»   » ಆರ್ಯನ್ ವಿಡಿಯೋ; ರಮ್ಯಾ-ಶಿವರಾಜ್ ಸಕತ್ ಸ್ಟೆಪ್ಸ್

ಆರ್ಯನ್ ವಿಡಿಯೋ; ರಮ್ಯಾ-ಶಿವರಾಜ್ ಸಕತ್ ಸ್ಟೆಪ್ಸ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಲಕ್ಕಿ ಸ್ಟಾರ್ ರಮ್ಯಾ ಮತ್ತೊಮ್ಮೆ ಮಂಡ್ಯ ಜನರ ಕಷ್ಟ ಸುಖಗಳನ್ನು ವಿಚಾರಿಸೋಕೆ ಹೋಗಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಬಂದ ಕೂಡಲೇ ಆರ್ಯನ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಟ್ವಿಟ್ಟರ್ ನಲ್ಲಿ ಅಪ್ದೇಡ್ಸ್ ನೀಡುತ್ತಿದ್ದಾರೆ.

ಚುನಾವಣೆ ಕಥೆ ಮುಗಿದಾಯ್ತು ರಮ್ಯಾ ಇನ್ಯಾವಾಗ ಬಣ್ಣ ಹಚ್ಚುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಕುತೂಹಲ ತಣಿದಿದೆ. ಶಿವರಾಜ್ ಕುಮಾರ್ ಅಭಿನಯದ ಆರ್ಯನ್ ಚಿತ್ರದ ಡಬ್ಬಿಂಗ್ ನಲ್ಲಿ ಪಾಲ್ಗೊಂಡ ಬಗ್ಗೆ ರಮ್ಯಾ ಟ್ವೀಟ್ ಮಾಡಿದ್ದು, ಚಿತ್ರದ ವಿಡಿಯೋ ಸಾಂಗ್ಸ್ ನೋಡಿ ಆನಂದಿಸಿ ಎಂದಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅವರ ಪಾಲಿಗೆ ಕಹಿ ನೆನಪುಗಳನ್ನು ಉಳಿಸಿದೆ. ಈಗ ಇದೇ ಜೋಡಿ 'ಆರ್ಯನ್' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಪುನೀತ್ ರಾಜ್ ಕುಮಾರ್ ಹಾಡಿರುವ ಆರ್ಯನ್ ಚಿತ್ರದ 'ಕನ್ನಡ ಮಣ್ಣಿನ..' ಸಾಂಗ್ ನಲ್ಲಿ ಶಿವಣ್ಣ-ರಮ್ಯಾ ಸಕತ್ ಸ್ಟೆಪ್ ಹಾಕಿದ್ದಾರೆ. ಹಾಡಿನ ವಿಡಿಯೋ ತುಣುಕು, ಇಬ್ಬರ ಗೆಟ್ ಅಪ್ ಚಿತ್ರಗಳು ಇಲ್ಲಿವೆ ಕಣ್ತುಂಬಿಸಿಕೊಳ್ಳಿ

ಎಲ್ಲಾ ರೀತಿಯಲ್ಲೂ ವಿಶೇಷ ಚಿತ್ರ
  

ಎಲ್ಲಾ ರೀತಿಯಲ್ಲೂ ವಿಶೇಷ ಚಿತ್ರ

* ಖ್ಯಾತ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶಿಸಿದ ಕಟ್ಟಕಡೆಯ ಈ ಚಿತ್ರ ಇದಾಗಿದೆ.
* ಇದೇ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ರೀಡಾ ತರಬೇತುದಾರನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದಲ್ಲಿ ಅವರದು ಅಥ್ಲೀಟ್ ಕೋಚ್ ಪಾತ್ರ.
* ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ಬಳಿಕ ಗುರುದತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರ ಹೆಸರಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಲಾಗಿದೆ.
* ಚುನಾವಣೆ ಸೋಲಿನ ನಂತರ ರಮ್ಯಾ ಅವರ ಕಮ್ ಬ್ಯಾಕ್ ಚಿತ್ರ ಇದಾಗಿದ್ದು, ಚಿತ್ರದ ಯಶಸ್ಸಿನ ಮೇಲೆ ಸಿನಿ ಭವಿಷ್ಯ ನಿಂತಿದೆ.

ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರ
  

ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರ

ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.

