»   » ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು

ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು

Posted by:
Subscribe to Filmibeat Kannada

'2016' ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಡಬಲ್ ಧಮಾಕಾ, ಸಕ್ಸಸ್ ಮೇಲೆ ಸಕ್ಸಸ್. ಅವರ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಶಿವಲಿಂಗ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆ ಹಿಟ್ ಆಗಿದೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಶಿವಣ್ಣ ಅವರು ಬಹು ಬೇಡಿಕೆಯ ನಟ.

ಇನ್ನು ಕಳೆದ ವರ್ಷ ಶಿವಣ್ಣ ಅವರ ಸುಮಾರು ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆ ಕಂಡರೂ ಕೂಡ ಅದು ಅಷ್ಟಾಗಿ ಹಿಟ್ ಆಗದೇ ಸೋತು ನೆಲಕಚ್ಚಿದ್ದವು. ಆದರೆ ಈ ವರ್ಷ ಆರಂಭದಿಂದಲೇ ಶಿವಣ್ಣ ಶಿವತಾಂಡವ ಆಡಲು ಶುರು ಹಚ್ಚಿಕೊಂಡಿದ್ದರು.['ನೀತಿ ಸಂಹಿತೆ ಉಲ್ಲಂಘನೆ': ಕೋರ್ಟ್ ಗೆ ಹಾಜರಾದ ಶಿವಣ್ಣ ದಂಪತಿ]

ಹಲವಾರು ಸಿನಿಮಾಗಳು ಸೋತರು ಶಿವರಾಜ್ ಕುಮಾರ್ ಅವರು ಮಾತ್ರ ಚಂದನವನದಲ್ಲಿ ಫುಲ್ ಬ್ಯುಸಿ. ಶಿವಣ್ಣ ಅಭಿನಯದ ಅಷ್ಟೂ ಸಿನಿಮಾಗಳು ಸೋತರೂ, ಸಿನಿಮಾ ನಿರ್ಮಾಪಕರು ಮಾತ್ರ ಅವರ ಹಿಂದೆ ಬೀಳುವುದಕ್ಕೆ ಕಾರಣ ಹಾಗೂ ಶಿವಣ್ಣ ಅವರು ಈಗಲೂ ಬ್ಯುಸಿ ನಟ ಆಗಿರುವುದರ ರಹಸ್ಯ ಏನಾಗಿರಬಹುದು?[ಬಾಲಿವುಡ್ ನಲ್ಲೂ ಸದ್ದು ಮಾಡಲಿದೆಯಾ 'ಶಿವಲಿಂಗ'?]

ಇದಕ್ಕೆ ಶಿವಣ್ಣ ಅವರು ನನಗೂ ಗೊತ್ತಿಲ್ಲ ಅಂತಾರೆ, ಅವರ ಪ್ರಕಾರ 'ನನ್ನ ಸಿನಿಮಾಗಳಿಂದ ನಿರ್ಮಾಪಕರಿಗೆ ಅಷ್ಟು ದೊಡ್ಡ ನಷ್ಟ ಸಂಭವಿಸಿಲ್ಲವೇನೋ, ಒಂದು ವೇಳೆ ಹಾಗಾಗಿದ್ದರೆ, ಯಾರು ನನ್ನ ಜೊತೆಗೆ ಸಿನಿಮಾ ಮಾಡಲು ಮುಂದೆ ಬರುತ್ತಿರಲಿಲ್ಲ. ಆದ್ದರಿಂದ ನನ್ನ ಸಿನಿಮಾ ಸೋತರು ಅವರು ಹಾಕಿದ ಬಂಡವಾಳ ವಾಪಸ್ ಬಂದಿರಬಹುದು. ಅದಕ್ಕೆ ನನ್ನ ಜೊತೆ ಸಿನಿಮಾ ಮಾಡಲು ಮುಂದೆ ಬರುತ್ತಾರೆ'.[ಬಯಲಾಯಿತು ಶಿವಣ್ಣ & ವಾಸು ಅವರ ಮತ್ತೊಂದು ರಹಸ್ಯ]

'ನನ್ನ ಸಿನಿಮಾಗಳಿಂದ ದೊಡ್ಡ ನಷ್ಟ ಆಗಿಲ್ಲ, ಮಿನಿಮಮ್ ಲಾಸ್ ಆಗಿರಬಹುದು. ಆದರೆ ಜೊತೆಗೆ ಟಿವಿ ರೈಟ್ಸ್ ಕೂಡ ಸಿಗುತ್ತದೆ. ಅದೇ ಕಾರಣಕ್ಕೆ ನಿರ್ಮಾಪಕರು ನನ್ನ ಜೊತೆಗೆ ಚಿತ್ರ ಮಾಡುತ್ತಾರೆ'. ಎಂದು ಸೆಂಚುರಿ ಸ್ಟಾರ್ ಶಿವಣ್ಣ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇದು ಮಾತ್ರವಲ್ಲದೇ ಒಂದು ವೇಳೆ ಶಿವಣ್ಣ ಅವರ ಜೊತೆ ಸಿನಿಮಾ ಮಾಡಿದ ನಿರ್ಮಾಪಕರಿಗೆ ಭಯಂಕರ ಲಾಸ್ ಆಗಿದ್ದರೆ, ಅವರ ಬೆಂಬಲಕ್ಕೆ ಶಿವಣ್ಣ ಅವರು ಇರುತ್ತಾರಂತೆ. ಆದರೆ 'ಸುಮ್ಮ ಸುಮ್ಮನೇ ಏನೇನೋ ಕಾರಣಗಳಿಂದ ಸಿನಿಮಾ ನಷ್ಟವಾದರೆ ನಾನು ಜವಾಬ್ದಾರನಲ್ಲ' ಎಂದು ಶಿವಣ್ಣ ನುಡಿಯುತ್ತಾರೆ.[ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?]

ಒಟ್ನಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ, ರಿಯಲ್ ಲೈಫ್ ನಲ್ಲಿ ಸ್ಟಾರ್ ಅನ್ನೋದು ಈ ಮೂಲಕ ತಿಳಿಯುತ್ತದೆ.

    English summary
    What is the reason behind success of Kannada Actor Shiva Rajkumar.
    Please Wait while comments are loading...

    Kannada Photos

    Go to : More Photos