»   » ಮದುವೆ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಅಮೂಲ್ಯ.?

ಮದುವೆ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಅಮೂಲ್ಯ.?

Posted by:
Subscribe to Filmibeat Kannada

'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ಚಂದನವನದಲ್ಲಿ ಚಿತ್ತಾರ ಬಿಡಿಸಿದ ಹುಡುಗಿ ಅಮೂಲ್ಯಗೆ ಕಂಕಣ ಭಾಗ್ಯ ಕೂಡಿಬಂದಿದೆ. ನಟಿ ಅಮೂಲ್ಯ ರವರ ನಿಶ್ಚಿತಾರ್ಥ ಸಮಾರಂಭಕ್ಕೆ ದಿನಗಣನೆ ಶುರು ಆಗಿದೆ. ಮೇ ತಿಂಗಳಿನಲ್ಲಿ 'ಅಮೂಲ್ ಬೇಬಿ' ವಿವಾಹ ನಡೆಯಲಿದೆ. ಇದು ಸಂತಸದ ವಿಚಾರವೇ ಆಗಿದ್ದರೂ, ಮದುವೆ ಬಳಿಕ ನಟಿ ಅಮೂಲ್ಯ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಮೂಡಿದೆ.[ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?]

ಯಾಕಂದ್ರೆ, ಮದುವೆ.. ಗಂಡ.. ಮನೆ.. ಮಕ್ಕಳು ಅಂತ ಆದ್ಮೇಲೆ ಹೆಣ್ಮಕ್ಕಳು ಮನೆಯಲ್ಲೇ ಬಿಜಿ. ಎಂತೆಂಥ ಸ್ಟಾರ್ ಹೀರೋಯಿನ್ ಗಳು ಸಹ ಮದುವೆ-ಮಕ್ಕಳು ಆದ್ಮೇಲೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಉದಾಹರಣೆ ನಮ್ಮ ಕಣ್ಮುಂದಿದೆ. ಹೀಗಿರುವಾಗ, ವಿವಾಹದ ಬಳಿಕ ನಟಿ ಅಮೂಲ್ಯ ನಟನೆ ಮುಂದುವರಿಸುತ್ತಾರಾ.?

ನಟನೆ ಮುಂದುವರಿಸುವ ಬಗ್ಗೆ ನಟಿ ಅಮೂಲ್ಯ ಏನಂತಾರೆ.?

ನಟನೆ ಮುಂದುವರಿಸುವ ಬಗ್ಗೆ ನಟಿ ಅಮೂಲ್ಯ ಏನಂತಾರೆ.?

''ಮದುವೆ ನಂತರ ಆಕ್ಟಿಂಗ್ ಮುಂದುವರಿಸುವ ಬಗ್ಗೆ ಯೋಚನೆ ಮಾಡಿಲ್ಲ. ಈಗಲೇ ಯಾವುದನ್ನೂ ಪ್ಲಾನ್ ಮಾಡಿಲ್ಲ. ಅವರ (ಜಗದೀಶ್) ಕುಟುಂಬ ಕೂಡ ಆ ಬಗ್ಗೆ ಮಾತನಾಡಿಲ್ಲ'' ಎಂದು ಹೇಳುತ್ತಾರೆ ನಟಿ ಅಮೂಲ್ಯ.

ಒಳ್ಳೆ ಸಿನಿಮಾ ಸಿಕ್ಕರೆ....

ಒಳ್ಳೆ ಸಿನಿಮಾ ಸಿಕ್ಕರೆ....

''ಒಳ್ಳೆಯ ಸಿನಿಮಾ ಸಿಕ್ಕರೆ ಆಲೋಚಿಸಬಹುದು. ಈಗಲೇ ಹೇಳುವುದು ಕಷ್ಟ. ಕುಟುಂಬದೊಂದಿಗೆ ಮಾತನಾಡಬೇಕು'' ಎನ್ನುತ್ತಾರೆ ಮದುಮಗಳು ಅಮೂಲ್ಯ.

ಜಗದೀಶ್ ರವರಿಗೆ ಸಿನಿಮಾ ನಂಟಿದೆ

ಜಗದೀಶ್ ರವರಿಗೆ ಸಿನಿಮಾ ನಂಟಿದೆ

ಅಮೂಲ್ಯ ಮದುವೆ ಆಗಲಿರುವ ಗಂಡು ಜಗದೀಶ್ ರವರಿಗೆ ಸಿನಿಮಾ ನಂಟಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ರವರಿಗೆ ಜಗದೀಶ್ ಅತ್ಯಾಪ್ತ. ಹೆಚ್ಚು ಸಿನಿಮಾಗಳನ್ನ ಜಗದೀಶ್ ನೋಡುತ್ತಾರಂತೆ.

ಶಾಪಿಂಗ್ ನಲ್ಲಿ ಬಿಜಿಯಾಗಿರುವ ಅಮೂಲ್ಯ

ಶಾಪಿಂಗ್ ನಲ್ಲಿ ಬಿಜಿಯಾಗಿರುವ ಅಮೂಲ್ಯ

ಮಾರ್ಚ್ 6 ರಂದು ನಿಶ್ಚಿತಾರ್ಥ ಫಿಕ್ಸ್ ಆಗಿದೆ. ಸಮಯ ತುಂಬಾ ಕಮ್ಮಿ ಇರುವುದರಿಂದ ಶಾಪಿಂಗ್ ನಲ್ಲಿ ನಟಿ ಅಮೂಲ್ಯ ಬಿಜಿಯಾಗಿದ್ದಾರೆ.

ಮದುವೆ ಯಾವಾಗ.?

ಮದುವೆ ಯಾವಾಗ.?

ಅಮೂಲ್ಯ ಕುಟುಂಬದ ಮೂಲಗಳ ಪ್ರಕಾರ, ಮೇ ತಿಂಗಳಿನಲ್ಲಿ ಮದುವೆ ನಡೆಯಲಿದೆ.

ಅಮೂಲ್ಯ 'ಮುಗುಳ್ನಗೆ'

ಅಮೂಲ್ಯ 'ಮುಗುಳ್ನಗೆ'

ಗಣೇಶ್ ಅಭಿನಯದ 'ಮುಗುಳ್ನಗೆ' ಚಿತ್ರದಲ್ಲಿ ಅಭಿನಯಿಸಲು ಅಮೂಲ್ಯ ಒಪ್ಪಿಕೊಂಡಿದ್ದಾರೆ. ಮಾರ್ಚ್ ತಿಂಗಳಿನಲ್ಲಿ 'ಮುಗುಳ್ನಗೆ' ಚಿತ್ರೀಕರಣದಲ್ಲಿ ಅಮೂಲ್ಯ ಭಾಗವಹಿಸಲಿದ್ದಾರೆ.

'ಮಾಸ್ತಿ ಗುಡಿ' ರಿಲೀಸ್ ಗೆ ರೆಡಿ

'ಮಾಸ್ತಿ ಗುಡಿ' ರಿಲೀಸ್ ಗೆ ರೆಡಿ

ದುನಿಯಾ ವಿಜಯ್-ಅಮೂಲ್ಯ ನಟಿಸಿರುವ 'ಮಾಸ್ತಿಗುಡಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ.

English summary
''I've not planned anything'' says Amulya, when quizzed about Acting after Marriage.
Please Wait while comments are loading...

Kannada Photos

Go to : More Photos