»   » ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್

ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್

Posted by:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ 'ಮಾಸ್ಟರ್ ಪೀಸ್' ಸಿನಿಮಾ ತಿಂಗಳುಗಳಿಂದ ರೆಡಿಯಾಗುತ್ತಲೇ ಇದೆ. ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಲುಕ್ ನಲ್ಲಿ ವೀರ ಸೇನಾನಿಯಂತೆ ಯಶ್ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಮಿಂಚಲಿದ್ದಾರೆ.

ಸಂಭಾಷಣೆಕಾರರಾಗಿದ್ದ ಮಂಜು ಮಾಂಡವ್ಯ ಮೊದಲ ಬಾರಿ 'ಮಾಸ್ಟರ್ ಪೀಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಂತರ ಶುರುವಾದ 'ಮಾಸ್ಟರ್ ಪೀಸ್' ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ.

Yash starrer 'Masterpiece' to release in December

'ಮಾಸ್ಟರ್ ಪೀಸ್' ಅಡ್ಡದಿಂದ ಬಂದಿರುವ ಖಾಸ್ ಖಬರ್ ಅಂದ್ರೆ ಇದೆ. ಯಶ್ ರನ್ನ ತೆರೆಮೇಲೆ ನೋಡೋಕೆ ಇನ್ನೂ ಎರಡು ತಿಂಗಳು ಕಾಯ್ಬೇಕಾ ಅಂತ ನೀವು ಪ್ರಶ್ನಿಸಬಹುದು.

ಈಗಷ್ಟೆ ಎಡಿಟಿಂಗ್ ಟೇಬಲ್ ಮೇಲೆ ಬಂದಿರುವ 'ಮಾಸ್ಟರ್ ಪೀಸ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 'ಮಾಸ್ಟರ್ ಪೀಸ್' ಚಿತ್ರ ಬಿಡುಗಡೆಗೆ ಡಿಸೆಂಬರ್ ಸೂಕ್ತ ಸಮಯ ಅಂತ ಯಶ್ ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. [ಮಾಸ್ಟರ್ಪೀಸ್ ಕನಿಷ್ಠ ದೀಪಾವಳಿಗಾದರೂ ಬರತ್ತಾ ಯಶ್?]

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಕೂಡ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿತ್ತು. ಲಾಂಗ್ ವೀಕೆಂಡ್ ಮತ್ತು ನ್ಯೂ ಇಯರ್ ಸಂದರ್ಭದಲ್ಲಿ ಚಿತ್ರ ರಿಲೀಸ್ ಆಗಿದ್ದರಿಂದ ಕಲೆಕ್ಷನ್ ಕೂಡ ಚೆನ್ನಾಗಿತ್ತು. ['ಮಾಸ್ಟರ್ ಪೀಸ್' ನಿರ್ದೇಶಕನಿಗೆ ಯಶ್ ಕೊಟ್ಟ ಸರ್ ಪ್ರೈಸ್]

ಕ್ರಿಸ್ಮಸ್ ಹಬ್ಬ ಲಕ್ ಅಂತ ಯಶ್ ಪರಿಗಣಿಸಿರುವುದಕ್ಕೆ ಕಾರಣವೋ ಏನೋ, 'ಮಾಸ್ಟರ್ ಪೀಸ್' ಕೂಡ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಅಲ್ಲಿಗೆ, ಈ ಬಾರಿ ಕೂಡ ಯಶ್ 'ಸ್ಯಾಂಡಲ್ ವುಡ್ ಸುಲ್ತಾನ್' ಆಗ್ತಾರಾ ಅಂತ ಕಾದು ನೋಡಬೇಕಷ್ಟೆ.

English summary
Kannada Actor Yash starrer 'Masterpiece' will hit the screens this December. Manju Mandavya is directing this movie.
Please Wait while comments are loading...

Kannada Photos

Go to : More Photos