»   » ಮಂಡ್ಯದಲ್ಲಿ ಅಂಬಿ ಮಾಮನ ಬಗ್ಗೆ ಯಶ್ ಹೇಳಿದ್ದೇನು?

ಮಂಡ್ಯದಲ್ಲಿ ಅಂಬಿ ಮಾಮನ ಬಗ್ಗೆ ಯಶ್ ಹೇಳಿದ್ದೇನು?

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸದ್ಯದ ಬಹು ಬೇಡಿಕೆಯ ನಟ ರಾಕಿಂಗ್ ಸ್ಟಾರ್ ಯಶ್. ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಂತೆ ಯಶ್ ಗಿರುವ ಸ್ಟಾರ್ ವಾಲ್ಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಂತ, ಯಶ್ ಎಲ್ಲೂ ಧಿಮಾಕು ತೋರಿಸುತ್ತಿಲ್ಲ.

ಅಭಿಮಾನಿಗಳ ಅಭಿಮಾನವನ್ನ ಆರಾಧಿಸುತ್ತಿದ್ದಾರೆ. ಹೋದಲ್ಲೆಲ್ಲಾ ತಮ್ಮ ಫ್ಯಾನ್ಸ್ ಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. 'ನಾವೆಲ್ಲರೂ ಒಂದೇ' ಅನ್ನುವ ಸಂದೇಶವನ್ನೂ ಸಾರುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲೂ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದು ಇದೇ. ವಿಶೇಷ ಅಂದ್ರೆ, ರಾಕಿಂಗ್ ಸ್ಟಾರ್ ಯಶ್ ಜೊತೆ ರೆಬೆಲ್ ಸ್ಟಾರ್ ಅಂಬರೀಶ್ ಇದ್ದರು. ಅಂಬಿ ಮಾಮನ ಬಗ್ಗೆ ಯಶ್ ಏನು ಹೇಳಿದರು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

'ಯಶ'ಸ್ಸಿಗೆ ಅಂಬಿ ಕಾರಣ

'ಯಶ'ಸ್ಸಿಗೆ ಅಂಬಿ ಕಾರಣ

ರಾಕಿಂಗ್ ಸ್ಟಾರ್ ಯಶ್ ಇವತ್ತು ಈ ಮಟ್ಟ ತಲುಪಿದ್ದಾರೆ ಅಂದ್ರೆ ಅದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಕಾರಣ. ಹಾಗಂತ ಖುದ್ದು ಯಶ್ ಹೇಳಿಕೊಂಡಿದ್ದಾರೆ. ''ನಾನಿವತ್ತು ಹೀಗಿರುವುದಕ್ಕೆ ಅಂಬಿ ಅಣ್ಣ ಕಾರಣ. ನನ್ನೊಬ್ಬಿನಿಗೆ ಅಲ್ಲ, ನನ್ನಂತಹ ಎಷ್ಟೋ ಕಲಾವಿದರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಭೇದಭಾವ ಇಲ್ಲದೆ'' ಅಂತ ಸಮಾರಂಭವೊಂದರಲ್ಲಿ ಯಶ್ ಹೇಳಿದರು. [ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್]

ಬೆಳೆಯಲು ಇಚ್ಛಿಸುವವರಿಗೆ ಅಂಬಿ ಶಕ್ತಿ

ಬೆಳೆಯಲು ಇಚ್ಛಿಸುವವರಿಗೆ ಅಂಬಿ ಶಕ್ತಿ

''ಯಾರು ಬೆಳೀತೀನಿ ಅಂತ ನಿಂತುಕೊಳ್ಳುತ್ತಾರೋ, ಅವರೆಲ್ಲರಿಗೂ ಶಕ್ತಿ ತುಂಬುವವರು ನಮ್ಮ ಅಂಬರೀಶ್ ಅಣ್ಣ. ನನ್ನ ಬೆಳವಣಿಗೆಯಲ್ಲಿ ಅವರ ಪಾಲು ತುಂಬಾ ಇದೆ. ಅದನ್ನ ನಾನು ಯಾವತ್ತೂ ಮರೆಯೋಲ್ಲ'' - ಯಶ್ [ಯಾರು ನಿಜವಾದ 'ಮಂಡ್ಯ'ದ ಮಾಸ್ಟರ್ ಪೀಸ್?]

