»   » 'ಜಿಂಕೆಮರಿ' ಖ್ಯಾತಿಯ ಸೋನಿಯಾ ಗೌಡಗೆ ಕಂಕಣಭಾಗ್ಯ

'ಜಿಂಕೆಮರಿ' ಖ್ಯಾತಿಯ ಸೋನಿಯಾ ಗೌಡಗೆ ಕಂಕಣಭಾಗ್ಯ

Written by: ಉದಯರವಿ
Subscribe to Filmibeat Kannada

ಕನ್ನಡ ನಟಿ ಸೋನಿಯಾ ಗೌಡ ಅವರಿಗೆ ಕಂಕಣಬಲ ಕೂಡಿಬಂದಿದೆ. ಜಿಂಕೆಮರಿ, ನಮ್ ದುನಿಯಾ ನಮ್ ಸ್ಟೈಲ್, ಕ್ವಾಟ್ಲೆ ಸತೀಶ ಚಿತ್ರಗಳಲ್ಲಿ ಅಭಿನಯಿಸಿದ್ದ ಸೋನಿಯಾ ಗೌಡ ಅವರ ಮದುವೆ ಇದೇ ಅಕ್ಟೋಬರ್ 26ರಂದು ದಾಂ ದೂಂ ನಡೆಯಲಿದೆ.

ಸೋನಿಯಾ ಗೌಡ ಕೈಹಿಡಿಯುತ್ತಿರುವ ಹುಡುಗ ರಾಹುಲ್ ಕಾಂತರಾಜ್. ಇವರು ಭಾರತದ ಟಾಪ್ ರ್ಯಾಲಿ ಡ್ರೈವರ್ ಆಗಿ ಗುರುತಿಸಿಕೊಂಡಿದ್ದಾರೆ. ಒಬ್ಬ ಕಾಮನ್ ಫ್ರೆಂಡ್ ಮೂಲಕ ಇವರಿಬ್ಬರಿಗೂ ಪರಿಚಯವಾಗಿದೆ. ಈಗ ಮದುವೆ ಮೂಲಕ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

Actress Sonia Gowda

ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಸಂಪೂರ್ಣ ಒಪ್ಪಿಗೆ ಸಿಕ್ಕಿದೆ. ಇದೊಂದು ಅರೇಂಜ್ಡ್ ಮದುವೆಯಾಗಿದ್ದು ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯಲಿದೆ. ಗೌಡ ಸಮುದಾಯದ ಸಂಪ್ರದಾಯದಂತೆ ಮದುವೆಯಾಗುತ್ತಿದ್ದೇನೆ ಎಂದಿದ್ದಾರೆ ಸೋನಿಯಾ ಗೌಡ.

ಆರತಕ್ಷತೆ ಕಾರ್ಯಕ್ರಮಕ್ಕೆ ಗೌನು ತೊಡಲಿದ್ದೇನೆ. ಏಕೆಂದರೆ ಮೊದಲಿನಿಂದಲೂ ನನಗೆ ಕ್ರಿಶ್ಚಿಯನ್ ಮದುವೆಗಳ ತರಹ ಬಿಳಿ ಗೌನು ತೊಟ್ಟು ಮದುವೆಯಾಗಬೇಕೆಂಬ ಕನಸಿತ್ತು. ಅದಕ್ಕಾಗಿ ಬಿಳಿ ಗೌನು ಎನ್ನುತ್ತಾರೆ ಸೋನಿಯಾ. ಮದುವೆ ಬಳಿಕ ದಂಪತಿಗಳು ಯುಎಸ್ ಗೆ ಹಾರಲಿದ್ದಾರೆ ಎಂದು ಸೋನಿಯಾ ಕುಟುಂಬ ಮೂಲಗಳು ತಿಳಿಸಿವೆ.

ಅಮೆರಿಕಾದಲ್ಲಿ ಮೂರು ತಿಂಗಳು ಜಾಲಿಯಾಗಿ ಕಳೆದು ಬಳಿಕ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ ಸೋನಿಯಾ ದಂಪತಿಗಳು. ಮದುವೆ ಬಳಿಕವೂ ಚಿತ್ರಗಳಲ್ಲಿ ಮುಂದುವರಿಯುತ್ತೇನೆ. ಸದ್ಯಕ್ಕೆ ಕನ್ನಡದ 'ಪ್ರೀತಿಯಿಂದ' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದರ ಜೊತೆಗೆ ತಮಿಳು ಚಿತ್ರವೊಂದನ್ನೂ ಒಪ್ಪಿಕೊಂಡಿದ್ದೇನೆ.

ಮುಂದೆ ಕೆಲವು ಬಿಜಿನೆಸ್ ಗಳಲ್ಲೂ ತೊಡಗಿಕೊಳ್ಳಲಿದ್ದೇನೆ ಎನ್ನುವ ನೂತನ ವಧು ಸೋನಿಯಾ ಗೌಡ ಸದ್ಯಕ್ಕೆ ಮದುವೆ ಐಟಂಸ್ ತೆಗೆದುಕೊಳ್ಳುವುದರಲ್ಲಿ ಬಿಜಿಯಾಗಿದ್ದಾರೆ. ಹೊಸ ಬಾಳಿನ ಹೊಸಿಸಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

English summary
Kannada actress Sonia Gowda of Jinkemari, Nam Duniya Nam Style, Kwatle Satisha, is all set to enter wedlock on 26th October. The actress is tying the knot with Rahul Kanthraj, one of India's top rally drivers.
Please Wait while comments are loading...

Kannada Photos

Go to : More Photos