twitter
    For Quick Alerts
    ALLOW NOTIFICATIONS  
    For Daily Alerts

    ನಾವು ಮಾತಾಡಲ್ಲ : ಸೂಪರ್ಸ್ಟಾರ್ಗಳ ಹೊಸ ಚಾಳಿ

    By ಜೀವನರಸಿಕ
    |

    ಇವ್ರು ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ ನಟರು. ಸಿನಿಮಾ ಸೋತ್ರೂ ಗೆದ್ರೂ ಇವ್ರ ಸ್ಟಾರ್ ವ್ಯಾಲ್ಯೂ ಒಂದಿಷ್ಟೂ ಕಡಿಮೆ ಆಗಲ್ಲ. ಮೊದಲ ವಾರವಂತೂ ಇವ್ರ ಸಿನಿಮಾ ನೋಡೋಕೆ ಅಭಿಮಾನಿಗಳೇ ಥಿಯೇಟರ್ ತುಂಬಿಕೊಳ್ತಾರೆ. ಅಥವಾ ಇವರೇ ತುಂಬಿಸಿರ್ತಾರಾ?

    ಅಲ್ಲಿಗೆ ಸಿನಿಮಾ ಯಾವುದೇ ಪಬ್ಲಿಸಿಟಿ ಇಲ್ಲದೇ ರಿಲೀಸ್ ಆದ್ರೂ ಈ ಸ್ಟಾರ್ಗಳ ಸಿನಿಮಾಗಳಿಗೆ ಪ್ರೇಕ್ಷಕರು ಪಕ್ಕಾ, ಕಲೆಕ್ಷನ್ ಗ್ಯಾರಂಟಿ. ಚಿತ್ರ ಹೆಂಗೇ ಇರಲಿ, ಸಿನೆಮಾ ಬಿಟ್ಟ ತಕ್ಷಣ ಜೈಜೈಕಾರಗಳು, ನೂರು ದಿನ ಓಡೋದು ಗ್ಯಾರಂಟಿ ಅನ್ನೋದು ಮಾಮೂಲಿಯಾಗಿಬಿಟ್ಟಿದೆ. ಸಿನಿಮಾ ರಿಲೀಸ್ಗೂ ಮೊದಲು ಇಂಟರ್ವ್ಯೂ ಕೊಟ್ರೂ ಓಕೆ ಕೊಡದೇ ಇದ್ರೂ ಓಕೆ ಅನ್ನುವ ಅಹಂಕಾರ ಕೆಲವರಲ್ಲಿ ಬೆಳೆದುಬಿಟ್ಟಿದೆ.

    ಒಂದೆರೆಡು ವರ್ಷಗಳ ಹಿಂದೆ ಎಂತಹಾ ದೊಡ್ಡ ಸ್ಟಾರ್ ಆದ್ರೂ ತಮ್ಮ ಸಿನಿಮಾ ರಿಲೀಸ್ ಅಂದ್ರೆ ಮಾಧ್ಯಮದ ಮುಂದೆ ಬಂದು, ನಮ್ಮ ಮತ್ತು ಸಿನಿಪ್ರೇಮಿಗಳ ನಡುವಿನ ಸೇತುವೆ ನೀವು ಮಾಧ್ಯಮದವ್ರು ಸಹಕಾರ ನೀಡಿ ಅಂತ ಕೇಳುತ್ತಿದ್ರು. ಈಗ ಹಾಗಿಲ್ಲ. ಈಗ ಸ್ಟಾರ್ಗಳು ಮಾತ್ನಾಡ್ತಿಲ್ಲ. ಅದೇನು ಒಡಂಬಡಿಕೆ ಮಾಡಿಕೊಂಡಿದ್ದಾರೋ ಸಿನೆಮಾದ ಬಗ್ಗೆ ತುಟಿ ಪಿಟ್ ಅನ್ನುವುದಿಲ್ಲ. ಯಾಕೆ ಏನು ಅಂತೀರಾ ಈ ಸ್ಲೈಡ್ ತಿರುಗಿಸ್ತಾ ಹೋಗಿ..

