»   » ಎರಡು ವಾರಗಳಲ್ಲಿ 'ಮಾಸ್ಟರ್ ಪೀಸ್' ಬಾಚಿದ್ದು ಎಷ್ಟು?

ಎರಡು ವಾರಗಳಲ್ಲಿ 'ಮಾಸ್ಟರ್ ಪೀಸ್' ಬಾಚಿದ್ದು ಎಷ್ಟು?

Posted by:
Subscribe to Filmibeat Kannada

'ಮಾಸ್ಟರ್ ಪೀಸ್' ಸಿನಿಮಾದ ಬಗ್ಗೆ ಯಾರು ಏನೇ ಕಾಮೆಂಟ್ ಮಾಡಿದ್ರೂ, ಕಲೆಕ್ಷನ್ ನಲ್ಲಿ ಮಾತ್ರ ಯಶ್ ಅಭಿನಯದ ಈ ಚಿತ್ರವನ್ನ ಮೀರಿಸುವವರು ಯಾರೂ ಇಲ್ಲ!

ಮೊದಲ ದಿನವೇ ಕರ್ನಾಟಕದಾದ್ಯಂತ ಕೋಟಿ ಕೋಟಿ ಲೂಟಿ ಹೊಡೆದ 'ಮಾಸ್ಟರ್ ಪೀಸ್' ಸಿನಿಮಾ ಎರಡು ವಾರಗಳಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.


yash

ರಾಜ್ಯದ ಮೂಲೆ ಮೂಲೆಯಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಇನ್ನೂ ಗಟ್ಟಿಯಾಗಿ ನೆಲೆಯೂರಿರುವ 'ಮಾಸ್ಟರ್ ಪೀಸ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದೆ. ಈ ಬಗ್ಗೆ ನಿರ್ದೇಶಕ ಮಂಜು ಮಾಂಡವ್ಯ ಮತ್ತು ನಾಯಕ ನಟ ಯಶ್ ಸಂತಸ ವ್ಯಕ್ತಪಡಿಸುತ್ತಾರೆ. ಸದ್ಯದಲ್ಲೇ 'ಮಾಸ್ಟರ್ ಪೀಸ್' ವಿದೇಶಗಳಲ್ಲೂ ಬಿಡುಗಡೆ ಆಗಲಿದೆ. [ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]


ಅಲ್ಲಿಗೆ, 'ರಾಜಾಹುಲಿ', 'ಗೂಗ್ಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸೇರಿದಂತೆ ಯಶ್ ರವರ ಹಿಟ್ ಲಿಸ್ಟ್ ನಲ್ಲಿ 'ಮಾಸ್ಟರ್ ಪೀಸ್' ಕೂಡ ಅಧಿಕೃತ ಸೇರ್ಪಡೆ ಆಗಿದೆ.

English summary
According to the sources, Kannada Actor Yash starrer Kannada Movie 'Masterpiece' box office collection is Rs.20 crore in 2 weeks.
Please Wait while comments are loading...

Kannada Photos

Go to : More Photos