»   » ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್

ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್

Posted by:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇವತ್ತು ಸಂಭ್ರಮದ ಹಬ್ಬ. ಯಾಕಂದ್ರೆ 'ಯಶ್'ಗಿಂದು 29ನೇ ಹುಟ್ಟುಹಬ್ಬದ ಸಂಭ್ರಮ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಕ್ಸಸ್ ನಲ್ಲಿ ತೇಲುತ್ತಿರುವ ಯಶ್, ಇಂದು ತಮ್ಮ ಜನ್ಮದಿನವನ್ನ ಅಭಿಮಾನಿಗಳೊಂದಿಗೆ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಇದೇ ಸಡಗರದಲ್ಲಿ ನಟ ಯಶ್ ಗೆ ಮತ್ತು ಯಶ್ ಅಭಿಮಾನಿಗಳಿಗೆ ಇಂದು ಒಂದು ಸರ್ಪ್ರೈಸ್ ಸಿಕ್ಕಿದೆ. ಯಶ್ ಭಕ್ತರಿಗೆ 'ಮಾಸ್ಟರ್ ಪೀಸ್ ಗಿಫ್ಟ್' ಸಿಕ್ಕಿದೆ! ಈಗಾಗಲೇ ಗಾಂಧಿನಗರದಲ್ಲಿ ಸುದ್ದಿಯಾದ ಹಾಗೆ, ಯಶ್ ಅಭಿನಯಿಸುತ್ತಿರುವ ಹೊಚ್ಚ ಹೊಸ ಚಿತ್ರ 'ಮಾಸ್ಟರ್ ಪೀಸ್'.

Master Piece teaser1

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಕಂಪ್ಲೀಟ್ ಆಗ್ತಿದ್ದ ಹಾಗೆ, 'ಮಾಸ್ಟರ್ ಪೀಸ್'ಗೆ ಚಾಲನೆ ನೀಡಿರುವ ಯಶ್, ಸದ್ದಿಲ್ಲದೇ ಪೋಟೋಶೂಟ್ ಕೂಡ ಮುಗಿಸಿದ್ದಾರೆ. ಆ ಪೋಟೋಶೂಟ್ ನ ಮೊದಲ ಝಲಕ್ 'ಟೀಸರ್' ರೂಪದಲ್ಲಿ, ಯಶ್ ಬರ್ತಡೇ ಪ್ರಯುಕ್ತ ರಿಲೀಸ್ ಆಗಿದೆ ನೋಡಿ.... [ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್'ಗೆ ಅನುಷ್ಕಾ ಶೆಟ್ಟಿ]

Yash Birthday Gift : Master Piece teaser out

'ಮಾಸ್ಟರ್ ಪೀಸ್' ಚಿತ್ರದ ಟೀಸರ್ ನೋಡಿದ್ರೆ, ಇದೊಂದು ದೇಶಭಕ್ತಿ ಸಿನಿಮಾ ಅನ್ನುವುದು ಮೊದಲ ನೋಟದಲ್ಲಿ ಖಾತ್ರಿಯಾಗುತ್ತೆ. ಖಾದಿ ತೊಟ್ಟು, ಹುರಿಗಟ್ಟಿದ ಮೀಸೆ ಬಿಟ್ಟು, ತಲೆಗೆ ಪೇಟಾ ತೊಟ್ಟು, ಕೈಲಿ ಬಂದೂಕು ಹಿಡಿದಿರುವ ಯಶ್ ಕ್ರಾಂತಿಕಾರಿಯಾಗಿ ಕಾಣಿಸಿಕೊಂಡಿರುವ ಲುಕ್ ಖಡಕ್ ಆಗಿದೆ.

ಇಲ್ಲಿವರೆಗೂ ರೆಬೆಲ್ ಸ್ಟಾರ್ ಅಂಬರೀಷ್, ಕರಾಟೆ ಕಿಂಗ್ ಶಂಕರ್ ನಾಗ್, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ತೆರೆಮೇಲೆ ಮಿಂಚಿದ್ದ ಯಶ್, 'ಮಾಸ್ಟರ್ ಪೀಸ್' ಚಿತ್ರದ ಮೂಲಕ 'ದೇಶಭಕ್ತ'ನಾಗಿ ನಟಿಸುತ್ತಿರುವುದು ವಿಶೇಷ. [ಮಂಜು ಮಾಂಡವ್ಯ ಆಕ್ಷನ್ ಕಟ್ ನಲ್ಲಿ ರಾಕಿಂಗ್ ಸ್ಟಾರ್]

ಇನ್ನೂ ಸಂಭಾಷಣಾಕಾರನಾಗಿದ್ದ ಮಂಜು ಮಾಂಡವ್ಯ 'ಮಾಸ್ಟರ್ ಪೀಸ್' ಚಿತ್ರದ ಮೂಲಕ ಮೊದಲ ಬಾರಿ ಡೈರೆಕ್ಟರ್ ಕುರ್ಚಿ ಮೇಲೆ ಕೂರುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಗಾಗಿ 'ನಿನ್ನಿಂದಲೇ' ಚಿತ್ರಕ್ಕೆ 'ಹೊಂಬಾಳೆ ಫಿಲ್ಮ್ಸ್'ನಡಿ ಬಂಡವಾಳ ಹಾಕಿದ್ದ ವಿಜಯ್ ಕರಗಂದೂರ್ 'ಮಾಸ್ಟರ್ ಪೀಸ್'ನ ರಿಚ್ಚಾಗಿ ನಿರ್ಮಾಣ ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಜೊತೆ ಮೊದಲ ಬಾರಿ ಜೋಡಿಯಾಗಿರುವುದು ನಟಿ 'ಶಾನ್ವಿ ಶ್ರೀವಾಸ್ತವ'. ಮೊನ್ನೆಯಷ್ಟೇ 'ಮಾಸ್ಟರ್ ಪೀಸ್' ಟೀಂ ಗೆ ಶಾನ್ವಿ ಕಾಲಿಟ್ಟಿರುವುದರಿಂದ ಟೀಸರ್ ನಲ್ಲಿ ಶಾನ್ವಿ ಸಹಜವಾಗಿ ನಾಪತ್ತೆಯಾಗಿದ್ದಾರೆ. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

Master Piece teaser4

'ಇನ್ ಖಿಲಾಬ್ ಜಿಂದಾಬಾದ್' ಅನ್ನುವ ಘೋಷದಿಂದ ಶುರುವಾಗುವ ಟೀಸರ್ ನಲ್ಲಿ ಮಂಡ್ಯದ ಸಿಡಿಗುಂಡು ಅಕ್ಷರಶಃ ಸಿಡಿದಿದ್ದಾರೆ. 'ಯಶ್' ಹುಟ್ಟುಹಬ್ಬದಂದೇ ಇಂತಹ 'ಮಾಸ್ಟರ್ ಪೀಸ್' ಗಿಫ್ಟ್ ಸಿಕ್ಕಿರುವಾಗ ಅಭಿಮಾನಿಗಳಿಗೆ ಇದ್ದಕ್ಕಿಂತ ಬೇರೇನು ಬೇಕು ಹೇಳಿ..?! (ಫಿಲ್ಮಿಬೀಟ್ ಕನ್ನಡ)

English summary
Rocking Star Yash is celebrating his 29th birthday today (Jan 8th). On this occasion, his upcoming movie 'Master Piece' First look teaser is out. Watch the teaser here.
Please Wait while comments are loading...

Kannada Photos

Go to : More Photos