    ದರ್ಶನ್ ಐರಾವತದ ಬಗ್ಗೆ ಮಾತಿಲ್ಲ

    ದರ್ಶನ್ ಐರಾವತದ ಬಗ್ಗೆ ಮಾತಿಲ್ಲ

    ಇತ್ತೀಚೆಗೆ ಐರಾವತ ಚಿತ್ರದ ಐಟಂ ಸಾಂಗ್ ಶೂಟಿಂಗ್ ನಡೆದಿತ್ತು. ಐಟಂ ಸಾಂಗ್ ಶೂಟ್ ಮಾಡೋಕೆ ಪತ್ರಕರ್ತರಿಗೆ ಆಹ್ವಾನವಿತ್ತು. ಶೂಟಿಂಗ್ ಏನೋ ಆಯ್ತು. ಚಿತ್ರದ ಬಗ್ಗೆ ಮಾತ್ನಾಡಿ ಅಂದ್ರೆ ದರ್ಶನ್, 'ದೊಡ್ಡ ನಮಸ್ಕಾರ' ಬಿಲ್ ಕುಲ್ ಆಗಲ್ಲ ಅಂದ್ರು.

    ಸುಮ್ನೆ ನಿರೀಕ್ಷೆ ಹುಟ್ಟಿಸೋಲ್ಲ

    ಸುಮ್ನೆ ನಿರೀಕ್ಷೆ ಹುಟ್ಟಿಸೋಲ್ಲ

    ಸುಮ್ನೆ ಸಿನಿಮಾದ ಬಗ್ಗೆ ಹಾಗಿರುತ್ತೆ, ಹೀಗಿರುತ್ತೆ ಅಂತ ಮಾತ್ನಾಡಿ ನಿರೀಕ್ಷೆ ಹುಟ್ಟಿಸೋದು ಬೇಡ ಅದಕ್ಕಾಗೀನೇ ಮಾತ್ನಾಡಲ್ಲ ಅಂದ್ರು ಚಾಲೆಂಜಿಂಗ್ಸ್ಟಾರ್. ಹಾಗಿದ್ರೆ ಈ ಚಿತ್ರದ ಮೇಲೆ ನಿರೀಕ್ಷೆ ದರ್ಶನ್ ಇಟ್ಟುಕೊಂಡಿಲ್ಲವಾ? ಅಭಿಮಾನಿಗಳೇ ಒಪ್ತೀರಾ ಈ ಮಾತನ್ನ?

    ಕ್ಯಾಮೆರಾ ನೋಡೀನೇ ರೈ ಗರಂ

    ಕ್ಯಾಮೆರಾ ನೋಡೀನೇ ರೈ ಗರಂ

    ಇನ್ನು ಐರಾವತದಲ್ಲೊಂದು ಮುಖ್ಯಪಾತ್ರ ಮಾಡಿರೋ ಪ್ರಕಾಶ್ ರೈ ಮಾಧ್ಯಮದ ಕ್ಯಾಮೆರಾ ನೋಡಿದ ಕೂಡ್ಲೇ ರೊಚ್ಚಿಗೆದ್ರು. ತಮ್ಮತ್ತ ಕ್ಯಾಮೆರಾ ತೋರಿದ ಮಾಧ್ಯಮದ ಕ್ಯಾಮೆರಾಮನ್ ಒಬ್ಬರನ್ನ ಹೊರಗೆ ಕಳಿಸಿದ್ದೂ ಆಯ್ತು. ಯಾಕೋ ಜಾಸ್ತಿಯಾಯ್ತು!

    ತಿಪ್ಪೆ ಸಾರಿಸಿದ್ರು ಅರ್ಜುನ್

    ತಿಪ್ಪೆ ಸಾರಿಸಿದ್ರು ಅರ್ಜುನ್

    ಹಾಗೇನೂ ಇಲ್ಲ ಸದ್ಯದಲ್ಲೇ ಪ್ರೆಸ್ಮೀಟ್ ಕರೆದು ಮಾತಾಡೋಣ ಇವತ್ತು ಬೇಡ ಅಂದ್ರು 'ಅಂಬಾರಿ' ಅರ್ಜುನ್. ನೃತ್ಯ ನಿರ್ದೇಶಕ ಕಲೈ ಮತ್ತು ನಿರ್ದೇಶಕರ ಮಾತಿನಿಂದ ಮಾಧ್ಯಮದ ಮಂದಿಗೆ ಹೆಚ್ಚಿನ ಸುದ್ದಿಯೇನೂ ಸಿಗಲಿಲ್ಲ.

