»   » ಅಭಿಮಾನಿ ರಕ್ಷಿತಾ ಕಷ್ಟಕ್ಕೆ ದರ್ಶನ್ ಮನಸ್ಸು ಮರುಗುತ್ತಾ?

ಅಭಿಮಾನಿ ರಕ್ಷಿತಾ ಕಷ್ಟಕ್ಕೆ ದರ್ಶನ್ ಮನಸ್ಸು ಮರುಗುತ್ತಾ?

Posted by:
Subscribe to Filmibeat Kannada

ಅಭಿಮಾನಿ 'ರಕ್ಷಿತಾ' ಯಾರು ಅಂತ ನಿಮಗೆ ಪರಿಚಯಿಸುವ ಮುನ್ನ ಎರಡು ವರ್ಷಗಳ ಹಿಂದೆ ದರ್ಶನ್ ಏನ್ ಮಾಡಿದ್ರು ಅನ್ನೋ ಸಣ್ಣ ಫ್ಲ್ಯಾಶ್ ಬ್ಯಾಕ್ ಗೆ ಹೋಗ್ಬರೋಣ....

ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ಹೆತ್ತವರಿಲ್ಲದೆ ಸ್ವಾವಲಂಬಿಗಳಾಗಿ ದುಡಿದು ಬದುಕುತ್ತಿದ್ದ ಪುಟ್ಟ ಮಕ್ಕಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಹಸ್ತ ಚಾಚಿದ್ರು.

ತಾನು ದುಡಿದ ಹಣದಲ್ಲೇ ತಂಗಿಯನ್ನ ಡಾಕ್ಟರ್ ಮಾಡೋ ಕನಸು ಕಾಣ್ತಿರೋ ಪುಟ್ಟ ಹುಡುಗನ ಕನಸನ್ನ ನನಸಾಗಿಸುವುದಕ್ಕೆ ದರ್ಶನ್ ಮುಂದಾಗಿದ್ರು.

ದರ್ಶನ್ ಅಪ್ಪಟ ಅಭಿಮಾನಿಯಾಗಿದ್ದ ಪುಟಾಣಿ ದೀಪಾ ಮಾರುತಿ ಕುರುಬರ್ ಮತ್ತು ಪ್ರಕಾಶ್ ಮಾರುತಿ ಕುರುಬರ್ ಎಂಬ ಮಕ್ಕಳಿಗೆ 10 ಸಾವಿರ ರೂಪಾಯಿ ನಗದು ನೀಡಿ, ಮಕ್ಕಳ ಶಿಕ್ಷಣ ವೆಚ್ಚ ಭರಿಸುವ ಭರವಸೆ ನೀಡಿದ್ರು ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್. [ಕ್ಯಾನ್ಸರ್ ಪೀಡಿತ ಮಕ್ಕಳ ಮನಗೆದ್ದ ದರ್ಶನ್]

ಈಗ ಅವರಂತೆಯೇ ದರ್ಶನ್ ಅಭಿಮಾನಿಯಾಗಿರುವ 'ರಕ್ಷಿತಾ'ಗೂ ಎಲ್ಲರ ಸಹಾಯ ಬೇಕಾಗಿದೆ. ಮುಂದೆ ಓದಿ.....

ಯಾರೀ ರಕ್ಷಿತಾ?

ಬೆಂಗಳೂರಿನ ಸುಂಕದಕಟ್ಟೆ ಬಳಿಯ ಸಂಜೀವಿನಿನಗರ ನಿವಾಸಿ ಹನುಮಂತಪ್ಪ ಪುತ್ರಿ ಪುಟಾಣಿ ರಕ್ಷಿತಾ. ವಯಸ್ಸು 10 ವರ್ಷ. ಹುಟ್ಟಿದಾಗಿನಿಂದಲೂ ಈ ಬಾಲಕಿಗೆ ಮೂಗಿಲ್ಲ ಮತ್ತು ಕಾಲು ಬೆರಳುಗಳಿಲ್ಲ. {Image Courtesy - ETV News Kannada} [ಹಳ್ಳಿ ಹೈದ ರಾಜೇಶ್ ಸಹಾಯಕ್ಕೆ ನಿಂತ ನಟ ದರ್ಶನ್]

ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವ ಹುಡುಗಿ

ಹುಟ್ಟಿದಾಗಿನಿಂದಲೂ ಮೂಗಿಲ್ಲದ ಈ ಪುಟಾಣಿ ರಕ್ಷಿತಾ ಶಾಲೆಗೆ ಹೋಗುವಾಗ ಅಂಜಿಕೆಯಿಂದ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತೆರಳುತ್ತಾಳೆ. {Image Courtesy - ETV News Kannada} [ಕಲಾವಿದರ ಸಂಘಕ್ಕೆ ದರ್ಶನ್ ರು.25 ಲಕ್ಷ ಧನ ಸಹಾಯ]

