»   » 'ನಿನ್ನಿಂದಲೇ' ಡೈಲಾಗ್ ಗಳ ಇಂಟರೆಸ್ಟಿಂಗ್ ಕಥೆ

'ನಿನ್ನಿಂದಲೇ' ಡೈಲಾಗ್ ಗಳ ಇಂಟರೆಸ್ಟಿಂಗ್ ಕಥೆ

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಎರಿಕಾ ಫರ್ನಾಂಡಿಸ್ ಮುಖ್ಯಭೂಮಿಕೆಯಲ್ಲಿರುವ 'ನಿನ್ನಿಂದಲೇ' ಸಿನಿಮಾ ಶೂಟಿಂಗ್ ಸಮಯದಲ್ಲಿ ಸಿನಿಮಾದ ಸ್ಕ್ರಿಪ್ಟ್ ನೋಡಿದ ಪುನೀತ್ ಗೆ ಇದರಲ್ಲಿ ಇನ್ನೂ ಸ್ಪೆಷಲ್ ಏನಾದರೂ ಬೇಕಿತ್ತು ಅನ್ನಿಸಿದೆ.

ಅದರಲ್ಲೂ ಯೂತ್ ಫುಲ್ ಸಿನಿಮಾ ಆಗಿರೋ 'ನಿನ್ನಿಂದಲೇ' ಚಿತ್ರದಲ್ಲಿ ಇವತ್ತಿನ ಯಂಗ್ ಸ್ಟಾರ್ ಗಳಿಗೆ ಬೇಕಾದ್ದನ್ನ ಕೊಡದಿದ್ರೆ ಹೇಗೆ. ಹಾಗಂತ ಪುನೀತ್ ಒಂದು ಪಾರ್ಟ್ನ ಡೈಲಾಗ್ ಚೇಂಜ್ ಮಾಡೋ ಯೋಚನೆ ಮಾಡಿದ್ದಾರೆ. ಆಗ ಪುನೀತ್ ಕಣ್ಣಿಗೆ ತೋಚಿದ್ದೇ ಈ ನಿರ್ದೇಶಕರಂತೆ. [ನಿನ್ನಿಂದಲೇ ಚಿತ್ರವಿಮರ್ಶೆ]

ಚಿತ್ರದಲ್ಲಿನ ಕೆಲವು ಡೈಲಾಗ್ ಗಲು ಇಲ್ಲಿವೆ ನೋಡಿ...ದೇಶ ಭಾಷೆ ಅಂತ ಬಂದರೆ ಅದನ್ನ ಬಿಟ್ಟುಕೊಡಕ್ಕೆ ಆಗಲ್ಲ....ಆ ದೇಶ ಅಂತ ಹೋದಾಗ ಅಲ್ಲಿ ಅವರ ಥರ ಇರ್ಬೇಕು. ಮನಸು ಇಂಡಿಯನ್ ಆಗಿರ್ಬೇಕು...ಕೆಲಸ ಸಿಗೋಕೆ ಟ್ಯಾಲೆಂಟ್ ಹಾಗೂ ಕಾನ್ಫಿಡೆಂಟ್ ಬೇಕು...ಚಿತ್ರದಲ್ಲಿ ಈ ರೀತಿಯ ಡೈಲಾಗ್ ಗಳು ಸಾಕಷ್ಟಿವೆ. ಸ್ಲೈಡ್ ನಲ್ಲಿ ಇನ್ನಷ್ಟು ವಿವರಗಳು.

ಸುನಿಗೆ ಫೋನ್ ಮಾಡಿದರಂತೆ ಪವರ್ ಸ್ಟಾರ್
  

ಸುನಿಗೆ ಫೋನ್ ಮಾಡಿದರಂತೆ ಪವರ್ ಸ್ಟಾರ್

ಪುನೀತ್ ಕೂಡ್ಲೇ ಫೋನ್ ಮಾಡಿದ್ದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿಗೆ ಅವರಿಗಂತೆ. ನಮ್ ಸಿನಿಮಾದ ಒಂದು ಸೀಕ್ವೆನ್ಸ್ ಗೆ ಡೈಲಾಗ್ ಬೇಕು ಅಂತ ಕೇಳಿದರು ಎಂಬುದು ಸದ್ಯಕ್ಕೆ ಹಬ್ಬಿರುವ ಸುದ್ದಿ.