''ನಾನು ಅಂಬಿ ಫ್ಯಾನು''

''ನಿಮ್ಮೆಲ್ಲರ ಪ್ರೀತಿ, ಹಾರೈಕೆ ಅಂಬರೀಶ್ ಅಣ್ಣನ ಮೇಲೆ ಹೀಗೆ ಇರಲಿ. ನಾನು ನಿಮ್ಮ ಹಾಗೇ ಅವರ ಫ್ಯಾನು'' ಅಂತ ಇದೇ ಸಂದರ್ಭದಲ್ಲಿ ಯಶ್ ಹೇಳಿದರು. ಅಂಬಿ ಬಗ್ಗೆ ಯಶ್ ಮಾಡಿರುವ ಗುಣಗಾನದ ಸಂಪೂರ್ಣ ವಿಡಿಯೋ ಇಲ್ಲಿದೆ, ಕ್ಲಿಕ್ ಮಾಡಿ....

ಅಂಬಿ ಜೊತೆ ಯಶ್ 'ಡ್ರಾಮಾ'

ಅಂಬಿ ಜೊತೆ ಯಶ್ 'ಡ್ರಾಮಾ'

'ಡ್ರಾಮಾ' ಚಿತ್ರದ ಮೂಲಕ ಯೋಗರಾಜ್ ಭಟ್ ಕ್ಯಾಂಪಿಗೆ ಸೇರಿದ ಯಶ್, ಅಂಬಿ ಮಾಮನ ಅಚ್ಚುಮೆಚ್ಚಿನ ನಟರಾದರು. 'ಡ್ರಾಮಾ' ಹಿಟ್ ಆಯ್ತು. ನಂತರ ಬಂದ 'ರಾಜಾಹುಲಿ' ಚಿತ್ರದಲ್ಲೂ ಅಂಬಿ ಕಟ್ಟಾ ಅಭಿಮಾನಿಯಾಗಿ ಯಶ್ ತೆರೆಮೇಲೆ ಮಿಂಚಿದ್ದರು. ಬೆಳ್ಳಿತೆರೆಯಲ್ಲಿ ಅಂದು ಅಂಬಿಗೆ ಸಲಾಂ ಹೊಡೆದಿದ್ದ ಯಶ್, ಇಂದು ಎಲ್ಲರ ಮುಂದೆ ಅದೇ ಅಂಬರೀಶ್ ಗುಣಗಾನ ಮಾಡಿದ್ದಾರೆ. [ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?]

ಯಶ್ ಬಾಯಲ್ಲಿ ಖಡಕ್ ಡೈಲಾಗ್ಸ್

ಯಶ್ ಬಾಯಲ್ಲಿ ಖಡಕ್ ಡೈಲಾಗ್ಸ್

ಮಂಡ್ಯದಲ್ಲಿ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಅಂಬಿಯ ಗುಣಗಾನ ಮಾಡಿ, ಸಾವಿರಾರು ಅಭಿಮಾನಿಗಳಿಂದ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದ ಯಶ್, ತಮ್ಮ ಸೂಪರ್ ಹಿಟ್ ಸಿನಿಮಾಗಳಾದ 'ರಾಜಾಹುಲಿ', 'ಗೂಗ್ಲಿ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಗಳ ಡೈಲಾಗ್ ಕೂಡ ಹೊಡೆದು ಅಭಿಮಾನಿಗಳನ್ನ ರಂಜಿಸಿದರು.

English summary
Kannada Actor Yash has spoken about Rebel Star Ambareesh in a event held in Mandya. Rocking Star has revealed that he is a big fan of Ambareesh. Watch the video here.
Please Wait while comments are loading...

Kannada Photos

Go to : More Photos