ಆಟಕ್ಕೆ ಯಾರೂ ಸೇರಿಸಿಕೊಳ್ಳುವುದಿಲ್ಲ

ರಕ್ಷಿತಾಗೆ ಮೂಗು ಇಲ್ಲ ಅನ್ನುವ ಕಾರಣಕ್ಕೆ ಆಟಕ್ಕೆ ಈ ಪುಟಾಣಿಯನ್ನ ಬೇರೆ ಮಕ್ಕಳು ಸೇರಿಸಿಕೊಳ್ಳುತ್ತಿಲ್ಲವಂತೆ. {Image Courtesy - ETV News Kannada}

ಚಿಕಿತ್ಸೆಗೆ ಹಣವಿಲ್ಲ.!

ವೈದ್ಯರ ಪ್ರಕಾರ ರಕ್ಷಿತಾಗೆ ಆಪರೇಷನ್ ಮಾಡಬೇಕು. ಆದ್ರೆ, ಕಡುಬಡತನದಲ್ಲಿರುವ ರಕ್ಷಿತಾ ಕುಟುಂಬಕ್ಕೆ ಆಪರೇಷನ್ ಖರ್ಚು ವೆಚ್ಚ ಭರಿಸುವ ಶಕ್ತಿಯಿಲ್ಲ ಅಂತ ಈಟಿವಿ ಕನ್ನಡ ಸುದ್ದಿ ವಾಹಿನಿ ವರದಿ ಮಾಡಿದೆ. {Image Courtesy - ETV News Kannada}

ದರ್ಶನ್ ಅಪ್ಪಟ ಅಭಿಮಾನಿ

ಮೊದಲನಿಂದಲೂ ರಕ್ಷಿತಾಗೆ ದರ್ಶನ್ ಕಂಡ್ರೆ ಪ್ರಾಣ. ದರ್ಶನ್ ಅಭಿನಯದ ಎಲ್ಲಾ ಚಿತ್ರಗಳನ್ನೂ ರಕ್ಷಿತಾ ನೋಡಿದ್ದಾಳೆ. ಟಿವಿಯಲ್ಲಿ ದರ್ಶನ್ ಚಿತ್ರ ಪ್ರಸಾರ ಮಾಡಿದರೂ, ಪಕ್ಕದ ಮನೆಗೆ ಹೋಗಿ ರಕ್ಷಿತಾ ಚಿತ್ರ ವೀಕ್ಷಿಸುತ್ತಾಳೆ. ಒಮ್ಮೆ ದರ್ಶನ್ ರನ್ನ ಕಣ್ಣಾರೆ ನೋಡುವ ಆಸೆ ಆಕೆಗಿದೆ. {Image Courtesy - ETV News Kannada}

ಉಳಿದವರಂತೆ ತಾನಾಗಬೇಕೆಂಬ ಆಸೆ!

ಮೂರನೇ ತರಗತಿ ಓದುತ್ತಿರುವ ರಕ್ಷಿತಾಗೆ ಇತರೆ ಮಕ್ಕಳಂತೆ ಆಗ್ಬೇಕೆಂಬ ಆಸೆ ಇದೆ. {Image Courtesy - ETV News Kannada}

ಸಹಾಯ ಹಸ್ತ ಚಾಚ್ತಾರಾ ದರ್ಶನ್?

ದರ್ಶನ್ ಅಪ್ಪಟ ಅಭಿಮಾನಿಯಾಗಿರುವ ರಕ್ಷಿತಾ ಕಷ್ಟಕ್ಕೆ ದರ್ಶನ್ ಮರುಗುತ್ತಾರಾ? ಪುಟಾಣಿ ಬಾಲಕಿಯ ಆಪರೇಷನ್ ಖರ್ಚು ಭರಿಸಿ ಆಕೆಯ ಬಾಳಿಗೆ ದಾರಿದೀಪವಾಗುತ್ತಾರಾ? ಪುಟಾಣಿ ಮಕ್ಕಳಿಗೆ ಈ ಹಿಂದೆ ಸಹಾಯ ಮಾಡಿದಂತೆ ದರ್ಶನ್ ಈ ಬಾರಿ ರಕ್ಷಿತಾಗೂ ಸಹಾಯ ಹಸ್ತ ಚಾಚ್ತಾರಾ ನೋಡೋಣ.{ವರದಿ ಕೃಪೆ - ಈಟಿವಿ ನ್ಯೂಸ್ ಕನ್ನಡ}

English summary
Rakshitha (10yrs) who is the hardcore fan of Challenging Star Darshan, needs to get operated. Will Kannada Actor Darshan financially help her?
Please Wait while comments are loading...

Kannada Photos

Go to : More Photos