»   » ತಪ್ಪದೆ ವಿಡಿಯೋ ನೋಡಿ: ರಾಜಮೌಳಿಗೆ 'ಕನ್ನಡ' ನೆನಪಿಸಿದ ಕನ್ನಡಿಗರು

ತಪ್ಪದೆ ವಿಡಿಯೋ ನೋಡಿ: ರಾಜಮೌಳಿಗೆ 'ಕನ್ನಡ' ನೆನಪಿಸಿದ ಕನ್ನಡಿಗರು

Written by: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರ್ನಾಟಕದ ಎಲ್ಲ ಪತ್ರಿಕಾ, ಮಾಧ್ಯಮ ಮಿತ್ರರ ಫೋನ್ ಗೆ 'ಬಾಹುಬಲಿ-2' ನಿರ್ದೇಶಕ ಎಸ್.ಎಸ್.ರಾಜಮೌಳಿ ಕಡೆಯಿಂದ ಒಂದು ವಿಡಿಯೋ ಸಂದೇಶ ಬಂತು.

ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿರುವ ತಮಿಳು ನಟ ಸತ್ಯರಾಜ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಕನ್ನಡಿಗರ ಆಕ್ರೋಶದ ಜ್ವಾಲೆ ದೂರದ ತೆಲುಗು ಅಂಗಳಕ್ಕೂ ಮುಟ್ಟಿದೆ ಎನ್ನುವುದಕ್ಕೆ ರಾಜಮೌಳಿ ಮಾತನಾಡಿರುವ ಆ ವಿಡಿಯೋ ಸಾಕ್ಷಿ.['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

ಕರ್ನಾಟಕದ ರಾಯಚೂರಿನಲ್ಲಿ ಹುಟ್ಟಿ, ಇಂದು ಟಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಇವತ್ತು 'ಕನ್ನಡ' ಭಾಷೆಯಲ್ಲಿ ಕನ್ನಡಿಗರ ಬಳಿ 'ಆ' ವಿಡಿಯೋ ಮೂಲಕ ಒಂದು ಮನವಿ ಮಾಡಿಕೊಂಡಿದ್ದಾರೆ. ಆ ಮನವಿ ಏನು ಅಂತ ಅವರ ಮಾತುಗಳಲ್ಲಿಯೇ ಓದಿರಿ....

'ನನಗೆ ಕನ್ನಡ ಸರಿಯಾಗಿ ಬರಲ್ಲ'

'ನನಗೆ ಕನ್ನಡ ಸರಿಯಾಗಿ ಬರಲ್ಲ'

''ಎಲ್ಲರಿಗೂ ನಮಸ್ಕಾರ... ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಏನಾದರೂ ತಪ್ಪು ಮಾತನಾಡಿದರೆ, ದಯವಿಟ್ಟು ಮನ್ನಿಸಬೇಕು. ಸತ್ಯರಾಜ್ ಅವರ ವಿವಾದದ ಬಗ್ಗೆ ನಾನು ಮತ್ತು 'ಬಾಹುಬಲಿ' ನಿರ್ಮಾಪಕರು ಒಂದು ಕ್ಲಾರಿಫಿಕೇಷನ್ ನಿಮಗೆ ಕೊಡಬೇಕು ಎಂದು ಆಸೆ ಪಡುತ್ತಿದ್ದೇವೆ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ [ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?]

ನಮಗೂ ಅದಕ್ಕೂ ಸಂಬಂಧ ಇಲ್ಲ

ನಮಗೂ ಅದಕ್ಕೂ ಸಂಬಂಧ ಇಲ್ಲ

''ಕೆಲವು ವರ್ಷಗಳ ಹಿಂದೆ ಅವರು (ಸತ್ಯರಾಜ್) ಮಾಡಿರುವ ಕಾಮೆಂಟ್ಸ್ ನಿಮ್ಮಲ್ಲಿ ಅನೇಕರ ಮನಸ್ಸಿಗೆ ನೋವು ತಂದಿದೆ. ಆದ್ರೆ, ಆ ಕಾಮೆಂಟ್ಸ್ ಗೂ ನಮಗೂ ಯಾವುದೇ ರೀತಿಯಲ್ಲಿ ಸಂಬಂಧ ಇಲ್ಲ. ಅದು ಕೇವಲ ಸತ್ಯರಾಜ್ ಅವರ ವೈಯುಕ್ತಿಕ ಅಭಿಪ್ರಾಯ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ [ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]

ವಿಷಯವೇ ಗೊತ್ತಿರಲಿಲ್ಲ.!

ವಿಷಯವೇ ಗೊತ್ತಿರಲಿಲ್ಲ.!

