»   » 'ಯಶ್-ರಾಧಿಕಾ'ಗೆ ಶುಭ ಹಾರೈಸಲು ಬಂದ ಜನಸಾಗರ; ನೂಕುನುಗ್ಗಲು, ಲಾಠಿ ಚಾರ್ಜ್ !

'ಯಶ್-ರಾಧಿಕಾ'ಗೆ ಶುಭ ಹಾರೈಸಲು ಬಂದ ಜನಸಾಗರ; ನೂಕುನುಗ್ಗಲು, ಲಾಠಿ ಚಾರ್ಜ್ !

Written by:
Subscribe to Filmibeat Kannada

ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆ ಹಿನ್ನಲೆ ಇಂದು (ಡಿಸೆಂಬರ್ 11) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು.

ಸ್ಯಾಂಡಲ್ ವುಡ್ ನ ನೂತನ ಜೋಡಿಗಳಿಗೆ ಶುಭ ಹಾರೈಸಲೆಂದು ರಾಜ್ಯದ ವಿವಿದ ಕಡೆಗಳಿಂದ ಅಭಿಮಾನಿಗಳು ಆಗಮಿಸಿದ್ದರು. ನಿಶ್ಚಿತಾರ್ಥ ಹಾಗೂ ಮದುವೆ ಮುಹೂರ್ತವನ್ನ ನೋಡದ ಅದೇಷ್ಟೋ ಅಭಿಮಾನಿಗಳು ಭಾನುವಾರ ನಡೆದ ಆರತಕ್ಷತೆಯಲ್ಲಿ ಭಾಗವಹಿಸಿದರು.['ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್]

ಅಭಿಮಾನಿಗಳಿಗಾಗಿ ಆರತಕ್ಷತೆ

ಅಭಿಮಾನಿಗಳಿಗಾಗಿ ಆರತಕ್ಷತೆ

ಡಿಸೆಂಬರ್ 9 ರಂದು ಮಾಂಗಲ್ಯಧಾರಣೆ ಮುಗಿಸಿದ, ಯಶ್ ಹಾಗೂ ರಾಧಿಕಾ ಪಂಡಿತ್, ಡಿಸೆಂಬರ್ 10 ರಂದು ಗಣ್ಯರಿಗಾಗಿ ಅರಮನೆ ಮೈದಾನದಲ್ಲಿ ರಿಸಪ್ಷನ್ ಏರ್ಪಡಿಸಿದ್ದರು. ಇವೆರೆಡು ದಿನಗಳು ಅಭಿಮಾನಿಗಳಿಗೆ ಪ್ರವೇಶವಿರಲಿಲ್ಲ. ಹೀಗಾಗಿ ಮೂರನೇ ದಿನ ಡಿಸೆಂಬರ್ 11 ರಂದು ಬರಿ ಅಭಿಮಾನಿಗಳಿಗೆ ಮಾತ್ರ, ಅರಮನೆ ಮೈದಾನದಲ್ಲಿ ಆರತಕ್ಷತೆ ಅಯೋಜಿಸಲಾಗಿತ್ತು.[ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ]

ವಿಶೇಷ ಊಟದ ವ್ಯವಸ್ಥೆ

ವಿಶೇಷ ಊಟದ ವ್ಯವಸ್ಥೆ

'ಯಶ್-ರಾಧಿಕಾ ಪಂಡಿತ್' ಅವರಿಗೆ ವಿಶ್ ಮಾಡಲು ಬಂದಿದ್ದ ಅಭಿಮಾನಿಗಳಿಗೆ ವಿಶೇಷವಾದ ಊಟದ ವ್ಯವಸ್ಥೆಯನ್ನ ಮಾಡಲಾಗಿತ್ತು. ಸುಮಾರು 30 ಸಾವಿರಕ್ಕೂ ಅಧಿಕ ಜನಗಳಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿತ್ತು.[ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ]

