»   » ಮಾಸ್ಟರ್ಪೀಸ್ ಕನಿಷ್ಠ ದೀಪಾವಳಿಗಾದರೂ ಬರತ್ತಾ ಯಶ್?

ಮಾಸ್ಟರ್ಪೀಸ್ ಕನಿಷ್ಠ ದೀಪಾವಳಿಗಾದರೂ ಬರತ್ತಾ ಯಶ್?

Written by: ಜೀವನರಸಿಕ
Subscribe to Filmibeat Kannada

ಲೇಟಾಗಿ ಬಂದ್ರೂ ಲೇಟೆಸ್ಟಾಗಿ ಬರೋದೂ ಯಶ್ ಸ್ಟೈಲ್. ಲೇಟೆಸ್ಟಾಗಿ ಮಾತ್ರ ಅಲ್ಲ ಟೇಸ್ಟಿಯಾಗಿನೂ ಬರ್ತಾರೆ. ಆದ್ರೆ ಈ ಬಾರಿ ಸಮಾಚಾರ ಏನಂದ್ರೆ ಹಾಗಾಗಬಾರದು ಅನ್ನೋದು ರಾಕಿಂಗ್ ಸ್ಟಾರ್ ಲೆಕ್ಕಾಚಾರ. ಯಾಕಂದ್ರೆ ಪ್ರತೀ ವರ್ಷಾನೂ ಯಶ್ ಸಿನಿಮಾಗಳು ಲೇಟಾಗ್ತಿವೆ ಅನ್ನೋದು ನಗ್ನಸತ್ಯ. ಆದ್ರೂ ವರ್ಷಕ್ಕೆರಡು ಸಿನಿಮಾಗಳಲ್ಲಿ ಮಿಂಚೋದು ಯಶ್ ಲೆಕ್ಕಾಚಾರ.

ರಾಜಾಹುಲಿ ತೆರೆಕಂಡಿದ್ದು 2013 ನವೆಂಬರ್ 1ಕ್ಕೆ. ಕನ್ನಡ ರಾಜ್ಯೋತ್ಸವದ ದಿನ ತೆರೆಕಂಡ ಚಿತ್ರ ಕನ್ನಡ ಸಿನಿಪ್ರೇಮಿಗಳ ಮನದಲ್ಲಿ ಮೋಡಿ ಮಾಡಿತ್ತು. ಇದ್ರ ನಂತ್ರ ಗಜಕೇಸರಿ 100 ದಿನದ ಗೆಲುವಿನ ಸಂಭ್ರಮ ಆಚರಿಸ್ತು. [ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]


ಅದಾದನಂತ್ರ 2014ರಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರವನ್ನ ಅಕ್ಟೋಬರ್ನಲ್ಲಿ ತೆರೆಕಾಣಿಸ್ಬೇಕು ಅಂದ್ಕೊಂಡಿದ್ದ ಜಯಣ್ಣ ಅಂಡ್ ಟೀಂಗೆ ರಾಮಾಚಾರಿಯನ್ನ ತೆರೆಗೆ ತರೋಕೆ ಸಾಧ್ಯವಾಗಿದ್ದು ಡಿಸೆಂಬರ್ 25ಕ್ಕೆ ಅಂದ್ರೆ ವರ್ಷದ ಕೊನೆಗೆ. [ಯಾರು ನಿಜವಾದ 'ಮಂಡ್ಯ'ದ ಮಾಸ್ಟರ್ ಪೀಸ್?]

ಈಗ ಮಾಸ್ಟರ್ಪೀಸ್ ಟೈಂ. ಮಂಜುಮಾಂಡವ್ಯ ನಿರ್ದೇಶನದ ಚಿತ್ರದಲ್ಲಿ ಸ್ವಾತಂತ್ರ್ಯ ವೀರ ಭಗತ್ ಸಿಂಗ್ ಗೆಟಪ್ ಕೂಡ ಇದ್ದು ಚಿತ್ರವನ್ನ ದೀಪಾವಳಿಗೆ ತೆರೆಗೆ ತರೋ ಲೆಕ್ಕಾಚಾರದಲ್ಲಿದೆ ಯಶ್ ಅಂಡ್ ಟೀಂ. ಅಭಿಮಾನಿಗಳೂ ಕೂಡ ಯಶ್ ಸಿನಿಮಾಗೆ ಕಾತರದಿಂದ ಕಾದಿದ್ದಾರೆ. ಈ ಬಾರಿ ಯಶ್ ಕಾಯಿಸದೇ ಇರ್ಲಿ ದೀಪಾವಳಿಗೇ ಸಿನಿಮಾ ಬರ್ಲಿ.


ಅಂದ ಹಾಗೆ, ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿರುವವಳು, ವಾರಣಾಸಿಯ ಬೆಡಗಿ ಶಾನ್ವಿ ಶ್ರೀವಾಸ್ತವ್. ಇದು ಆಕೆಯ ಮೊದಲ ಕನ್ನಡ ಚಿತ್ರವೇನಲ್ಲ. ಈಗಾಗಲೆ 'ಚಂದ್ರಲೇಖಾ' ಎಂಬ ಚಿತ್ರದಲ್ಲಿ ತನ್ನ ಅಭಿನಯ ಚಾತುರ್ಯ ತೋರಿದ್ದಳು. ಜೊತೆಗೆ ಭಲೇ ಜೋಡಿ ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದಾಳೆ.

English summary
History says Rocking Star Yash's movies have seldom released on time. His Mr and Mrs Ramachari too took time to hit the theatres. Latest Kannada movie Masterpiece is slated for release during Deepavali this year. Yash's fans are eagerly waiting for his next release.
Please Wait while comments are loading...

Kannada Photos

Go to : More Photos