»   » ಸಲ್ಲೂ 'ಕಿಕ್' ಆಯ್ತು ಈಗ ಉಪ್ಪಿ 'ಕಿಕ್' ನೋಡಿ

ಸಲ್ಲೂ 'ಕಿಕ್' ಆಯ್ತು ಈಗ ಉಪ್ಪಿ 'ಕಿಕ್' ನೋಡಿ

Posted by:
Subscribe to Filmibeat Kannada

ತೆಲುಗಿನ ಕಿಕ್ ಚಿತ್ರ ಹಿಂದಿಯಲ್ಲಿ ಕಿಕ್ ಹೊಡೆದು ಈಗ ಕನ್ನಡದಲ್ಲಿ ತೆರೆ ಕಾಣಲು ಸಜ್ಜಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ರಿಮೇಕ್ ಸ್ಟಾರ್ ಆಗಿ ಕಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಂತದ ಗೊಂಬೆ ಕೃತಿ ಖರಬಂದ ಅವರು ಉಪ್ಪಿ ಜೊತೆ ಜೋಡಿಯಾಗಿ ಕುಣಿದಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆ.18ರಂದು ಉಪ್ಪಿ ಹುಟ್ಟುಹಬ್ಬಕ್ಕೆ 'ಸೂಪರ್ ರಂಗ' ಬಿಡುಗಡೆ ಮಾಡಲು ನಿರ್ಮಾಪಕ ಕೆ. ಮಂಜು ಸಿದ್ಧರಾಗಿದ್ದಾರೆ.

ಉಪೇಂದ್ರ ಅವರ ಎರಡು ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ. ಶ್ರೀನಿವಾಸ ರಾಜು ನಿರ್ದೇಶನದ ಸಿ.ಆರ್ ಮನೋಹರ್ ನಿರ್ಮಾಣದ 'ಬಸವಣ್ಣ' ಚಿತ್ರ ಹಾಗೂ ಕೆ.ಮಂಜು ನಿರ್ಮಾಣದ, ಸಾಧು ಕೋಕಿಲ ನಿರ್ದೇಶನದ ಸೂಪರ್ ರಂಗ ಎರಡೂ ಚಿತ್ರಗಳು ಸೆ.18ಕ್ಕೆ ತೆರೆಗೆ ಬರಲು ಪೈಪೋಟಿ ನಡೆಸಿವೆಯಂತೆ. ಈ ಪೈಕಿ ಸೂಪರ್ ರಂಗ ಮೊದಲು ತೆರೆ ಕಾಣುವ ಸಾಧ್ಯತೆ ಹೆಚ್ಚಿದೆ.[ಸಲ್ಮಾನ್ ಖಾನ್ 'ಕಿಕ್' ಪೈಸಾ ವಸೂಲ್]

ಯುರೋಪಿನಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಿರುವ ಸಾಧು ಅವರ ಚಿತ್ರತಂಡ ಮಿಕ್ಕಂತೆ ತೆಲುಗಿನ ಮೂಲ ಚಿತ್ರಕ್ಕೆ ಧಕ್ಕೆ ಬರದಂತೆ ಭಟ್ಟಿ ಇಳಿಸಿದೆಯಂತೆ. ಇದು ಟ್ರೇಲರ್ ನಲ್ಲೂ ಎದ್ದುಕಾಣುತ್ತದೆ. ಚಿತ್ರದ ವಿಡಿಯೋಗಳು, ತಾರಾಗಣ ಮುಂತಾದ ವಿವರ ಮುಂದೆ ನೋಡಿ...

ಚಿತ್ರದಲ್ಲಿ ಭರ್ಜರಿ ತಾರಾಗಣ

ಚಿತ್ರದಲ್ಲಿ ಭರ್ಜರಿ ತಾರಾಗಣ

ಉಪೇಂದ್ರ ಅವರ ಜೋಡಿಯಾಗಿ ಕೃತಿ ಖರಬಂದ ನಟಿಸುತ್ತಿದ್ದಾರೆ. ಪ್ರಿಯಾಂಕಾ ರಾವ್ ಎಂಬ ಹೊಸ ಬೆಡಗಿ ಕೂಡಾ ಚಿತ್ರದಲ್ಲಿದ್ದಾಳೆ. ರಘು ಮುಖರ್ಜಿ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಲಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಬುಲೆಟ್ ಪ್ರಕಾಶ್, ದಯಾನಂದ್ ತಾರಾಗಣದಲ್ಲಿದ್ದಾರೆ. ಅಶೋಕ್ ಕಶ್ಯಪ್ ಫೋಟೋಗ್ರಾಫಿ, ಅರ್ಜುನ್ ಜನ್ಯ್ ಸಂಗೀತ ಚಿತ್ರಕ್ಕಿದೆ.

