»   » ಯಾರ್ರೀ ಹೇಳಿದ್ದು 'ದಾಸ' ದರ್ಶನ್ ಗೆ ಇಂಗ್ಲೀಷ್ ಬರಲ್ಲ ಅಂತ.?!

ಯಾರ್ರೀ ಹೇಳಿದ್ದು 'ದಾಸ' ದರ್ಶನ್ ಗೆ ಇಂಗ್ಲೀಷ್ ಬರಲ್ಲ ಅಂತ.?!

Posted by:
Subscribe to Filmibeat Kannada

''ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂಗ್ಲೀಷ್ ಬರಲ್ಲ. ಮೊಬೈಲ್ ಫೋನ್ ಆಪರೇಟ್ ಮಾಡಲು ಕಲಿತಿಲ್ಲ. ಫೋನ್ ಆನ್ ಮತ್ತು ಆಫ್ ಮಾಡುವುದು ಮಾತ್ರ ಗೊತ್ತು. ಇನ್ನು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವುದು ಮತ್ತು ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡುವುದು ದೂರದ ಮಾತು!'' - ಹೀಗೆನ್ನುವ ಅನೇಕ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಾಲದಕ್ಕೆ ದರ್ಶನ್ ರವರನ್ನ ಹತ್ತಿರದಿಂದ ಬಲ್ಲವರೇ, ''ದರ್ಶನ್ ಗೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಸಲು ಬರಲ್ಲ'' ಅಂತ ಹೇಳಿರುವುದರಿಂದ ಎಲ್ಲರ ತಲೆಗೆ ಹುಳ ಬಿಟ್ಟಂಗಾಗಿದೆ.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಹಾಗಾದ್ರೆ, ದರ್ಶನ್ ಗೆ ಇಂಗ್ಲೀಷ್ ಬರಲ್ವಾ.? ಸಾಮಾಜಿಕ ಜಾಲತಾಣಗಳನ್ನ ಬಳಸಲು ದರ್ಶನ್ ಗೆ ಗೊತ್ತಿಲ್ವಾ.? ಈ ಎಲ್ಲ ಅನುಮಾನಗಳಿಗೆ ಉತ್ತರ ಇಲ್ಲಿದೆ ನೋಡಿ....

ದರ್ಶನ್ ಗೆ ಇಂಗ್ಲೀಷ್ ಬರಲ್ವಾ.?

ದರ್ಶನ್ ಗೆ ಇಂಗ್ಲೀಷ್ ಬರಲ್ವಾ.?

ದರ್ಶನ್ ಗೆ ಇಂಗ್ಲೀಷ್ ಬರಲ್ಲ ಅಂತ ಯಾರೂ ಬೆಟ್ಟು ಮಾಡುವ ಹಾಗೇ ಇಲ್ಲ. ಯಾಕಂದ್ರೆ, ದರ್ಶನ್ ಸರಾಗವಾಗಿ ಇಂಗ್ಲೀಷ್ ಮಾತನಾಡುತ್ತಾರೆ.

ಬೇಕಾದ್ರೆ, ಈ ವಿಡಿಯೋ ನೋಡಿ....

ಬೇಕಾದ್ರೆ, ಈ ವಿಡಿಯೋ ನೋಡಿ....

'ದರ್ಶನ್ ಗೆ ಇಂಗ್ಲೀಷ್ ಬರಲ್ಲ' ಅಂತ ನುಡಿಯುವವರು ಮೊದಲು ಈ ವಿಡಿಯೋ ನೋಡಿ... (ಇಲ್ಲಿ ಕ್ಲಿಕ್ ಮಾಡಿ) ನಿಮಗೆ ಅಚ್ಚರಿ ಆಗುವುದರಲ್ಲಿ ಸಂದೇಹವೇ ಇಲ್ಲ.

ಹೇಗಿದೆ ದರ್ಶನ್ ರವರ ಇಂಗ್ಲೀಷ್ ಪದಪುಂಜ?

