»   » ರಾಕಿಂಗ್ ಸ್ಟಾರ್ ಯಶ್ ಜೊತೆ ಸಮಂತಾ ಡ್ಯುಯೆಟ್

ರಾಕಿಂಗ್ ಸ್ಟಾರ್ ಯಶ್ ಜೊತೆ ಸಮಂತಾ ಡ್ಯುಯೆಟ್

Posted by:
Subscribe to Filmibeat Kannada

ಸ್ಯಾಂಡಲ್ ವುಡ್ 'ರಾಜಾಹುಲಿ' ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೊಸ ಜೋಡಿ ಸಿಕ್ಕಿದೆ. ಇಷ್ಟು ದಿನ ದಕ್ಷಿಣದಲ್ಲಿ ಮಿಂಚುತ್ತಿದ್ದ ಬಳ್ಳಿ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಳುಕುವ ಸಮಯ ಬಂದಿದೆ. ಆ ಬಳುಕುವ ಬಳ್ಳಿಯ ಹೆಸರು ಸಮಂತಾ ರುತ್ ಪ್ರಭು.

ಕೆ.ಮಂಜು ನಿರ್ಮಿಸಲಿರುವ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಸಮಂತಾ ಆಯ್ಕೆಯಾಗಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ವಾಲು' ರೀಮೇಕ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಗೆ ಜೋಡಿಯಾಗಲಿದ್ದಾರೆ ಸಮಂತಾ. 'ಮುರಳಿ ಮೀಟ್ಸ್ ಮೀರಾ' ಖ್ಯಾತಿಯ ನಿರ್ದೇಶಕ ಮಹೇಶ್ ರಾವ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. [ಬನಿಯನ್ ಜಾಹೀರಾತಿನಲ್ಲಿ ಕಾಣಿಸಲಿರುವ ನಟಿ ಸಮಂತಾ]

Yash To Romance with Samantha!

ಈ ಹಿಂದೆ ಕೆ ಮಂಜು ಅವರು ರಾಜಾಹುಲಿ ಚಿತ್ರ ನಿರ್ಮಿಸಿದ್ದರು. ಆ ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಇನ್ನೂ ಹೆಸರಿಡದ ಈ ಚಿತ್ರ ಜೂನ್ ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಯಶ್ ಅವರ ಮಾಸ್ಟರ್ ಪೀಸ್ ಮುಗಿದ ಬಳಿಕ ಈ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಅಂದಹಾಗೆ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಶತಕ ಪೂರೈಸಿದ್ದು, ಇನ್ನೂ ಬಾಕ್ಸ್ ಆಫೀಸಲ್ಲಿ ಸದ್ದು ಮಾಡುತ್ತಿದೆ. ಯಶ್ ಇದೀಗ ಮೋಸ್ಟ್ ಬ್ಯಾಂಕಬಲ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ.

ಸಮಂತಾ ಈ ಹಿಂದೆ ಕಿಚ್ಚ ಸುದೀಪ್ ಜೊತೆ ಅಭಿನಯಿಸಿದ್ದಾರೆ. ಆದರೆ ಅದು ಕನ್ನಡ ಚಿತ್ರ ಅಲ್ಲ, ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಬಂದಂತಹ 'ಈಗ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ ಸಮಂತಾ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash, one of the top star of Kannada film industry will romance Samantha. Yes, it is official now, Raja Huli star will now romance Tollywood and Kollywood actress Samantha Ruth Prabhu in his upcoming movie with producer K Manju.
Please Wait while comments are loading...

Kannada Photos

Go to : More Photos