬಗ್ಗೆ ರಿಯಲ್ ಉಪ್ಪಿ ಏನಂದ್ರು?

Posted by:
Subscribe to Filmibeat Kannada

ಬೆಂಗಾಲಿ ಬೆಡಗಿ ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಮತ್ತು 'ಒಗ್ಗರಣೆ' ಸಿನಿಮಾ ಖ್ಯಾತಿಯ ನಟ ತೇಜಸ್ ನಟಿಸಿರುವ ನಿಜ ಜೀವನ ಕಥೆಯಾಧರಿತ ಸಿನಿಮಾ 'ಪ್ರಿಯಾಂಕ' ಫೆಬ್ರವರಿ 5ಕ್ಕೆ ತೆರೆ ಕಾಣಲಿದೆ.

ನಿರ್ದೇಶಕ ದಿನೇಶ್ ಬಾಬು ಆಕ್ಷನ್-ಕಟ್ ಹೇಳಿರುವ ಈ ಸಿನಿಮಾ ಟ್ರೈಲರ್ ಮೂಲಕ ಭಾರಿ ಕುತೂಹಲ ಸೃಷ್ಟಿಸಿದೆ. ಮಾತ್ರವಲ್ಲದೇ, ಚಿತ್ರ ಬಿಡುಗಡೆಗೆ ಮುಂಚೆಯೇ ಈ ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಗೆ ಆಯ್ಕೆ ಆಗಿದೆ.[ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಯಲ್ಲಿರುವ ಕನ್ನಡ ಚಿತ್ರಗಳ ಲಿಸ್ಟ್]ಇನ್ನು ಈ ಸಿನಿಮಾವನ್ನು ಈಗಾಗಲೇ ವೀಕ್ಷಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ ಅವರ 'ಪ್ರಿಯಾಂಕ' ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.


'ನಮಸ್ಕಾರ 'ಪ್ರಿಯಾಂಕ' ಈ ಚಿತ್ರದ ಹೆಸರು. ಈ ಚಿತ್ರವನ್ನು ನಿರ್ಮಾಣ ಮಾಡಿರೋದು 'ಬುದ್ದಿವಂತ' ಚಿತ್ರ ಮಾಡಿದ ನಿರ್ಮಾಪಕ ಮೋಹನ್ ಅವರು, ದಿನೇಶ್ ಬಾಬು ಅವರ ನಿರ್ದೇಶನದಲ್ಲಿ'.


'ಈ ಸಿನಿಮಾದಲ್ಲಿ ಇದು ಬಹಳ ವೈರೈಟಿ ವಿಷಯ, ಒಂದು ರಿಯಲ್ ಕಥೆಯನ್ನು ಇಟ್ಟುಕೊಂಡು ಅದರ ಆಧಾರದಲ್ಲಿ ಮಾಡಿರುವ ಸಿನಿಮಾ. ನಿಮಗೆ ಗೊತ್ತಿರೋ ಹಾಗೆ ಪ್ರಪಂಚಾನೇ ಸ್ಮಾರ್ಟ್ ಫೋನ್ ನಲ್ಲಿದೆ. ಅಂದ್ರೆ ಸೋಷಿಯಲ್ ಮಿಡಿಯಾ, ಟ್ವಿಟ್ಟರ್, ವ್ಯಾಟ್ಸಾಪ್ ಹೀಗೆ ಬಹಳ ಇದೆ'.['ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ]'ಇದು ಒಳ್ಳೆದಕ್ಕೆ ಬಳಸಿದ್ರೆ ಬಹಳ ಒಳ್ಳೆಯದು, ಅದನ್ನೇ ಸ್ವಲ್ಪ ಬೇರೆ ರೀತಿಯಲ್ಲಿ ಬಳಸಿಕೊಂಡ್ರೆ ಹೇಗಿರುತ್ತೆ. ಈಗಿನ ಯಂಗ್ ಜನರೇಶನ್ ಇದು ಸಮಸ್ಯೆ ಆಗ್ತಾ ಇದೆ. ಇದರಿಂದ ಒಬ್ಬ ಗೃಹಿಣಿ ಅದರಿಂದ ಏನೆಲ್ಲಾ ತೊಂದರೆಗಳನ್ನು ಅನುಭವಿಸ್ತಾಳೆ, ಅನ್ನೋ ವಿಷಯ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ'.['ಓ ಮೈ ಗಾಡ್' ಕಿಚ್ಚ-ಉಪ್ಪಿ ಚಿತ್ರದ ಟೈಟಲ್ ಮತ್ತೆ ಬದಲಾಯಿತಾ?]


'ನಾನು ಈ ಚಿತ್ರ ನೋಡಿದ್ದೇನೆ, ತುಂಬಾ ಇಷ್ಟ ಆಗಿದೆ, ನೋಡಿದವರಿಗೆಲ್ಲಾ ಇಷ್ಟ ಆಗಿದೆ. ಒಳ್ಳೆ ಸಾಂಗ್ ಇದೆ. ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿದೆ. ನೀವೂ ಈ ಚಿತ್ರ ನೋಡಿ. ಬರೀ ನೋಡೋದಲ್ಲ ಬೇರೆಯವರಿಗೂ ಈ ಚಿತ್ರದ ಬಗ್ಗೆ ಹೇಳಿ ಈ ಸಿನಿಮಾವನ್ನ ದೊಡ್ಡ ಹಿಟ್ ಮಾಡ್ಬೇಕು. ನಮ್ಮ ಬುದ್ದಿವಂತ ಮೋಹನ್ ಅವರನ್ನು ಗೆಲ್ಲಿಸಿ. ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರದ ಬಗ್ಗೆ ಒಂದಿಷ್ಟು ಮಾತಾಡಿದ್ದಾರೆ.


'ಪ್ರಿಯಾಂಕ' ಚಿತ್ರ ನೋಡಿದ ಉಪ್ಪಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದನ್ನು ಅವರ ಬಾಯಿಂದಲೇ ಕೇಳಿ....


Watch Priyanka Movie Review From Real Star Upendra

English summary
Watch Priyanka Movie Review From Real Star Upendra. Kannada Actress Priyanka Upendra and Actor Tejus in the lead role. The movie is directed by Dinesh Baboo.
Please Wait while comments are loading...

Kannada Photos

Go to : More Photos