»   » ಶಿವಣ್ಣ ಮಗಳ ಮದುವೆಗೆ ವಿಶೇಷ ವೆಬ್ ಸೈಟ್ ಆರಂಭ

ಶಿವಣ್ಣ ಮಗಳ ಮದುವೆಗೆ ವಿಶೇಷ ವೆಬ್ ಸೈಟ್ ಆರಂಭ

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ವಿವಾಹ ಮಹೋತ್ಸವ ಇದೇ ತಿಂಗಳ 30-31 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನೆರವೇರಲಿದೆ.

ಶಿವಣ್ಣ ಪುತ್ರಿಯ ಮದುವೆಗೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ಬಹುತೇಕ ಎಲ್ಲಾ ಟಾಪ್ ನಟರು ಬರುವ ಸಾಧ್ಯತೆ ಇದೆ. ಜೊತೆಗೆ ರಾಜ್ಯದ ಜನತೆ ಕೂಡ ತಮ್ಮ ಮಗಳಿಗೆ ಆಶೀರ್ವಾದ ಮಾಡಬೇಕು ಅನ್ನುವ ಆಸೆ ಶಿವಣ್ಣನಿಗಿದೆ. ['ಅಭಿಮಾನಿ ದೇವರು'ಗಳಿಗೆ ಶಿವಣ್ಣನ ಆದರದ ಆಮಂತ್ರಣ]

shivarajkumar

ಯಾವುದೇ ಪಾಸ್ ಇಲ್ಲದೆ, ಎಲ್ಲಾ 'ಅಭಿಮಾನಿ ದೇವರು'ಗಳು ಅರಮನೆ ಮೈದಾನಕ್ಕೆ ಭೇಟಿ ನೀಡಿ ಶಿವಣ್ಣನ ಮಗಳ ಮದುವೆ ವೀಕ್ಷಿಸಬಹುದು. ಇನ್ನೂ, ಬರುವುದಕ್ಕೆ ಸಾಧ್ಯವಾಗದವರು ಬೆರಳ ತುದಿಯಲ್ಲೇ ನಿರುಪಮಾ ವಿವಾಹ ವೀಕ್ಷಿಸಿ, ಹರಸಬಹುದು. [ದೊಡ್ಮನೆ ಮೊಮ್ಮಗಳ ಮದುವೆಯ ಸಂಭ್ರಮದ ಝಲಕ್]

ವೆಬ್ ಸೈಟ್ ಮೂಲಕ ಮಗಳ ಮದುವೆಯನ್ನು ಎಲ್ಲರೂ ನೋಡುವ ಹಾಗೆ, ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ ಶಿವರಾಜ್ ಕುಮಾರ್. shivannamagalamaduve.com ಅನ್ನುವ ವೆಬ್ ಸೈಟ್ ಸಿದ್ದಪಡಿಸಲಾಗಿದ್ದು, ಈ ವೆಬ್ ಸೈಟ್ ಮೂಲಕ ಜನರು ತಮ್ಮ ಶುಭ ಸಂದೇಶಗಳನ್ನ ಹಂಚಿಕೊಳ್ಳಬಹುದು. ಆಗಸ್ಟ್ 30 ರ ಮಧ್ಯಾಹ್ನ ಈ ವೆಬ್ ಸೈಟ್ ಗೆ ಚಾಲನೆ ಸಿಗಲಿದೆ.

English summary
Kannada Actor Shivarajkumar has created a special Website (shivannamagalamaduve.com) for his daughter's marriage. Everyone can watch the marriage on Website and Wish the Couple.
Please Wait while comments are loading...
Best of 2016

Kannada Photos

Go to : More Photos