ಚುನಾವಣೆಯಲ್ಲಿ ಸೋಲಿನ ಬಗ್ಗೆ ರಮ್ಯಾ ಮಾತು
  

ಚುನಾವಣೆಯಲ್ಲಿ ಸೋಲಿನ ಬಗ್ಗೆ ರಮ್ಯಾ ಮಾತು

ಚುನಾವಣೆಯಲ್ಲಿ ಸೋಲು ರಾಜಕೀಯ ಬದುಕನ್ನು ಕಲಿಸಿದೆ. ಸೋಲು-ಗೆಲುವು ಜೀವನದ ಎರಡು ಮುಖಗಳು. ಸೋತೆ ಎಂಬ ಕಾರಣಕ್ಕೆ ನಾನು ಮಂಡ್ಯದ ಜನತೆಯನ್ನು ಮರೆಯುವುದಿಲ್ಲ. ಮಂಡ್ಯ ಜನತೆಯ ಸೇವೆ ಮಾಡಲು ನಾನು ಸದಾ ಸಿದ್ಧ.ರಾಜಕೀಯದಿಂದ ದೂರವಾಗೋದಿಲ್ಲ ಎಂದು ರಮ್ಯ ಹೇಳಿದ್ದಾರೆ.

ಮಂಡ್ಯದಲ್ಲಿ ಶಿವಣ್ಣ 'ಬೆಳ್ಳಿ' ಚಿತ್ರದಲ್ಲಿ ಬ್ಯುಸಿ
  

ಮಂಡ್ಯದಲ್ಲಿ ಶಿವಣ್ಣ 'ಬೆಳ್ಳಿ' ಚಿತ್ರದಲ್ಲಿ ಬ್ಯುಸಿ

ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸುತ್ತಿರುವ 'ಬೆಳ್ಳಿ' ಚಿತ್ರಕ್ಕೆ ಮಂಡ್ಯದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮಹೇಶ್(ಮುಸ್ಸಂಜೆಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ.[ವಿವರ ಇಲ್ಲಿದೆ]

ಇಬ್ಬರದ್ದು ಸಕತ್ ಲುಕ್, ಸಕತ್ ಡ್ಯಾನ್ಸ್
  

ಇಬ್ಬರದ್ದು ಸಕತ್ ಲುಕ್, ಸಕತ್ ಡ್ಯಾನ್ಸ್

ಪುನೀತ್ ರಾಜ್ ಕುಮಾರ್ ಹಿನ್ನೆಲೆ ಧ್ವನಿಯಿರುವ ಕನ್ನಡ ಮಣ್ಣಿನ ಹಾಡಿನಲ್ಲಿ ರಮ್ಯಾ ಹಾಗೂ ಶಿವರಾಜ್ ಕುಮಾರ್ ಅವರ ಉಡುಗೆ, ಡ್ಯಾನ್ಸ್ ಸ್ಟೆಪ್ಸ್ ಸಕತ್ತಾಗಿದೆ. ಕಲರ್ ಕಾಂಬಿನೇಷನ್, ಫಾರೀನ್ ಲೊಕೆಷನ್ ನಲ್ಲಿ ಇಬ್ಬರು ಮಸ್ತಾಗಿ ಕುಣಿದಿದ್ದಾರೆ.

  

ರಮ್ಯಾ ಅವರು ಟ್ವೀಟ್ ಮಾಡಿದ್ದು ಹೀಗೆ

ಲಕ್ಕಿ ಸ್ಟಾರ್ ರಮ್ಯಾ ಆರ್ಯನ್ ವಿಡಿಯೋ ಬಗ್ಗೆ ರಮ್ಯಾ ಅವರು ಟ್ವೀಟ್ ಮಾಡಿದ್ದು ಹೀಗೆ

  

ರಮ್ಯಾ ಶಿವಣ್ಣ ಆರ್ಯನ್ ವಿಡಿಯೋ

ಲಕ್ಕಿ ಸ್ಟಾರ್ ರಮ್ಯಾ ಸೆಂಚುರಿ ಸ್ಟಾರ್ ಶಿವಣ್ಣ ಆರ್ಯನ್ ವಿಡಿಯೋ ನೋಡಿ

English summary
Check out the Golden Girl Ramya and Hat Trick Hero Shivrajkumar starring 'Aryan' movie song video. Jassie Gift is the music director and Chandrashekar is the cinematographer of the film and Puneeth Rajkumar is the playback singer for Kannada mannina song
Please Wait while comments are loading...

Kannada Photos

Go to : More Photos