twitter
    For Quick Alerts
    ALLOW NOTIFICATIONS  
    For Daily Alerts

    ರವಿಚಂದ್ರನ್ ಬಗ್ಗೆ ಕೊಂಕು ನುಡಿದವರಿಗೆ ಗುಂಡ್ ಪಿನ್ ಚುಚ್ಚಿದ ಯೋಗರಾಜ್ ಭಟ್

    By Harshitha
    |

    ಕ್ರೇಜಿ ಸ್ಟಾರ್ ರವಿಚಂದ್ರನ್ ರವರ 'ಅಪೂರ್ವ' ಸಿನಿಮಾ ನೋಡಿ, ರವಿಮಾಮನ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುವವರ ಸಂಖ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ.

    'ಅಪೂರ್ವ' ಚಿತ್ರದ ಅಪೂರ್ವ ಸಂಗತಿಗಳನ್ನು ಅರಿಯದ ಕೆಲ ಕಿಡಿಗೇಡಿಗಳು ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ನಲ್ಲಿ ರವಿಚಂದ್ರನ್ ರವರ 'ಅಪೂರ್ವ' ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 'ಕಲಾವಿದ'ನನ್ನು ನಿಂದಿಸುತ್ತಿದ್ದಾರೆ. [ಹೆದರಿಕೊಂಡೇ 'ಅಪೂರ್ವ' ನೋಡಿದವರು ಬರೆದಿರುವ ಅಪರೂಪದ ಪತ್ರ.!]

    ಅಂಥವರಿಗೆ, ನಿನ್ನೆಯಷ್ಟೇ 'ಆಕ್ಸಿಡೆಂಟ್' ಸಿನಿಮಾ ಖ್ಯಾತಿಯ ರಾಜೇಂದ್ರ ಕಾರಂತ್ ಬಿಸಿ ಮುಟ್ಟಿಸಿದ್ದರು. 'ಅಪೂರ್ವ' ಚಿತ್ರದ ಬಗ್ಗೆ ಫೇಸ್ ಬುಕ್ ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಾ, ರಾಜೇಂದ್ರ ಕಾರಂತ್ ರವರು ರವಿಚಂದ್ರನ್ ರಿಗೆ 'ಹ್ಯಾಟ್ಸ್ ಆಫ್' ಹೇಳಿದ್ದರು. ಇದರಿಂದ ಸ್ಫೂರ್ತಿ ಪಡೆದಿರುವ ಕನ್ನಡ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಕೂಡ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಮುಂದೆ ಓದಿರಿ...

    ಯಾರಿಗೆ ಪತ್ರ.?

    ಯಾರಿಗೆ ಪತ್ರ.?

    ಕ್ರೇಜಿ ಸ್ಟಾರ್ ರವಿಚಂದ್ರನ್ ರವರನ್ನು ನಿಂದಿಸಲೆತ್ನಿಸುವವರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಪತ್ರ ಓದಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

    ಪತ್ರದಲ್ಲಿ ಏನಿದೆ.?

    ಪತ್ರದಲ್ಲಿ ಏನಿದೆ.?

    ''ಶ್ರೀ ರವಿಚಂದ್ರನ್ ಅವರನ್ನು ಪ್ರೀತಿಸುವವರಿಂದ ಅವರನ್ನು ನಿಂದಿಸಲೆತ್ನಿಸುವವರಿಗೊಂದು ಬಹಿರಂಗ ಪತ್ರ''

    ನಮಸ್ತೆ - ರವಿಚಂದ್ರನ್ ಅವರ ಚಿತ್ರ 'ಅಪೂರ್ವ', ಒಂದು ಅನುಭವಿ ತಂತ್ರಜ್ಞ ಹಾಗೂ ನಟನ ಒಂದು ಕುಶಲ ಪ್ರಯತ್ನ. ಕೇವಲ ಅನಿಸಿದ್ದು ಮಾಡುವವನೊಬ್ಬ ಕಟ್ಟಿ ಹಾಕಿದ ಕನಸದು. ಸಿನಿಮಾ ಎನ್ನುವುದು ನಿರಂತರ ತಪಸ್ಸು ಎಂದುಕೊಂಡವನೊಬ್ಬ ಮಾಡಿರುವ ವಿಚಿತ್ರ ಧ್ಯಾನವದು.