''ಒಂದು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡುವ ತನಕ ನಮಗೆ ಈ ವಿಷಯವೇ ಗೊತ್ತಿರಲಿಲ್ಲ. ಸತ್ಯರಾಜ್ ಈ ಕಾಮೆಂಟ್ ಮಾಡಿ ಒಂಬತ್ತು ವರ್ಷ ಆಗಿದೆ. ಆಮೇಲೆ ಅವರು ನಟಿಸಿ, ನಿರ್ಮಿಸಿದ ಎಷ್ಟೋ ಚಿತ್ರಗಳು ಕರ್ನಾಟಕದಲ್ಲಿ ರಿಲೀಸ್ ಆಗಿದೆ. 'ಬಾಹುಬಲಿ' ಪಾರ್ಟ್ 1 ಕೂಡ ರಿಲೀಸ್ ಆಗಿದೆ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ

'ಬಾಹುಬಲಿ-2'ಗೂ ಸಹಕರಿಸಿ

'ಬಾಹುಬಲಿ-2'ಗೂ ಸಹಕರಿಸಿ

''ಅದಕ್ಕೆಲ್ಲ ನೀವು ಹೇಗೆ ಸಪೋರ್ಟ್ ಮಾಡಿದ್ದೀರೋ.. ಅದೇ ರೀತಿ 'ಬಾಹುಬಲಿ' ಪಾರ್ಟ್ 2 ಚಿತ್ರಕ್ಕೂ ಸಪೋರ್ಟ್ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇನೆ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ [ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]

ಸತ್ಯರಾಜ್ ಗೆ ಯಾವ ನಷ್ಟವೂ ಆಗಲ್ಲ

ಸತ್ಯರಾಜ್ ಗೆ ಯಾವ ನಷ್ಟವೂ ಆಗಲ್ಲ

''ಸತ್ಯರಾಜ್ ಅವರು 'ಬಾಹುಬಲಿ' ಚಿತ್ರಕ್ಕೆ ನಿರ್ದೇಶಕರೂ ಅಲ್ಲ, ನಿರ್ಮಾಪಕರೂ ಅಲ್ಲ. 'ಬಾಹುಬಲಿ' ಚಿತ್ರದಲ್ಲಿ ನಟಿಸಿರುವ ಅನೇಕ ಆರ್ಟಿಸ್ಟ್ ಗಳಲ್ಲಿ ಅವರೂ ಒಬ್ಬರು. ಈ ಸಿನಿಮಾ ನಿಲ್ಲಿಸಿಬಿಟ್ಟರೆ, ಅವರಿಗೆ ಯಾವ ನಷ್ಟವೂ ಇಲ್ಲ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ ['ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು]

ಇದು ಸರಿ ಅಲ್ಲ

ಇದು ಸರಿ ಅಲ್ಲ

''ಅವರೊಬ್ಬರು ಮಾಡಿರುವ ಕಾಮೆಂಟ್ಸ್ ನಿಂದ 'ಬಾಹುಬಲಿ' ಚಿತ್ರದ ಮೇಲೆ ಸಿಟ್ಟು ತೋರಿಸುವುದು ಸರಿ ಇಲ್ಲ. ಈ ವಿಷಯದ ಬಗ್ಗೆ ಸತ್ಯರಾಜ್ ಅವರಿಗೆ ಫೋನ್ ಮಾಡಿ ತಿಳಿಸಿದ್ದೇವೆ. ಅದರ ಮೇಲೆ ಬೇರೇನೂ ಮಾಡಲು ನಮಗೆ ಶಕ್ತಿ ಇಲ್ಲ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ

ನಿಮ್ಮ ಪ್ರೀತಿ ನಮ್ಮ ಮೇಲೆ ಇರಲಿ

ನಿಮ್ಮ ಪ್ರೀತಿ ನಮ್ಮ ಮೇಲೆ ಇರಲಿ

''ನಮಗೆ ಸಂಬಂಧ ಅಲ್ಲದೇ ಇರುವ ಈ ವಿವಾದಕ್ಕೆ, ನಮ್ಮನ್ನ ಎಳೆಯಬೇಡಿ ಎಂದು ಮತ್ತೊಮ್ಮೆ ಎಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಬೇಕೆಂಬುದು ನಮ್ಮ ಆಸೆ. ಹೃದಯಪೂರ್ವಕ ಧನ್ಯವಾದಗಳು. ನಮಸ್ಕಾರ'' - ಎಸ್.ಎಸ್.ರಾಜಮೌಳಿ, 'ಬಾಹುಬಲಿ-2' ನಿರ್ದೇಶಕ

ವಿಡಿಯೋ ನೋಡಿ

ವಿಡಿಯೋ ನೋಡಿ

ಇಂದು ಕನ್ನಡಿಗರಲ್ಲಿ ಎಸ್.ಎಸ್.ರಾಜಮೌಳಿ ಮನವಿ ಮಾಡಿರುವ ವಿಡಿಯೋ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ, ನೋಡಿ....

English summary
'Satyaraj's comments are personal' says Rajamouli in a video.
Please Wait while comments are loading...

Kannada Photos

Go to : More Photos