ನಿರ್ಮಾಪಕ ಕೆ ಮಂಜು ಹೇಳಿಕೆ

ನಿರ್ಮಾಪಕ ಕೆ ಮಂಜು ಹೇಳಿಕೆ

ತಮಿಳು ಹಾಗೂ ಹಿಂದಿಯಲ್ಲಿ ಕಿಕ್ ಚಿತ್ರದ ರಿಮೇಕ್ ಭರ್ಜರಿ ಯಶಸ್ಸು ಕಾಣಲು ಕಾರಣ ಚಿತ್ರದಲ್ಲಿ ಉತ್ತಮ ಕಥೆ ಹಾಗೂ ಸಂದೇಶವಿದೆ. ಕನ್ನಡದಲ್ಲಿ ಉಪ್ಪಿ ಅವರ ನಟನೆ ಮೂಲಕ ಜನಮೆಚ್ಚುಗೆ ಗಳಿಸುವ ವಿಶ್ವಾಸವಿದೆ ಎಂದರು.

ನಾನು 37 ಫಿಲಂ ನಿರ್ಮಿಸಿದ ಅನುಭವಿದೆ. ನನಗೆ ಸೂಪರ್ ರಂಗ ಚಿತ್ರ ಗೆಲುವಿನ ಬಗ್ಗೆ ಅಪಾರ ವಿಶ್ವಾಸವಿದೆ ಎಂದು ಹೇಳಿದರು.

ಚಿತ್ರದ ಟ್ರೇಲರ್ ನೋಡಿ

ಕನ್ನಡದ ಕಿಕ್ ಸೂಪರ್ ರಂಗ ಚಿತ್ರದ ಟ್ರೇಲರ್ ನೋಡಿ

ಚಿತ್ರದ ಬಜೆಟ್ ಏನೋ ಕಡಿಮೆ ಇಲ್ಲ

ಚಿತ್ರದ ಬಜೆಟ್ ಏನೋ ಕಡಿಮೆ ಇಲ್ಲ

ರಿಮೇಕ್ ಚಿತ್ರವಾದರೂ ಕೆ ಮಂಜು ಭರ್ಜರಿಯಾಗಿ ಹಣ ಸುರಿದಿದ್ದಾರೆ. ಸ್ಲೊವೇನಿಯಾಕ್ಕೆ ಕರೆದೊಯ್ದು ಹಾಡಿನ ಚಿತ್ರೀಕರಣ ಮಾಡಿಸಿದ್ದಾರೆ. 9 ಕೋಟಿ ರು ವೆಚ್ಚದಲ್ಲಿ ಚಿತ್ರ ತಯಾರಾಗಿದೆ ಎಂಬ ಸುದ್ದಿಯಿದೆ. ಹಾಡೊಂದರಲ್ಲಿ 25 ಬೇರೆ ಬೇರೆ ಡ್ರೆಸ್ ಧರಿಸುವ ಉಪ್ಪಿ ಹಾಗೂ ಕೃತಿಗಾಗಿ 15 ಲಕ್ಷ ಹೆಚ್ಚುವರಿ ವೆಚ್ಚ ಕೂಡಾ ಇದರಲ್ಲಿ ಸೇರಿದೆ.

rn

ಡ್ಯಾನ್ಸ್ ರಾಜ ಡ್ಯಾನ್ಸ್

ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಬಂದಿರುವ ಉಪ್ಪಿ ಹಾಡಿರುವ ಡ್ಯಾನ್ಸ್ ರಾಜ ಡ್ಯಾನ್ಸ್

ಸಾಧು ಹಾಗೂ ಉಪ್ಪಿ ಕಾಂಬಿನೇಷನ್

ಸಾಧು ಹಾಗೂ ಉಪ್ಪಿ ಕಾಂಬಿನೇಷನ್

ಸಾಧು ಹಾಗೂ ಉಪ್ಪಿ ಕಾಂಬಿನೇಷನ್ ನಲ್ಲಿ ಈ ಮುಂಚೆ ರಕ್ತ ಕಣ್ಣೀರು ಹಾಗೂ ಅನಾಥರು ಚಿತ್ರಗಳು ಬಂದಿತ್ತು ಎರಡೂ ರಿಮೇಕ್ ಚಿತ್ರಗಳಾಗಿದ್ದು ಜನ ಮೆಚ್ಚುಗೆ ಗಳಿಸಿತ್ತು. ಈಗ ಮತ್ತೊಮ್ಮೆ ಇದೇ ಕಾಂಬಿನೇಷನ್ ಮೋಡಿ ಮಾಡಲು ಬರುತ್ತಿದೆ.

ಚಿತ್ರದ ಟೀಸರ್ ನೋಡಿ

ಸೂಪರ್ ರಂಗ ಚಿತ್ರದ ಟೀಸರ್ ನೋಡಿ

English summary
Watch the Trailer of "SUPER RANGA" Starring Upendra and Kriti Kharbanda and others. This remake movie directed by Sadhu Kokila, produced by K Manju. K. Manju plan to release on Upendra’s birthday on September 18.
Please Wait while comments are loading...

Kannada Photos

Go to : More Photos