    ಬೃಂದಾವನ ಎಫೆಕ್ಟಾ ದರ್ಶನ್?

    ಬೃಂದಾವನ ಎಫೆಕ್ಟಾ ದರ್ಶನ್?

    ಈ ಹಿಂದಿನ ಬೃಂದಾವನ ಸಿನಿಮಾದಲ್ಲಿ ತೆಲುಗಿನ ಬೃಂದಾವನಂಗಿಂತ ಒಂದು ಲೆವೆಲ್ ಹೆಚ್ಚಾಗಿ ಮಾಡಿದ್ದೀವಿ ಅಂತ ದರ್ಶನ್ ಹೇಳಿದ್ರು. ಚಿತ್ರ ಮಾತ್ರ ಕಾಸು ಮಾಡಿದ್ರೂ ನೆಲಕಚ್ಚಿತ್ತು. ಅದಕ್ಕೇ ಮುಂದಿನ ಚಿತ್ರಗಳಿಂದ ಈ ಸ್ಟಂಟಾ?

    ರಣವಿಕ್ರಮದಲ್ಲಿ ಪುನೀತ್ ಕೂಡ

    ರಣವಿಕ್ರಮದಲ್ಲಿ ಪುನೀತ್ ಕೂಡ

    ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ರಣವಿಕ್ರಮ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಎಲ್ಲಿಯೂ ಚಿತ್ರದ ಬಗ್ಗೆ ಮಾತಾಡಿರ್ಲಿಲ್ಲ. ಮಾಧ್ಯಮದವ್ರು ಸಿಕ್ಕಾಗ ಚಿತ್ರ ರಿಲೀಸ್ ಆಗೋವರೆಗೂ ಮಾತಾಡೋದಿಲ್ಲ ಅಂದಿದ್ರು.

    ರಣವಿಕ್ರಮನೂ ಅಷ್ಟಕ್ಕಷ್ಟೇ

    ರಣವಿಕ್ರಮನೂ ಅಷ್ಟಕ್ಕಷ್ಟೇ

    ಹಾಗೆ ನೋಡಿದ್ರೆ ರಣವಿಕ್ರಮ ಚಿತ್ರ ಮಾತ್ನಾಡಿದ್ದೂ ಅಷ್ಟಕ್ಕಷ್ಟೇ. ಚಿತ್ರ ಮೊದಲಿಗೆ ಅಬ್ಬರಿಸಿತ್ತಾದ್ರೂ ಅಷ್ಟೇ ಬೇಗ ಅಬ್ಬರ ತಣ್ಣಗಾಯ್ತು, ನಾಲ್ಕನೇ ವಾರಕ್ಕೆ ಥಿಯೇಟರ್ಗಳು 230ರಿಂದ 30-40ಕ್ಕೆ ಇಳಿಕೆಯಾದ್ವು.

    ಉಪೇಂದ್ರ ಕೂಡ ಮಾತುಬಿಟ್ಟಿದ್ದಾರೆ

    ಉಪೇಂದ್ರ ಕೂಡ ಮಾತುಬಿಟ್ಟಿದ್ದಾರೆ

    ಉಪೇಂದ್ರ ಕೂಡ ಚಿತ್ರದ ಬಗ್ಗೆ ಸಿಕ್ಕಾಗಲೆಲ್ಲ ಮಾತ್ನಾಡೋದು ಸುಮ್ನೆ ಬಾಯಿ ನೋಯಿಸಿಕೊಂಡ ಹಾಗೆ ಅಂತ ಮಾತ್ನಾಡೋದನ್ನ ಬಿಟ್ಟಿದ್ದಾರೆ. ಮಾತ್ನಾಡಲ್ಲ ಮಾಡಿ ತೋರಿಸ್ತೀವಿ ಅನ್ನೋ ಈ ರಣಧೀರ ಕಂಠೀರವಗಳು ಅದೇನ್ ಕಡಿದು ಕಟ್ಟೆ ಹೇರ್ತಾರೋ ನೋಡೇ ಬಿಡ್ತೀವಿ ಅಂತಿದೆ ಮಾಧ್ಯಮದ ಗರಂ ಪತ್ರಕರ್ತರ ಮೂಲ..

    English summary
    Many Kannada superstar actors have stopped talking to media about their movie. None of them are ready to say few words about the movie or about their character. What could be the reason for this revolt?
    Saturday, May 16, 2015, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X