ದೇಸಿ ಶೈಲಿಯ ಊಟ

ದೇಸಿ ಶೈಲಿಯ ಊಟ

ಅಭಿಮಾನಿಗಳಿಗಾಗಿ ದೇಸಿ ಶೈಲಿಯಲ್ಲಿ, ಬಫೆ ಹಾಗೂ ಬಾಲೆ ಎಲೆ ವ್ಯವಸ್ಥೆಯ ಊಟವನ್ನ ಸಿದ್ದ ಮಾಡಲಾಗಿತ್ತು. ಪೂರಿ-ಸಾಗು, ಪಲಾವ್, ಅನ್ನ ಸಾಂಬರ್, ಮುದ್ದೆ, ಪಾಯಸ, ಬೂಂದಿ, ಜಿಲೇಬಿ ಊಟವನ್ನ ಅಭಿಮಾನಿಗಳಿಗಾಗಿ ಮಾಡಿಸಲಾಗಿತ್ತು.['ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಮಂಡ್ಯ ಸ್ಟೈಲ್ ನಲ್ಲಿ ಕಂಗೊಳಿಸುತ್ತಿದ್ದ ನೂತನ ದಂಪತಿ

ಮಂಡ್ಯ ಸ್ಟೈಲ್ ನಲ್ಲಿ ಕಂಗೊಳಿಸುತ್ತಿದ್ದ ನೂತನ ದಂಪತಿ

ಮುಹೂರ್ತ ಹಾಗೂ ಮೊದಲನೇ ದಿನ ಆರತಕ್ಷತೆಯಲ್ಲಿ ಸವ್ಯಸಾಚಿ ವಿನ್ಯಾಸದ ಉಡುಪುಗಳಲ್ಲಿ ಮಿಂಚಿದ್ದ 'ಯಶ್-ರಾಧಿಕಾ' ಭಾನುವಾರ ಮಂಡ್ಯ ಸ್ಟೈಲ್ ನಲ್ಲಿ ಕಂಗೊಳಿಸುತ್ತಿದ್ದರು.

ರಾಜ್ಯ-ಹೊರರಾಜ್ಯಗಳಿಂದ ಬಂದಿದ್ದ ಅಭಿಮಾನಿಗಳು

ರಾಜ್ಯ-ಹೊರರಾಜ್ಯಗಳಿಂದ ಬಂದಿದ್ದ ಅಭಿಮಾನಿಗಳು

ಕಾರು, ಜೀಪು, ಟೆಂಪೋಗಳಲ್ಲಿ ಕುಟುಂಬ ಸಮೇತರಾಗಿ ನವ ವಿವಾಹಿತ ಜೋಡಿಗೆ ಶುಭಾಶಯ ಕೋರಲು ಅಭಿಮಾನಿಗಳು ಬಂದಿದ್ದರು. ಉತ್ತರ ಕರ್ನಾಟಕದಿಂದ ಹೆಚ್ಚು ಜನರು ಆಗಮಿಸಿದ್ದು ರಾಕಿಂಗ್ ಜೋಡಿ ಆರತಕ್ಷತೆಯ ವಿಶೇಷವಾಗಿತ್ತು.[ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ]

ನೂಕುನುಗ್ಗಲು-ಲಾಠಿಚಾರ್ಜ್

ನೂಕುನುಗ್ಗಲು-ಲಾಠಿಚಾರ್ಜ್

ಇನ್ನೂ ಬೆಳಿಗ್ಗೆ 8ಗಂಟೆಯಿಂದನೇ ಅರಮನೆ ಮೈದಾನದಲ್ಲಿ ಬೀಡುಬಿಟ್ಟಿದ್ದ ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ, ಪೊಲೀಸರು ಹರ ಸಾಹಸ ಪಟ್ಟರು. ಈ ವೇಳೆ ಹೆಚ್ಚು ಜನ ನೆರದಿದ್ದರಿಂದ ನೂಕುನುಗ್ಗಲು ಕೂಡ ಆಯಿತು. ಕೊನೆಗೂ ಲಾಠಿಚಾರ್ಜ್ ಕೂಡ ಮಾಡಬೇಕಾಯಿತು.[ ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ]

English summary
After the grand wedding, Yash and Radhika Pandit hosted a lavish reception at Tripura Vasini, Palace Grounds, Bengaluru. hers is the full details of Yash and Radhika Pandit december 11th reception
Please Wait while comments are loading...

Kannada Photos

Go to : More Photos