»   » 'ಮಳೆ ಹುಡುಗಿ' ಪೂಜಾ ಗಾಂಧಿ ಮದುವೆ ಫಿಕ್ಸ್ ಆಗಿದೆ: ವರ ಯಾರು.?

'ಮಳೆ ಹುಡುಗಿ' ಪೂಜಾ ಗಾಂಧಿ ಮದುವೆ ಫಿಕ್ಸ್ ಆಗಿದೆ: ವರ ಯಾರು.?

Posted by:
Subscribe to Filmibeat Kannada

'ಮುಂಗಾರು ಮಳೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿ, ನಟಿಯಾಗಿ, ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಪೂಜಾ ಗಾಂಧಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.

ಇದು ಗಾಸಿಪ್ ಸುದ್ದಿ ಇರಬಹುದು ಅಂತ ಮೂಗು ಮುರಿಯಬೇಡಿ. ನಟಿ ಪೂಜಾ ಗಾಂಧಿ ರವರ ಮದುವೆ ಫಿಕ್ಸ್ ಆಗಿರುವುದು 100% ಸತ್ಯ.

ಸ್ವತಃ ಪೂಜಾ ಗಾಂಧಿ ಹೇಳಿಕೊಂಡಿದ್ದಾರೆ.!

ಸ್ವತಃ ಪೂಜಾ ಗಾಂಧಿ ಹೇಳಿಕೊಂಡಿದ್ದಾರೆ.!

ಪೂಜಾ ಗಾಂಧಿ ಮದುವೆ ವಿಚಾರ ಗಾಂಧಿನಗರದ ಅಂಗಳದಿಂದ ಬಂದ ಸುದ್ದಿ ಅಲ್ಲವೇ ಅಲ್ಲ. ''ನನಗೆ ಮದುವೆ ಫಿಕ್ಸ್ ಆಗಿದೆ'' ಅಂತ ಸ್ವತಃ ನಟಿ ಪೂಜಾ ಗಾಂಧಿಯವರೇ ಹೇಳಿಕೊಂಡಿದ್ದಾರೆ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟ ಪೂಜಾ ಗಾಂಧಿ

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟ ಪೂಜಾ ಗಾಂಧಿ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 50ನೇ ದಿನ ವಿಶೇಷ ಅತಿಥಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಹೋದ ಪೂಜಾ ಗಾಂಧಿ, ತಮ್ಮ ಮದುವೆ ವಿಚಾರವನ್ನ ಸ್ಪರ್ಧಿಗಳ ಮುಂದೆ ಬಾಯ್ಬಿಟ್ಟರು.

ಪೂಜಾ ಗಾಂಧಿ ಹೇಳಿದ್ದೇನು.?

ಪೂಜಾ ಗಾಂಧಿ ಹೇಳಿದ್ದೇನು.?

''ನನ್ನ ಮದುವೆ ಫಿಕ್ಸ್ ಆಗಿದೆ. Very shortly I'm getting married. ಎಲ್ಲರನ್ನೂ ಇನ್ವೈಟ್ ಮಾಡ್ತೀನಿ'' ಎಂದರು ನಟಿ ಪೂಜಾ ಗಾಂಧಿ [ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ]

ವರ ಯಾರು.?

ವರ ಯಾರು.?

ಮದುವೆ ಫಿಕ್ಸ್ ಆಗಿದೆ ಅಂತ ನಟಿ ಪೂಜಾ ಗಾಂಧಿ ಹೇಳಿದ್ರೇ ವಿನಃ ವರ ಯಾರು ಎಂಬ ಪ್ರಶ್ನೆಗೆ ತುಟಿ ಬಿಚ್ಚಲಿಲ್ಲ.

ಕೈ ಮೇಲಿದೆ ಹಚ್ಚೆ.!

ಕೈ ಮೇಲಿದೆ ಹಚ್ಚೆ.!

ನಟಿ ಪೂಜಾ ಗಾಂಧಿ ತಮ್ಮ ಬಲಗೈ ಮೇಲೆ (ಪ್ರಶಾಂತ್, ಪೂಜಾ) ಅಂತ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ.

ನಾಲ್ಕು ವರ್ಷದ ಹಿಂದೆ ನಿಶ್ಚಿತಾರ್ಥ ಮುರಿದುಬಿದ್ದಿತ್ತು.!

ನಾಲ್ಕು ವರ್ಷದ ಹಿಂದೆ ನಿಶ್ಚಿತಾರ್ಥ ಮುರಿದುಬಿದ್ದಿತ್ತು.!

2012 ನವೆಂಬರ್ ನಲ್ಲಿ ಉದ್ಯಮಿ ಆನಂದ್ ಗೌಡ ರವರ ಜೊತೆ ನಟಿ ಪೂಜಾ ಗಾಂಧಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. [ನಿಂತುಹೋದ ನಿಶ್ಚಿತಾರ್ಥ: ಪೂಜಾ ಗಾಂಧಿ ಹೇಳಿದ್ದೇನು?]

ಒಂದೇ ತಿಂಗಳಿನಲ್ಲಿ ಮುರಿದುಬಿದ್ದ ನಿಶ್ಚಿತಾರ್ಥ

ಒಂದೇ ತಿಂಗಳಿನಲ್ಲಿ ಮುರಿದುಬಿದ್ದ ನಿಶ್ಚಿತಾರ್ಥ

ಆನಂದ್ ಗೌಡ-ಪೂಜಾ ಗಾಂಧಿ ನಿಶ್ಚಿತಾರ್ಥ ಒಂದೇ ತಿಂಗಳಲ್ಲಿ ಮುರಿದುಬಿದ್ದು ಗಾಂಧಿನಗರದಲ್ಲಿ ಹೊಸ ವಿವಾದ ಭುಗಿಲೆದ್ದಿತ್ತು. ಅಸಲಿಗೆ ನಿಶ್ಚಿತಾರ್ಥ ಮುರಿದು ಬಿದ್ದದ್ದು ಯಾಕೆ? ಎಂಬುದನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ....

ಈಗ ಮದುವೆ ಫಿಕ್ಸ್ ಆಗಿದೆ.!

ಈಗ ಮದುವೆ ಫಿಕ್ಸ್ ಆಗಿದೆ.!

ಕಹಿ ಘಟನೆಗಳನ್ನು ಮರೆತು ಈಗ ಹಸೆಮಣೆ ಏರಲು ನಟಿ ಪೂಜಾ ಗಾಂಧಿ ಸಜ್ಜಾಗಿದ್ದಾರೆ.

English summary
Wedding Bells: Kannada Actress Pooja Gandhi to get married shortly.
Please Wait while comments are loading...

Kannada Photos

Go to : More Photos