»   » ಯಶ್ ಬರ್ತಡೆಗೆ 'ಮಾಸ್ಟರ್ ಪೀಸ್' ತಂಡದ ಸ್ಪೆಷಲ್ ಸರ್ ಪ್ರೈಸ್!

ಯಶ್ ಬರ್ತಡೆಗೆ 'ಮಾಸ್ಟರ್ ಪೀಸ್' ತಂಡದ ಸ್ಪೆಷಲ್ ಸರ್ ಪ್ರೈಸ್!

Posted by:
Subscribe to Filmibeat Kannada

ಸಾಮಾನ್ಯವಾಗಿ 'ಸ್ಟಾರ್' ಹೀರೋ ಹುಟ್ಟುಹಬ್ಬ ಅಂದ್ರೆ ಹೇಗಿರುತ್ತೆ? ನಾಯಕ ನಟನ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯ್ಸಿರ್ತಾರೆ. 20-30ಕ್ಕೂ ಹೆಚ್ಚು ಕೆ.ಜಿ ತೂಗುವ ದೊಡ್ಡ ದೊಡ್ಡ ಕೇಕ್ ಗಳನ್ನ ತಂದು ಹೀರೋ ಕೈಯಲ್ಲಿ ಕಟ್ ಮಾಡಿಸಿ ಫ್ಯಾನ್ಸ್ ಖುಷಿ ಪಡ್ತಾರೆ. ಪಟಾಕಿ ಸಿಡಿಸ್ತಾರೆ, ಜೈಕಾರ ಹಾಕ್ತಾರೆ.

ಇದೆಲ್ಲಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ನಡೆಯಿತು. ಆದ್ರೆ ಒಂದು ಸಣ್ಣ ಬದಲಾವಣೆ....ಬದಲಾವಣೆ ಅನ್ನೋಕ್ಕಿಂತ ಕ್ರಿಯೇಟಿವ್ ಆಗಿ ಯಶ್ ಬರ್ತಡೆ ಸೆಲೆಬ್ರೇಟ್ ಮಾಡಿದ್ದು 'ಮಾಸ್ಟರ್ ಪೀಸ್' ಚಿತ್ರತಂಡ. [ಎರಡು ವಾರಗಳಲ್ಲಿ 'ಮಾಸ್ಟರ್ ಪೀಸ್' ಬಾಚಿದ್ದು ಎಷ್ಟು?]

ಎಲ್ಲೆಡೆ 'ಮಾಸ್ಟರ್ ಪೀಸ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಮಂಜು ಮಾಂಡವ್ಯ ಯಶಸ್ವಿ ಆಗಿದ್ದಾರೆ. ಇದೇ ಖುಷಿಯಲ್ಲಿ ಮಂಜು ಮಾಂಡವ್ಯ ಇಂದು ಯಶ್ ಹುಟ್ಟುಹಬ್ಬವನ್ನ ಆಚರಿಸಿದರು. ಅದ್ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ.....

Masterpiece Manju with Antamma Yash #kannadamovies #Yash Yash Rocking star YASH Kannada movies Kannada Cinema Loka

Posted by Kannada Filmibeat onFriday, January 8, 2016

ಹೌದು, ಬರ್ತಡೆ ಅಂದ್ರೆ ಎಲ್ಲರೂ ಕೆ.ಜಿ ಗಟ್ಟಲೆ ಕೇಕ್ ತರೋದನ್ನ ನೋಡಿದ್ದೀರಾ. ಆದ್ರೆ, ಸಿಂಗಲ್ ಪೀಸ್ ಕೇಕ್ ಮೇಲೆ 'ಹ್ಯಾಪಿ ಬರ್ತಡೆ ಮಾಸ್ಟರ್ ಪೀಸ್' ಅಂತ ಬರೆಯಿಸಿ ಮಂಜು ಮಾಂಡವ್ಯ, ಯಶ್ ಹುಟ್ಟುಹಬ್ಬಕ್ಕೆ ಸರ್ ಪ್ರೈಸ್ ನೀಡಿದರು. [ರಾಕಿಂಗ್ ರಾಮಾಚಾರಿ ಹುಟ್ಟುಹಬ್ಬಕ್ಕೆ ಬೆಳ್ಳಿ ಕಿರೀಟ, ಗದೆ ಗಿಫ್ಟ್!]

masterpiece

''ಮಾಸ್ಟರ್ ಪೀಸ್' ಅಂದ್ರೆ ಸಿಂಗಲ್ ಪೀಸ್. ಹೀಗಾಗಿ, ಅವರಿಗೆ ಇಷ್ಟವಾದ ಕೇಕ್ ನ ಸಿಂಗಲ್ ಪೀಸ್ ಮಾಡಿಸಿ ದೊಡ್ಡ ಬಾಕ್ಸ್ ನಲ್ಲಿ ಪ್ಯಾಕ್ ಮಾಡಿಸಿದ್ವಿ'' ಅಂತಾರೆ ನಿರ್ದೇಶಕ ಮಂಜು ಮಾಂಡವ್ಯ.

ಬರ್ತಡೆ ಸೆಲೆಬ್ರೇಷನ್ ನಲ್ಲೂ ಮಂಜು ಮಾಂಡವ್ಯ ರವರ ಈ ಕ್ರಿಯೇಟಿವಿಟಿ ನೋಡಿ ಯಶ್ ಫುಲ್ ಖುಷ್ ಆಗಿದ್ದಾರೆ.

English summary
Rocking Star Yash is celebrating his 30th birthday today (Jan 8th). On this occasion, 'Masterpiece' Director Manju Mandavya gave special surprise for Yash.
Please Wait while comments are loading...

Kannada Photos

Go to : More Photos