»   » 'ವೀಕೆಂಡ್ ಟೆಂಟ್'ನಲ್ಲಿ ಮಗನನ್ನ ನೆನೆದು ಭಾವುಕರಾದ ಪ್ರಕಾಶ್ ರೈ

'ವೀಕೆಂಡ್ ಟೆಂಟ್'ನಲ್ಲಿ ಮಗನನ್ನ ನೆನೆದು ಭಾವುಕರಾದ ಪ್ರಕಾಶ್ ರೈ

Posted by:
Subscribe to Filmibeat Kannada

ಬಹುಭಾಷಾ ನಟ ಪ್ರಕಾಶ್ ರೈಗೆ ಮಕ್ಕಳಂದ್ರೆ ತುಂಬಾ ಇಷ್ಟ. ಅದು ಎಷ್ಟು ಇಷ್ಟವೆಂದರೇ, ತಾವು ಚೊಚ್ಚಲ ಮಗುವಿಗೆ ತಂದೆಯಾಗುತ್ತಿದ್ದೇನೆ ಎಂದು ಗೊತ್ತಾಗುತ್ತಿದ್ದಾಗೆ, ರಸ್ತೆಯಲ್ಲಿ ಕಾರ್ ನಿಲ್ಲಿಸಿ ಟ್ರಾಫಿಕ್ ಜಾಮ್ ಆಗುವಷ್ಟು ಖುಷಿ ಪಟ್ಟಿದ್ದರಂತೆ.

ಆದ್ರೆ, ಪ್ರಕಾಶ್ ರೈ ಅವರ 5 ವರ್ಷದ ಮಗ 'ಸಿದ್ಧಾರ್ಥ್' ತೀರಿಕೊಂಡಾಗ, ಅವರ ಜೀವನದಲ್ಲಿ ಉಂಟಾದ ನೋವು ಮತ್ತೊಂದಿಲ್ಲವಂತೆ. ಈ ಮರೆಯಲಾಗದ ನೆನಪ್ಪನ್ನ 'ವೀಕೆಂಡ್ ವಿತ್ ರಮೇಶ್ 3' ಯಲ್ಲಿ ನಟ ಪ್ರಕಾಶ್ ರೈ ಮಗನನ್ನ ನೆನಪಿಸಿಕೊಂಡು ಭಾವುಕರಾದರು. ಮುಂದೆ ಓದಿ....[ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ]

ಮಗನನ್ನ ಮರೆಯಲು ಆಗಲ್ಲ!

ಮಗನನ್ನ ಮರೆಯಲು ಆಗಲ್ಲ!

''ಮಗ ಸಿದ್ಧಾರ್ಥ್ 5 ವರ್ಷ, ಗಾಳಿಪಟ ಹಾರಿಸುತ್ತಿರುವಾಗ ತೀರಿಕೊಂಡ. ಅವನಿಲ್ಲ ಎನ್ನುವ ನೋವು ಮರೆಯಲು ಆಗಲ್ಲ'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

ನನಗೆ ಒಳ್ಳೆ ಫ್ರೆಂಡ್ ಆಗಿದ್ದ

ನನಗೆ ಒಳ್ಳೆ ಫ್ರೆಂಡ್ ಆಗಿದ್ದ

''ಸಿದ್ಧಾರ್ಥ್ ಒಳ್ಳೆ ಫ್ರೆಂಡ್ ಆಗಿದ್ದ. ಬಟ್ ಅವನು ಕೊಟ್ಟ ಸಂತೋಷ, ಅವನ ಜೊತೆಗಿನ ಗೆಳತನ, ಅವನು ನನ್ನ ಎಷ್ಟೋ ಕ್ಷಣಗಳನ್ನ ಅರ್ಥಪೂರ್ಣ ಮಾಡಿದ್ದಾನೆ'' - ಪ್ರಕಾಶ್ ರೈ, ನಟ[ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?]

ಅದಕ್ಕಿಂತ ನೋವು ಮತ್ತೊಂದಿಲ್ಲ

ಅದಕ್ಕಿಂತ ನೋವು ಮತ್ತೊಂದಿಲ್ಲ

''ಆ ಕ್ಷಣದ ನಂತರ ನನಗೆ ಮತ್ತೊಂದು ದೊಡ್ಡ ನೋವು ಯಾರು ಕೊಡಲು ಸಾಧ್ಯವಿಲ್ಲ. ನೋವು ಮಾತ್ರ. ನೆನಪು ಮಾಡಿಕೊಂಡು ಹೇಳೋದ್ರಲ್ಲಿ ಅರ್ಥವಿಲ್ಲ'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!]

ಮಗನ ಬಗ್ಗೆ ಲಲಿತಾ ಕುಮಾರಿ ಹೇಳಿದ್ದೇನು?

ಮಗನ ಬಗ್ಗೆ ಲಲಿತಾ ಕುಮಾರಿ ಹೇಳಿದ್ದೇನು?

''ಸೂರ್ಯನನ್ನ ನಾವು ಒಟ್ಟಿಗೆ ಕಳೆದುಕೊಂಡ್ವಿ. ಇಬ್ಬರಿಗೂ ಅವನನ್ನ ಕಳೆದುಕೊಂಡ ದುಃಖ ಹಾಗೆಯೇ ಇದೆ. ಆ ಸಮಯದಲ್ಲಿ ನಿಮ್ಮ ಶೂಟಿಂಗ್ ಎಲ್ಲ ಕ್ಯಾನ್ಸಲ್ ಮಾಡಿ ನನ್ನ ಜೊತೆ ಇದ್ರಿ. ನನ್ನಿಂದ ಸೂರ್ಯನ ಮರೆಯೋಕೆ ಆಗ್ತಿರ್ಲಿಲ್ಲ. ಆ ಸಮಯದಲ್ಲಿ ನೀವು ಕೊಟ್ಟಿರುವ ಆತ್ಮವಿಶ್ವಾಸ ನನ್ನನ್ನ ಶಾಂತವಾಗಿಸಿಬಿಟ್ಟಿತ್ತು'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ

English summary
Multilingual Actor Prakash Rai spoke about his Son siddharth in 'Weekend With Ramesh-3'.
Please Wait while comments are loading...

Kannada Photos

Go to : More Photos