    'ಅಪೂರ್ವ' ಇಷ್ಟವಾಗದವರು....

    'ಅಪೂರ್ವ' ಇಷ್ಟವಾಗದವರು....

    ಈ ಚಿತ್ರ ಇಷ್ಟವಾಗದವರು ಅದನ್ನು 'ಇಷ್ಟವಾಗಲಿಲ್ಲ' ಎಂದು ಸೀದಾ ಅನ್ನಬಹುದು. ಚಿತ್ರವನ್ನು ವಿಮರ್ಶಿಸಬಹುದು. 'ಹೀಗೆ ಮಾಡಬಹುದಿತ್ತು', 'ಹಾಗೆ ಆಗಬಹುದಿತ್ತು' ಅಂತೆಲ್ಲ ಹೇಳಬಹುದು. ಬೇಜಾರನ್ನೂ ಮಾಡಿಕೊಳ್ಳಬಹುದು. ಸಿನಿಮಾಗೂ ಬೈಯಬಹುದು. ಅದು ಅವರ ಸ್ವಂತ ಅಭಿಪ್ರಾಯ. ['ಅಪೂರ್ವ' ಎರಡನೇ ಆವೃತ್ತಿ ಬಿಡುಗಡೆ: ಚಿತ್ರಮಂದಿರ ತುಂಬಿದೆ.!]

    ಅಪಹಾಸ್ಯ ಮಾಡುವ ಅಧಿಕಾರ ಇಲ್ಲ.!

    ಅಪಹಾಸ್ಯ ಮಾಡುವ ಅಧಿಕಾರ ಇಲ್ಲ.!

    ಆದರೆ, ಸಿನಿಮಾ ನೋಡಿದ ಹಾಗೂ ನೋಡದ ಯಾರಿಗೂ, ಯಾವತ್ತೂ ರವಿಚಂದ್ರನ್ ಅವರ 'ಕತೃತ್ವ ಶಕ್ತಿ' ಹಾಗೂ ಅವರ 'ವಾಕ್ಚಿತ್ರ' ಅನುಭವವನ್ನು ಅಪಹಾಸ್ಯ ಮಾಡಿ, ಅವರಿನ್ನು ಸಿನಿಮಾ ಮಾಡಬಾರದು ಎಂದು ಹೇಳುವ ಅಧಿಕಾರ ಖಂಡಿತ ಇಲ್ಲ. [ರವಿಯನ್ನು ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!]

    ಕೊಂಕುನುಡಿ ಬೇಡ.!

    ಕೊಂಕುನುಡಿ ಬೇಡ.!

    ಸಿನಿಮಾ ಬೇರೆ, ವ್ಯಕ್ತಿತ್ವ ಬೇರೆ, ಯಾರೇ ಆಗಲಿ ಅವರ ಬಗ್ಗೆ ಕೊಂಕುನುಡಿ ಆಡುವುದು ಅವರಿಗೂ ಸೇರಿದಂತೆ ಅವರ ಸಮಕಾಲೀನರಿಗೆ ನೋವುಂಟು ಮಾಡುತ್ತದೆ. [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]

