»   » 'ಯಶ್-ರಾಧಿಕಾ' ಮದುವೆ: ಡಿಸೆಂಬರ್ 11 ಅಭಿಮಾನಿಗಳಿಗೆ ಮೀಸಲು

'ಯಶ್-ರಾಧಿಕಾ' ಮದುವೆ: ಡಿಸೆಂಬರ್ 11 ಅಭಿಮಾನಿಗಳಿಗೆ ಮೀಸಲು

Posted by:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ಮೂರು ದಿನಗಳ ಕಾಲ ನಡೆಯಲಿದೆ. ಈ ಮೂರು ದಿನಗಳಲ್ಲಿ ಅಭಿಮಾನಿಗಳಿಗಾಗಿಯೇ ಒಂದು ದಿನವನ್ನ ಸ್ಯಾಂಡಲ್ ವುಡ್ ತಾರಾಜೋಡಿ ಮೀಸಲಿಟ್ಟಿದ್ದಾರೆ.

ಮೊದಲೇ ಹೇಳಿ ಕೇಳಿ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಸಿನಿಮಾ ತಾರೆಯರು. ಇಬ್ಬರು ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಇನ್ನೂ ಇವರಿಬ್ಬರು ಮದುವೆ ಆಗುತ್ತಿದ್ದಾರೆ ಅಂದ್ರೆ, ಹೆಚ್ಚು ಸಂಖ್ಯೆಯ ಅಭಿಮಾನಿಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

ಕುಟುಂಬಸ್ಥರು, ಸಿನಿಮಾತಾರೆಯರು, ಅಭಿಮಾನಿಗಳು ಹೀಗೆ ಒಟ್ಟಿಗೆ ಸೇರಿದರೇ, ಎಲ್ಲರನ್ನೂ ನಿರ್ವಹಿಸುವುದು ಕಷ್ಟವಾಗುತ್ತದೆ. ಹಾಗಾಗಿ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಜೋಡಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸೆಲೆಬ್ರೀಟಿಗಳ ಮಧ್ಯೆ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣದಿಂದ ಮೂರು ದಿನಗಳ ಮದುವೆಯನ್ನ ಹಮ್ಮಿಕೊಂಡಿದ್ದು, ಇದರಲ್ಲಿ ಒಂದು ದಿನ ಸಾರ್ವಜನಿಕರಿಗೆ ಹಾಗೂ ಅಭಿಮಾನಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.? ]

ಡಿಸೆಂಬರ್ 9 ರಂದು ಮುಹೂರ್ತ
ಡಿಸೆಂಬರ್ 9 ರಂದು ಯಶ್, ರಾಧಿಕಾ ಪಂಡಿತ್ ಅವರ ಮಾಂಗಲ್ಯಧಾರಣೆ ಕಾರ್ಯಕ್ರಮ ನೆರೆವೇರಲಿದ್ದು, ಈ ಶುಭ ಘಳಿಗೆಗೆ ಕೇವಲ ಕುಟುಂಬಸ್ಥರು, ಹಾಗೂ ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಡಿಸೆಂಬರ್ 10 ರಂದು ಆರತಕ್ಷತೆ
ಮಾಂಗಲ್ಯಧಾರಣೆ ಮುಗಿಸಿದ ನಂತರ ಡಿಸೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನ ಅಯೋಜಿಸಲಾಗಿದೆ. ಈ ಆರತಕ್ಷತೆಗೆ ಪಾಸ್ ವ್ಯವಸ್ಥೆಯನ್ನ ಮಾಡಿದ್ದು, ಕೇವಲ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತೆ.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ' ]

ಡಿಸೆಂಬರ್ 11 ಅಭಿಮಾನಿಗಳಿಗೆ ಮೀಸಲು
ಇನ್ನೂ ಡಿಸೆಂಬರ್ 11, ಭಾನುವಾರವೂ ಆರತಕ್ಷತೆ ಕಾರ್ಯಕ್ರಮ ಮುಂದುವರೆಯಲಿದ್ದು, ಈ ದಿನ ಕೇವಲ ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅವತ್ತು ಎಲ್ಲ ಅಭಿಮಾನಿಗಳು ಮುಕ್ತವಾಗಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ ನೇರವಾಗಿ ಶುಭಾ ಹಾರೈಸಬಹುದು. ಇನ್ನೂ ಅಭಿಮಾನಿಗಳಿಗಾಗಿ ವಿಶೇಷ ಊಟದ ವ್ಯವಸ್ಥೆಯನ್ನ ಕೂಡ ಏರ್ಪಡಿಸಲಾಗಿದೆ.

ಹೀಗೆ, ಶಾಸ್ತ್ರ, ಸಂಪ್ರದಾಯಳಿಂದ ನಡೆಯಲಿರುವ ಯಶ್-ರಾಧಿಕಾ ಜೋಡಿ ಮದುವೆಗೆ, ಸಿನಿತಾರೆಯರು, ಕುಟುಂಬಸ್ಥರ ಜೊತೆ ಅಭಿಮಾನಿ ದೇವರಗಳು ಸಾಕ್ಷಿಯಾಗಲಿರುವುದು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಅಭಿಮಾನಿ ಬಳಗಕ್ಕೆ ಸಂಸತ ನೀಡಿದೆ.

English summary
Rocking Star Yash and Radhika Pandit wedding is scheduled on December 9th, 10th and 11th at Tripura Vasini, Bengaluru Palace Ground. A separate reception for fans and general public on December 11.
Please Wait while comments are loading...

Kannada Photos

Go to : More Photos