ಸುನಿಗೆ ಮೊದಲ ಬಾರಿ ಪುನೀತ್ ಫೋನ್
  

ಸುನಿಗೆ ಮೊದಲ ಬಾರಿ ಪುನೀತ್ ಫೋನ್

ಪವರ್ ಸ್ಟಾರ್ ಫೋನ್ ಬಂದಿದ್ದು ನೋಡಿ ಫುಲ್ ಥ್ರಿಲ್ಲಾಗಿ ಹೋದ ಸುನಿ ಕಂಪ್ಲೀಟ್ ಪವರ್ ಚಾರ್ಜ್ ಆಗೋ ಹಾಗೆ ಡೈಲಾಗ್ ಬರೆದುಕೊಟ್ಟಿದ್ದಾರೆ ಎಂಬ ಸುದ್ದಿ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಹತ್ತೇ ನಿಮಿಷದಲ್ಲಿ ಡೈಲಾಗ್ ರೆಡಿಯಂತೆ
  

ಹತ್ತೇ ನಿಮಿಷದಲ್ಲಿ ಡೈಲಾಗ್ ರೆಡಿಯಂತೆ

ಸುನಿಯವರಿಗೆ ಅದೆಲ್ಲಿಂದ ಪವರ್ ಬಂತೋ ಗೊತ್ತಿಲ್ಲ. ಹತ್ತೇ ನಿಮಿಷದಲ್ಲಿ ಕಂಪ್ಲೀಟ್ ಡೈಲಾಗ್ ರೆಡಿಯಾಯ್ತು. ಡೈಲಾಗನ್ನ ಪುನೀತ್ ರಿಗೆ ಕಳಿಸಿದ್ದೂ ಆಯ್ತು ಎಂಬುದು ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ.

ಡೈಲಾಗ್ ನೋಡಿ ಪುನೀತ್ ಫುಲ್ ಖುಷಿಯಂತೆ
  

ಡೈಲಾಗ್ ನೋಡಿ ಪುನೀತ್ ಫುಲ್ ಖುಷಿಯಂತೆ

ಸುನಿ ಡೈಲಾಗ್ ನೋಡಿ ಪುನೀತ್ ಫುಲ್ ಖುಷಿಯಾದ್ರಂತೆ. ಮತ್ತೆ ಪೋನ್ ಮಾಡಿ ಸೂಪರ್ ಸುನಿಯವರೆ ಅಂತ ಹೇಳಿದ್ರಂತೆ ಪುನೀತ್.

ಸಿಂಪಲ್ ಡೈಲಾಗ್ಗಳನ್ನ ನೀವ್ ಕೇಳ್ಬಹುದು
  

ಸಿಂಪಲ್ ಡೈಲಾಗ್ಗಳನ್ನ ನೀವ್ ಕೇಳ್ಬಹುದು

ಹಾಗಾಗಿ ನೀವು ನಿನ್ನಿಂದಲೇ ಸಿನಿಮಾ ನೋಡಿದ್ರೆ ಸಿಂಪ್ಲೀ ಸೂಪರ್ಬ್ ಅನ್ನಿಸೋ ಡೈಲಾಗ್ ಗಳನ್ನೂ ನೋಡ್ಬಹುದು. ಬಹುಶಃ ಅಂತಹ ಡೈಲಾಗ್ ಗಳಿದ್ರೆ, ಇದು ಅಂತಹ ಡೈಲಾಗ್ ಗಳ ಪುನೀತ್ ಮೊದಲ ಸಿನಿಮಾ ಅನ್ನಿಸುತ್ತೆ.

ನಿಜಕ್ಕೂ ಸುನಿ ಅವರೇನಾ ಡೈಲಾಗ್ ಬರೆದದ್ದು?
  

ನಿಜಕ್ಕೂ ಸುನಿ ಅವರೇನಾ ಡೈಲಾಗ್ ಬರೆದದ್ದು?

'ನಿನ್ನಿಂದಲೇ' ಸಿನಿಮಾದಲ್ಲಿನ ಡೈಲಾಗ್ ಗಳು ಹೊಸತನದಿಂದ ಕೂಡಿವೆ. ಆ ಡೈಲಾಗ್ ಗಳನ್ನ ಪವರ್ ಸ್ಟಾರ್ ಹೇಳ್ತಿದ್ರೆ ಥಿಯೇಟರ್ ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣೀತಿದ್ದಾರೆ.

English summary
Who wrote dialogues for Power Star Puneeth Rajkumar & Erica Fernadise lead Kannada movie 'Ninnindale'? He is none other than Simple Suni. Here is the interesting story about Ninnindale dialouges.
Please Wait while comments are loading...

Kannada Photos

Go to : More Photos