ಹೇಗಿದೆ ದರ್ಶನ್ ರವರ ಇಂಗ್ಲೀಷ್ ಪದಪುಂಜ?

ವಿಡಿಯೋ ನೋಡಿದ್ಮೇಲೆ ನಿಮಗೆ ಖಾತ್ರಿ ಆಗಿರಬೇಕಲ್ವಾ... ದರ್ಶನ್ ಗೆ ಇಂಗ್ಲೀಷ್ ಬರುತ್ತೆ ಅಂತ.! ಇನ್ಮೇಲೆ ಇಂಗ್ಲೀಷ್ ನಲ್ಲಿ ದರ್ಶನ್ ಟ್ವೀಟ್ ಮಾಡಿದ್ರೆ, ಅನುಮಾನ ಪಡುವ ಪ್ರಮೇಯವೇ ಬೇಡ.

ದರ್ಶನ್ ಗೆ ಟ್ವಿಟ್ಟರ್/ಫೇಸ್ ಬುಕ್ ಬಳಸಲು ಗೊತ್ತಿಲ್ವಾ.?

ದರ್ಶನ್ ಗೆ ಟ್ವಿಟ್ಟರ್/ಫೇಸ್ ಬುಕ್ ಬಳಸಲು ಗೊತ್ತಿಲ್ವಾ.?

ದರ್ಶನ್ ಗೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಸಲು ಬರಲ್ಲ ಅಂತ ಯಾರೇ ಗುಮಾನಿ ವ್ಯಕ್ತಪಡಿಸಿದರೂ, ಸ್ವತಃ ದರ್ಶನ್ ರವರೇ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ''ಇದು ನನ್ನ ಖಾತೆ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ಆಲೋಚಿಸಿಯೇ, ನಾನು ಹೇಳಲು ಬಯಸುವ ವೇದಿಕೆ'' ಅಂತ ಹೇಳಿಕೊಂಡಿದ್ದಾರೆ. ಹಾಗಿದ್ಮೇಲೆ ಸುಮ್ಮನೆ ಅನುಮಾನ ಯಾಕೆ.?

ಇಷ್ಟೆಲ್ಲ ಡೌಟ್ ಮೂಡಲು ಕಾರಣ.?

ಇಷ್ಟೆಲ್ಲ ಡೌಟ್ ಮೂಡಲು ಕಾರಣ.?

ಅಷ್ಟಕ್ಕೂ ದರ್ಶನ್ ಬಗ್ಗೆ ಇಷ್ಟೆಲ್ಲ ಡೌಟ್ ಮೂಡಲು ಕಾರಣ ಮಾರ್ಚ್ 5 ರಂದು ದಿಢೀರ್ ಅಂತ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಅಕೌಂಟ್ ನಲ್ಲಿ ದರ್ಶನ್ ರವರಿಂದ ಸಿಡಿದ ಬಾಂಬ್ ಗಳು.

ಮೊದಲು ಟ್ವೀಟ್ ಮಾಡಿದ್ದು ಇಂಗ್ಲೀಷ್ ನಲ್ಲಿ.!

ಮೊದಲು ಟ್ವೀಟ್ ಮಾಡಿದ್ದು ಇಂಗ್ಲೀಷ್ ನಲ್ಲಿ.!

''ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ'' ಎಂಬ ಅರ್ಥ ಬರುವ ಹಾಗೆ ಇಂಗ್ಲೀಷ್ ನಲ್ಲಿ (Me & Sudeep aren't Friends Anymore. We are just Actors working for Kannada Industry. No more speculations please. That's the end of it.) ದರ್ಶನ್ ಮಾಡಿದ ಟ್ವೀಟ್ ಈ ಎಲ್ಲ ಅನುಮಾನಗಳಿಗೆ ಕಾರಣ ಆಯ್ತು. [ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

English summary
Kannada Actor Challenging Star Darshan knows to speak English. Watch the Video.
Please Wait while comments are loading...

Kannada Photos

Go to : More Photos