»   » ಯಶ್ ಗೆ, ಈ ವರ್ಷ 'ಮಾಸ್ಟರ್ ಪೀಸ್', ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತಾ?

ಯಶ್ ಗೆ, ಈ ವರ್ಷ 'ಮಾಸ್ಟರ್ ಪೀಸ್', ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತಾ?

Posted by:
Subscribe to Filmibeat Kannada

'ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ' ಸಿನಿಮಾ ಚಂದನವನದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರು 'ಮಾಸ್ಟರ್ ಪೀಸ್' ಎಂಬ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ 'ಮಾಸ್ಟರ್ ಪೀಸ್' 2015, ಕ್ರಿಸ್ ಮಸ್ ಹಬ್ಬಕ್ಕೆ ಭರ್ಜರಿಯಾಗಿ ತೆರೆಕಾಣಲಿದೆ.

ಸದ್ಯಕ್ಕೆ ಯಶ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುವ ಈ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್' ಕೂಡ ಯಶಸ್ಸು ತಂದುಕೊಡುತ್ತಾ? ಅಂತ ಗಾಂಧಿನಗರದಲ್ಲಿ ಭಾರಿ ಚರ್ಚೆ ಆಗುತ್ತಿದೆ.[ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]

ಚೊಚ್ಚಲ ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಇಡೀ ಗಾಂಧಿನಗರದ ಯಶ್ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಬಹಳ ನಿರೀಕ್ಷೆ ಹುಟ್ಟಿಸುತ್ತಿದೆ. ಈಗಾಗಲೇ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ನಿಂದ ಪ್ರೇಕ್ಷಕರನ್ನು ಭಾರಿ ಕುತೂಹಲಕ್ಕೀಡು ಮಾಡಿದೆ.

ಕಳೆದ ವರ್ಷ ಡಿಸೆಂಬರ್ 25, ಕ್ರಿಸ್ ಮಸ್ ಹಬ್ಬಕ್ಕೆ ತೆರೆ ಕಂಡ 'ಮಿ.ಅಂಡ್ ಮಿಸಸ್. ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಆದ್ದರಿಂದ ಈ ವರ್ಷನೂ ಅದೇ ದಿನದಂದು 'ಮಾಸ್ಟರ್ ಪೀಸ್' ರಿಲೀಸ್ ಮಾಡಲು ನಿರ್ದೇಶಕ ಮಂಜು ಮಾಂಡವ್ಯ ನಿರ್ಧರಿಸಿದ್ದಾರೆ.['ಮಾಸ್ಟರ್ ಪೀಸ್' ನಿರ್ದೇಶಕನಿಗೆ ಯಶ್ ಕೊಟ್ಟ ಸರ್ ಪ್ರೈಸ್]

ಇತ್ತೀಚೆಗೆ 'ಮಾಸ್ಟರ್ ಪೀಸ್' ನಿರ್ದೇಶಕ ಮಂಜು ಅವರು ತಮ್ಮ ಹುಟ್ಟುಹಬ್ಬವನ್ನು, ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಯಶ್ ಅವರ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದು, ಆ ಸಂದರ್ಭದಲ್ಲಿ ಯಶ್ ಅವರು 'ಮಾಸ್ಟರ್ ಪೀಸ್' ಕ್ರಿಸ್ ಮಸ್ ಹಬ್ಬಕ್ಕೆ ಬಿಡುಗಡೆ ಆಗುತ್ತೆ ಎಂದಿದ್ದರು.

ಅಂದಹಾಗೆ ರಾಕಿಂಗ್ ಸ್ಟಾರ್ ಗೆ ಡಿಸೆಂಬರ್ ತಿಂಗಳು ಲಕ್ಕಿ ತಿಂಗಳಂತೆ, ಆದ್ದರಿಂದ ಅವರ ನಿರೀಕ್ಷೆಯ ಚಿತ್ರವಾದ 'ಮಾಸ್ಟರ್ ಪೀಸ್' ಕೂಡ ಅದೇ ತಿಂಗಳಿನಲ್ಲಿ ತೆರೆ ಕಾಣಲಿದೆಯಂತೆ.[ಮಂಜು ಮಾಂಡವ್ಯ ಆಕ್ಷನ್ ಕಟ್ ನಲ್ಲಿ ರಾಕಿಂಗ್ ಸ್ಟಾರ್]

ಇದೇ ಮೊದಲ ಬಾರಿಗೆ ಹೊಸ ನಾಯಕಿ ಶಾನ್ವಿ ಶ್ರೀವಾಸ್ತವ್ ಅವರು ಯಶ್ ಅವರೊಂದಿಗೆ ಡ್ಯುಯೆಟ್ ಹಾಡಿದ್ದು, ಮಾಹಿತಿ ಪ್ರಕಾರ ಯಶ್ ಅವರು ಈ ಚಿತ್ರದಲ್ಲಿ ಹೀರೋ ಹಾಗೂ ವಿಲನ್ ಎಂಬ ಎರಡು ರೋಲ್ ನಲ್ಲಿ ಮಿಂಚಿದ್ದಾರೆ.

ಒಟ್ನಲ್ಲಿ ಈ ಕ್ರಿಸ್ ಮಸ್ ಹಬ್ಬಕ್ಕೆ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಭಾರಿ ಗಿಫ್ಟ್ ನೀಡೋದು ಪಕ್ಕಾ ಎಂದಾಯ್ತು.

English summary
Kannada Actor Yash starrer 'Masterpiece' is day by day raising anticipation in the cine lovers. The directorial debut of Manju Mandavyya is slated to release for December 2015.
Please Wait while comments are loading...

Kannada Photos

Go to : More Photos