»   » ಶಿವಣ್ಣ ಕೊಟ್ಟ ಏಟಿಗೆ ನಟಿ ಪ್ರೇಮಾ ಗಡಗಡ.!

ಶಿವಣ್ಣ ಕೊಟ್ಟ ಏಟಿಗೆ ನಟಿ ಪ್ರೇಮಾ ಗಡಗಡ.!

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ಓಂ' ಕಳೆದ ವಾರವಷ್ಟೇ 551ನೇ ಬಾರಿ ರೀ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 5.1 ಡಿಜಿಟಲ್ ಸರೌಂಡ್ ಸೌಂಡ್ ನಲ್ಲಿ 'ಓಂ' ಚಿತ್ರವನ್ನ ಕಣ್ತುಂಬಿಕೊಳ್ಳುವುದಕ್ಕೆ ಕನ್ನಡ ಸಿನಿ ಪ್ರಿಯರು ಚಿತ್ರಮಂದಿರಗಳಿಗೆ ಮುಗಿಬೀಳ್ತಿದ್ದಾರೆ.

ತೆರೆಮೇಲೆ 'ಓಂ' ಹೇಗೆ ಮೂಡಿಬಂದಿದೆ ಅನ್ನೋದರ ಬಗ್ಗೆ ನಾವು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ. ಆದ್ರೆ, ಕೆಲ ದೃಶ್ಯಗಳನ್ನ ಸೆರೆ ಹಿಡಿಯುವಾಗ ನಾಯಕ ಶಿವರಾಜ್ ಕುಮಾರ್, ನಾಯಕಿ ಪ್ರೇಮಾಗಾದ ಅನುಭವ ಅನೇಕರಿಗೆ ಗೊತ್ತಿಲ್ಲ.

ತೆರೆ ಮೇಲೆ ಬೌಲ್ಡ್ ಆಗಿ ನಟಿಸಿರುವ ಪ್ರೇಮಾ, ತೆರೆ ಹಿಂದೆ ಬೆಚ್ಚಿಬಿದ್ದು ಜ್ವರದಿಂದ ನರಳಿದ ಪ್ರಸಂಗ 'ಓಂ' ಸಿನಿಮಾ ಮೇಕಿಂಗ್ ಸಮಯದಲ್ಲಿ ನಡೆದಿದೆ. ಅದನ್ನೆಲ್ಲಾ ಖುದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿ.....

ಶಿವಣ್ಣನ ಎಂಟ್ರಿಯಲ್ಲೇ ಪ್ರೇಮಾಗಾದ ಶಾಕ್..!

ಶಿವಣ್ಣನ ಎಂಟ್ರಿಯಲ್ಲೇ ಪ್ರೇಮಾಗಾದ ಶಾಕ್..!

'ಓಂ' ಸಿನಿಮಾದಲ್ಲಿ ಶಿವಣ್ಣನ ಎಂಟ್ರಿ ಸೀನ್ ನೆನಪಿದೆಯಾ. ಪ್ರೇಮಾ ಬರ್ತಡೆ ಸೆಲೆಬ್ರೇಟ್ ಮಾಡುವ ಮುನ್ನ ''ಯಾಕೆ ನನ್ನ ಲವ್ ಮಾಡಲ್ಲ, ನನ್ನಲ್ಲಿ ಏನ್ ಕಮ್ಮಿಯಾಗಿದೆ?'' ಅಂತ ಡೈಲಾಗ್ ಹೊಡೆಯುತ್ತಾ, ಪ್ರೇಮಾ ಕುತ್ತಿಗೆಯನ್ನ ಹಿಡಿದುಕೊಂಡು ಶಿವಣ್ಣ ಹಿಂಸೆ ಕೊಡುವ ಸೀನ್ ಇದೆ. ಈ ಸನ್ನಿವೇಶ ಶೂಟ್ ಮಾಡುವಾಗ ಶಿವಣ್ಣ ಅದೆಷ್ಟು ಆವೇಶ ಭರಿತರಾಗಿದ್ದರು ಅಂದ್ರೆ, ಪ್ರೇಮಾ ಕುತ್ತಿಗೆಯಲ್ಲಿ ಶಿವಣ್ಣನ ಕೈಬೆರಳು ಮತ್ತು ಉಗುರಿನ ಮಾರ್ಕ್ ಗಳು ಅಚ್ಚಾಗಿದ್ದವು..! [ಶಿವಣ್ಣನ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ]

ಶಿವಣ್ಣ ಕೊಟ್ಟ ಏಟಿಗೆ ಪ್ರೇಮಾ ಗಡಗಡ..!

ಶಿವಣ್ಣ ಕೊಟ್ಟ ಏಟಿಗೆ ಪ್ರೇಮಾ ಗಡಗಡ..!

