»   » ಯಶ್ 'ಯಶೋಮಾರ್ಗ'ದಿಂದ ಮತ್ತೊಂದು ಶ್ಲಾಘನೀಯ ಕೆಲಸ

ಯಶ್ 'ಯಶೋಮಾರ್ಗ'ದಿಂದ ಮತ್ತೊಂದು ಶ್ಲಾಘನೀಯ ಕೆಲಸ

Posted by:
Subscribe to Filmibeat Kannada

ಬೆಳ್ಳಿತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಹೀರೋ ಆಗಿರುವ ಯಶ್ ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದರ ಜೊತೆಗೆ, ಆ ಭಾಗದ 40 ಕ್ಕೂ ಹೆಚ್ಚು ಕೆರೆಗಳ ಹೂಳೆತ್ತುವ ಮಹತ್ತರ ಕಾರ್ಯ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅದರ ಜೊತೆಗೆ ಈಗ ಯಶ್ ತಮ್ಮ 'ಯಶೋಮಾರ್ಗ ಫೌಂಡೇಶನ್' ವತಿಯಿಂದ ಮತ್ತೊಂದು ಶ್ಲಾಘನೀಯ ಕೆಲಸ ಮಾಡಿದ್ದಾರೆ.[ಯಶ್ ಮಹತ್ತರ ಕಾರ್ಯಕ್ಕೆ ಸಿಕ್ಕಿದೆ ಮೊದಲ ಪ್ರತಿಫಲ]

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೆರೆಗಳನ್ನ ಅಭಿವೃದ್ಧಿ ಪಡಿಸುವ ಸಲುವಾಗಿ ಕೈಗೊಂಡಿದ್ದ ಹೂಳೆತ್ತುವ ಕಾರ್ಯಕ್ಕೆ ಮೊದಲ ಪ್ರತಿಫಲವಾಗಿ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯಲ್ಲಿ ಈಗಾಗಲೇ ಅಂತರ್ಜಲದ ನೀರು ಉಕ್ಕುತ್ತಿರುವುದು ಸಾಕ್ಷಿಯಾಗಿದೆ. ಆದರೆ ಯಶ್ ರವರು ಈಗ ಯಶೋಮಾರ್ಗದ ಫೌಂಡೇಶನ್ ವತಿಯಿಂದ ಮಾಡಿರುವ ಶ್ಲಾಘನೀಯ ಕೆಲಸ ಏನು ಗೊತ್ತಾ?..

ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಮುಂದಾಗಿದ್ದಾರೆ ಯಶ್

ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಮುಂದಾಗಿದ್ದಾರೆ ಯಶ್

ರಾಜ್ಯದಲ್ಲಿ ಬರಗಾಲದ ಕಾರಣ ಹಲವು ಪ್ರದೇಶಗಳಲ್ಲಿ ದನ-ಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಹಲವು ಪ್ರದೇಶಗಳಲ್ಲಿ ಮೇವಿಲ್ಲದೇ ಜಾನುವಾರುಗಳು ನರಳುತ್ತಿರುವ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ನೋಡಿ ನಟ ಯಶ್ ಈಗ ಮೇವು ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]

ಯಶೋಮಾರ್ಗ'ದಿಂದ ಪರಿಸ್ಥಿತಿ ಅಧ್ಯಯನ

ಯಶೋಮಾರ್ಗ'ದಿಂದ ಪರಿಸ್ಥಿತಿ ಅಧ್ಯಯನ

ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಮುಂದಾಗಿರುವ ಯಶ್, 'ಯಶೋಮಾರ್ಗ' ತಂಡದಿಂದ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶಗಳು ಮತ್ತು ಕೊಳ್ಳೇಗಾಲ ತಾಲ್ಲೂಕಿನ ತಳಮಟ್ಟದ ಪ್ರದೇಶಗಳ ಪರಿಸ್ಥಿತಿ ಅಧ್ಯಯನ ಮಾಡಿಸಿದ್ದಾರೆ.