    ಹೃದಯವಂತಿಕೆ ಇರಲಿ

    ಹೃದಯವಂತಿಕೆ ಇರಲಿ

    ಯಾಕಂದರೆ...ರವಿಚಂದ್ರನ್ ಅವರಿಗೆ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬೇರೆ ಏನೂ ಅವರಿಗೆ ಬೇಕಾಗೂ ಇಲ್ಲ ಎಂಬಂತೆ ಸಿನಿಮಾ ನಂಬಿರುವವರು ಅವರು. ಹುಟ್ಟಿದಾಗಿನಿಂದ ಸಿನಿಮಾಗಾಗಿ ಬಡಕೊಂಡ ಹೃದಯ ಅವರದು. ಅಷ್ಟೊಂದು ಸಿನಿಮಾ ಪ್ರೀತಿಸುವ ಅವರ ಹೃದಯಕ್ಕೆ, ಬೇಕಂತ ಗುಂಡುಪಿನ್ನು ಚುಚ್ಚುವ ಕೆಲಸ ಮಾಡುವವರಿಗೆ ಕಿಂಚಿತ್ತಾದರೂ ಹೃದಯವಂತಿಕೆ ಇರಲಿ ಎಂಬುದು ಎಲ್ಲ ಜನತೆಯ ಆಶಯ.

    ಚೂರು ಯೋಚಿಸಿ...

    ಚೂರು ಯೋಚಿಸಿ...

    ಕನ್ನಡಕ್ಕೆ ಅಂಥವರೊಬ್ಬರು ಇಲ್ಲದೆ ಇದ್ದರೆ ಚಿತ್ರರಂಗದ 20-30 ವರ್ಷಗಳ ಹಿಂದೆ ಯಾವುದೇ 'ಕ್ರೇಜಿ' ಕನಸು ಹುಟ್ಟುತ್ತಲೇ ಇರಲಿಲ್ಲ. ಅವರು ಕನಸುಗಾರನಷ್ಟೇ ಅಲ್ಲ, ಕೆಲಸಗಾರ ಕೂಡ...ಎಂದೋ ರಾಜ್ಯ ಬಿಟ್ಟು ಅನ್ಯಭಾಷೆಗೆ ಹೋಗುವ ಚಾನ್ಸು ಸಿಕ್ಕರೂ ಹೋಗದೆ ''ಕನ್ನಡದಲ್ಲೇ ಇರುತ್ತೀನಿ'' ಎಂದು ಪಟ್ಟು ಹಿಡಿದು ಗುದ್ದಾಡಿದ ಮಹನೀತ ಆತ ಎಂಬುದು ಎಲ್ಲರಿಗೂ ಗೊತ್ತಿದೆ.

    ನವಪೀಳಿಗೆ ಹೀಗೆ ಆದರೆ...

    ನವಪೀಳಿಗೆ ಹೀಗೆ ಆದರೆ...

    ಅವರ ವಯಸ್ಸಾದರೂ ನೋಡಿ, ಐವತ್ತೈದು. ಈ ತಲೆಮಾರಿನ ಅನುಭವಕ್ಕೆ, ವ್ಯಕ್ತಿತ್ವಕ್ಕೆ, ಕೆಲಸಗಳಿಗೆ ಬೆಲೆಕೊಡದೆ ಬೆಳೆಯುವ ನವಪೀಳಿಗೆ, ಮುಂದೆ ಯಾವತ್ತೂ ಯಾರಿಗೂ ಬೆಲೆ ಕೊಡದೆ ಹೋಗಬಹುದಾದ ಅಪಾಯವಿದೆ, ಜೊತೆಗೆ ಅಪಾತ್ರರಿಗೆ ಮಣೆ ಹಾಕುವ ಅಪಾಯವೂ ಇದೆ.

    ನಮ್ಮಲ್ಲಿ ಅನುಭವಿಯ ಸ್ಥಿತಿ ಇದೆನಾ.?

    ನಮ್ಮಲ್ಲಿ ಅನುಭವಿಯ ಸ್ಥಿತಿ ಇದೆನಾ.?

    ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಾಗಲಿ, ಹಿಂದಿ ಹಾಲಿವುಡ್ ಕ್ಷೇತ್ರಗಳಲ್ಲೆಲ್ಲ 50-60ರ ಪ್ರಾಯ ತುಂಬ ದೊಡ್ಡ ಪ್ರೈಮ್ ಟೈಮು. ಬರವಣಿಗೆ, ನಿರ್ದೇಶನ, ನಟನೆ ಹಾಗೂ ನಿರ್ಮಾಣಗಳಲ್ಲೆಲ್ಲ 50-60ರ ಪ್ರಾಯದವರದ್ದೇ ಅಗ್ರಪಂಕ್ತಿ ಇರುತ್ತದೆ. ತುಂಬಿದ ಅನುಭವದ ಜೊತೆ ಹಲವಾರು 'ಮೆಚೂರ್ಡ್' ಪೈಪೋಟಿಗಳಲ್ಲಿ ಅವರೆಲ್ಲ ಸದಾ ಮುಳುಗಿರುತ್ತಾರೆ. ಆದರೆ ನಮ್ಮ ಊರಿನಲ್ಲಿ ಆ ಅನುಭವಿಯ ಸ್ಥಿತಿ ಏನಾಗಿದೆ.?! ಎಲ್ಲ ಯೋಚಿಸಿ.

    ಇದು ಶೋಭೆಯಲ್ಲ.!

    ಇದು ಶೋಭೆಯಲ್ಲ.!

    ದೊಡ್ಡವರ ಅನುಭವಗಳನ್ನು ಬಸಿದು ಕುಡಿದು ಹೊಸಬರು ಎದ್ದು ನಿಲ್ಲಬೇಕೇ ಹೊರತು ಅವರನ್ನು ಹೀಗಳೆದು ಹಿಗ್ಗುವುದು ಶೋಭೆಯಲ್ಲ..!

    ಯೋಗರಾಜ್ ಭಟ್ ರ ಕೋರಿಕೆ

    ಯೋಗರಾಜ್ ಭಟ್ ರ ಕೋರಿಕೆ

    ಇದೆಲ್ಲದರ ತಪ್ಪು-ಸರಿಯ ಚರ್ಚೆಗೆ ಇಳಿಯದೆ ದಯಮಾಡಿ ರವಿ ಸರ್ ಅವರ ಅಗಾಧ ಅನುಭವಕ್ಕೆ ಹಾಗೂ ವ್ಯಕ್ತಿತ್ವಕ್ಕೊಮ್ಮೆ ಮನಸಾರೆ ನಮಿಸಬೇಕು ಎಂಬುದು ನಾನು ಹಾಗೂ ನನ್ನಂಥ ಹಲವಾರು ರವಿ ಸರ್ ಅವರನ್ನು ಇಷ್ಟಪಡುವ ಅಸಂಖ್ಯಾತ ಅಭಿಮಾನಿಗಳ ಕೋರಿಕೆ.

    ಕೊನೆಯದಾಗಿ...

    ಕೊನೆಯದಾಗಿ...

    'ಅಪೂರ್ವ' ಒಂದು ಅಪರೂಪದ ಚಿತ್ರ..
    ರವಿಚಂದ್ರನ್ ಒಂದು ಅಸಾಧಾರಣ ಚೇತನ..
    ಎರಡೂ ಬೇರೆ ಬೇರೆ..
    ಪ್ಲೀಸ್..ಮಿಕ್ಸ್ ಮಾಡಬೇಡಿ..
    -ನಮಸ್ಕಾರ
    ಯೋಗರಾಜ್ ಭಟ್ (ಚಿತ್ರ ನಿರ್ದೇಶಕ)
    (ಈ ಪತ್ರಕ್ಕೆ ಸ್ಫೂರ್ತಿ ರಾಜೇಂದ್ರ ಕಾರಂತ್ ಅವರ ಬರಹ. ಅವರಿಗೆ ಧನ್ಯವಾದ)

    English summary
    Kannada Director Yogaraj Bhat has written open letter for all who are abusing Crazy Star V.Ravichandran's One Man Show 'Apoorva'.
    Thursday, June 2, 2016, 11:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X