ಹೋಳಿ ಆಡಿದ ನಂತ್ರ ಪೊಲೀಸ್ ಕಂಪ್ಲೇಂಟ್ ಕೊಡೋಕೆ ಪ್ರೇಮಾ, ತಮ್ಮ ತಂದೆ ಜೊತೆ ಫಿಯೆಟ್ ಕಾರ್ ನಲ್ಲಿ ಹೊರಡುತ್ತಾರೆ. ಕಾರನ್ನ ಅಡ್ಡ ಹಾಕಿ ದೂರು ನೀಡಬಾರದು ಅಂತ ಕಾರಿನ ಗಾಜನ್ನ ಶಿವಣ್ಣ ಪುಡಿ ಪುಡಿ ಮಾಡ್ತಾರೆ. ಕಾರಿನ ಗಾಜನ್ನ ಒಡೆಯುವ ಸಂದರ್ಭದಲ್ಲಿ ಪ್ರೇಮಾ ಕಾರ್ ಒಳಗೆ ಕೂತಿರ್ತಾರೆ. ಆಗ ಶಿವಣ್ಣ ಕೊಟ್ಟ ಏಟಿಗೆ ಬೆಚ್ಚಿಬಿದ್ದ ಪ್ರೇಮಾ, ಎರಡು ದಿನ ಜ್ವರದಿಂದ ಏಳೋದೇ ಇಲ್ಲ. [551ನೇ ಬಾರಿ ರೀ ರಿಲೀಸ್ ಆಗುತ್ತಿದೆ ಬ್ಲಾಕ್ ಬಸ್ಟರ್ 'ಓಂ']

ರಿಯಲ್ಲಾಗಿ ಕೈ ಕೂಯ್ದುಕೊಂಡಿದ್ದ ಪ್ರೇಮಾ

ರಿಯಲ್ಲಾಗಿ ಕೈ ಕೂಯ್ದುಕೊಂಡಿದ್ದ ಪ್ರೇಮಾ

'ಕೋಮಾ...ಪ್ರೇಮಾ..' ಹಾಡಿಗೂ ಮುನ್ನ ತನ್ನ ಮಾತನ್ನ ಶಿವಣ್ಣ ಕೇಳ್ಬೇಕು ಅಂತ ಬ್ಲೇಡ್ ನಲ್ಲಿ ಪ್ರೇಮಾ ಕೈ ಕೂಯ್ದುಕೊಳ್ಳುತ್ತಾರೆ. ಇದು 'ರೀಲ್' ಸೀನ್ ಅಷ್ಟೇ ಅಂತ ನೀವು ಅಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. ಯಾಕಂದ್ರೆ, ಸೀನ್ ನ್ಯಾಚುರಲ್ ಆಗಿ ಬರ್ಲಿ ಅಂತ ಪ್ರೇಮಾ, ಬ್ಲೇಡ್ ನಿಂದ ಕೈಯನ್ನ ಕೂಯ್ದುಕೊಳ್ತಾರೆ. ನಿಜವಾಗಲೂ ರಕ್ತ ಬಂದಿದ್ದನ್ನ ನೋಡಿ ಉಪ್ಪಿ ಮತ್ತು ಶಿವಣ್ಣ ಗಾಬರಿಯಾಗ್ಬಿಟ್ಟಿದ್ದರಂತೆ. [ಹೊಸ ದಾಖಲೆಗೆ 'ಓಂ'ಕಾರ ಹಾಕಿದ ಸೆಂಚುರಿ ಸ್ಟಾರ್]

'ಓಂ' ಚಿತ್ರವನ್ನ ನೋಡಿ ಮೂಕವಿಸ್ಮಿತರಾಗಿದ್ದ ಡಾ.ರಾಜ್..!

'ಓಂ' ಚಿತ್ರವನ್ನ ನೋಡಿ ಮೂಕವಿಸ್ಮಿತರಾಗಿದ್ದ ಡಾ.ರಾಜ್..!

ತಮ್ಮ ಹೋಮ್ ಬ್ಯಾನರ್ ನಲ್ಲಿ ರೆಡಿಯಾಗಿದ್ದ 'ಓಂ' ಚಿತ್ರವನ್ನ ವೀಕ್ಷಿಸಿದ ಡಾ.ರಾಜ್ ಕುಮಾರ್ 'ಸೂಪರ್' ಅನ್ನೋದನ್ನ ಬಿಟ್ರೆ ಬೇರೇನೂ ಹೇಳಲೇ ಇಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಅಣ್ಣಾವ್ರು ಮೂಕವಿಸ್ಮಿತರಾಗಿದ್ದರಂತೆ.

'ಓಂ' ಚಿತ್ರದ ಬಗ್ಗೆ ಶಿವಣ್ಣನ ಮಾತು....

'ಓಂ' ಚಿತ್ರದ ಬಗ್ಗೆ ಶಿವಣ್ಣನ ಮಾತು....

551ನೇ ಬಾರಿ ರೀ ರಿಲೀಸ್ ಆಗಿರುವ ಈ ಸಂದರ್ಭದಲ್ಲಿ, 'ಓಂ' ಚಿತ್ರದ ಮೇಕಿಂಗ್ ನಲ್ಲಾದ ಕೆಲ ಕುತೂಹಲಕಾರಿ ವಿಷಯಗಳನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಅದನ್ನೆಲ್ಲಾ ಈ ವಿಡಿಯೋದಲ್ಲಿ ಕೇಳಿ.

English summary
Hat-trick Hero Shivarajkumar's Blockbuster movie OM has re-released last week. Here is the video of Shivarajkumar sharing his experience in Making of OM. Watch the video.
Please Wait while comments are loading...

Kannada Photos

Go to : More Photos