ಸಂಸದರು ಮತ್ತು ಪಶುಸಂಗೋಪನಾ ಸಚಿವರ ಸಹಾಯಕ್ಕಾಗಿ ಯಶ್ ಮಾತುಕತೆ

ಸಂಸದರು ಮತ್ತು ಪಶುಸಂಗೋಪನಾ ಸಚಿವರ ಸಹಾಯಕ್ಕಾಗಿ ಯಶ್ ಮಾತುಕತೆ

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಹಸಿವಿನಿಂದ ನರಳುತ್ತಿರುವ ಗೋವುಗಳ ಮನಕಲಕುವ ವಿಡಿಯೋಗಳು ನೋಡಿ ನೊಂದಿರುವ ಯಶ್, ಸಹಾಯಕ್ಕಾಗಿ ಮನವಿ ಮಾಡುತ್ತಿರುವ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ್ದಾರೆ. ಚಾಮರಾಜನಗರ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಧೃವ ನಾರಾಯಣ್ ಹಾಗೂ ಮಾನ್ಯ ಪಶುಸಂಗೋಪನಾ ಸಚಿವರಾದ ಶ್ರೀ ಎ.ಮಂಜು ಅವರೊಂದಿಗೆ ಪರಿಹಾರ ಕೇಳಿ ಮನವಿ ಮಾಡಿದ್ದಾರೆ.

ಸಮಸ್ಯೆ ಪರಿಹಾರ ನಿರೀಕ್ಷೆಯಲ್ಲಿ ರಾಕಿಂಗ್ ಸ್ಟಾರ್

ಸಮಸ್ಯೆ ಪರಿಹಾರ ನಿರೀಕ್ಷೆಯಲ್ಲಿ ರಾಕಿಂಗ್ ಸ್ಟಾರ್

ಮೇವಿನ ಸಮಸ್ಯೆ ಕುರಿತು ಮಾತುಕತೆ ನಡೆಸಿದಕ್ಕೆ ಸಚಿವರು ಮತ್ತು ಸಂಸದರು ಆ ಭಾಗದ ಒಂದೇ ಒಂದು ಗೋವು ಹಸಿವಿನಿಂದ ನರಳಲು ಬಿಡುವುದಿಲ್ಲ ಎಂಬ ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ಯಶ್ ಸ್ವತಃ ಟ್ವೀಟ್ ಮಾಡಿದ್ದಾರೆ.

ಮೇವು ಸರಬರಾಜು ಸಂಸ್ಥೆಗಳಿಗೆ ಯಶ್ ಅಭಿನಂದನೆಗಳು

ಮೇವು ಸರಬರಾಜು ಸಂಸ್ಥೆಗಳಿಗೆ ಯಶ್ ಅಭಿನಂದನೆಗಳು

ರಾಜ್ಯ ಸರ್ಕಾರ ಕೆಲವು ಗೋಶಾಲೆಗಳನ್ನು ತೆರೆದು ಮೇವು ಸರಬರಾಜು ಮಾಡುತ್ತಿದೆ. ಮಲೆ ಮಹದೇಶ್ವರ ಬೆಟ್ಟ ಮತ್ತು ಕೊಳ್ಳೇಗಾಲ ಪ್ರದೇಶಗಳಿಗೆ ಧ್ಯಾನ್ ಫೌಂಡೇಶನ್ ಮತ್ತು ಶ್ರೀ ರಾಮಚಂದ್ರಪುರ ಮಠ ಎರಡು ಸಂಸ್ಥೆಗಳು ದಿನನಿತ್ಯ ಸಾವಿರಾರು ಟನ್ ಗಟ್ಟಲೆ ಮೇವನ್ನು ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುತ್ತಿರುವುದಕ್ಕೆ ಯಶ್ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

English summary
Rocking Star Yash went ahead of Cattle Starvation problem in Male Mahadeshwara Hill Surrounding places and Kollegala Taluk Villages.
Please Wait while comments are loading...

Kannada Photos

Go to : More Photos