»   » ಪ್ರೇಕ್ಷಕರಿಗೆ ಭಾಗ್ಯರಾಜ್ ನೋಡುವ ಭಾಗ್ಯ ಯಾವಾಗ?

ಪ್ರೇಕ್ಷಕರಿಗೆ ಭಾಗ್ಯರಾಜ್ ನೋಡುವ ಭಾಗ್ಯ ಯಾವಾಗ?

Posted by:
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ಹೆಸ್ರು ಮಾಡಿದ ನಟರ ಫ್ಯಾಮಿಲಿಯಿಂದ ಮತ್ತೊಬ್ಬರು ಸಿನಿಮಾಗೆ ಎಂಟ್ರಿಕೊಟ್ರೆ ದೊಡ್ಡ ಹೈಪ್ ಕ್ರಿಯೇಟ್ ಆಗುತ್ತೆ. ಸಿನಿಮಾ, ಪಾತ್ರ, ಕಥೆ ಎಲ್ಲವೂ ಚರ್ಚೆಯಾಗುತ್ತೆ. ಇಂತಹದ್ದೇ ಒಂದು ನಿರೀಕ್ಷೆ ಶುರುವಾಗಿದ್ದು 'ಭಾಗ್ಯರಾಜ್' ಸಿನಿಮಾ ಶುರುವಾದಾಗ.

ಲೂಸ್ಮಾದ ಯೋಗಿ ಅಣ್ಣ ಮಹೇಶ್ ಅವರಿಗೆ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಿರೋ ಚಿತ್ರ 'ಭಾಗ್ಯರಾಜ್'. ವಿಭಿನ್ನ ಟೈಟಲ್ ಜೊತೆ ಭರ್ಜರಿ ಕ್ಯೂರಿಯಾಸಿಟಿಯನ್ನೂ ಹುಟ್ಟುಹಾಕ್ತು. ಚಿತ್ರಕ್ಕೆ 'ನಕಲು ಮಾಡಬೇಡಿ' ಎಂಬ ಟ್ಯಾಗ್ ಲೈನ್ ಕೂಡ ನೀಡಲಾಗಿತ್ತು. ಮಹೇಶ್ಗೆ ಇಲ್ಲಿ ಜೋಡಿಯಾಗಿದ್ದು 'ಪರಾರಿ' ಚಿತ್ರದಲ್ಲಿ ಶುಭಾ ಪೂಂಜಾ ಜೊತೆ ಮತ್ತೊಬ್ಬ ನಾಯಕಿಯಾಗಿದ್ದ ಜಾಹ್ನವಿ. [ಯೋಗಿ ಅಣ್ಣ ಮಹೇಶ್ ಭಾಗ್ಯರಾಜ್ ಆಗಿ ಎಂಟ್ರಿ]


ಈಗ ಜಾಹ್ನವಿ ಕಾಮತ್ ಸುವರ್ಣ ವಾಹಿನಿಯ, ಕೆಎಂ ಚೈತನ್ಯ ನಿರ್ದೇಶಿಸುತ್ತಿರುವ 'ಪ್ರೀತಿ ಎಂದರೇನು' ಧಾರವಾಹಿಯಲ್ಲಿ ನಾಯಕಿಯಾಗಿದ್ದಾರೆ. ಮಹೇಶ್ ಮಾತ್ರ ಯಾಕೆ ಸಿಕ್ಕಾಪಟ್ಟೆ ಹೆಸ್ರು ಮಾಡಿರೋ ಲೂಸ್ ಮಾದ ಯೋಗಿಯೇ ಕಾಣಿಸ್ತಿಲ್ಲ. ನಿರ್ದೇಶಕರಾದರೂ ಎಲ್ಲಿದ್ದಾರೆ? ಪರಿಸ್ಥಿತಿ ಹೀಗಿರುವಾಗ 'ಭಾಗ್ಯರಾಜ್' ರಿಲೀಸ್ ಆಗುತ್ತಾ? ಗೊತ್ತಿಲ್ಲ.

ಅಂದ ಹಾಗೆ, ಭಾಗ್ಯರಾಜ್ ಸೆಟ್ಟೇರಿದ್ದು ಸರಿಯಾಗಿ ಎರಡು ವರ್ಷಗಳ ಹಿಂದೆ. ಚಿಕ್ಕಪುಟ್ಟ ಪಾತ್ರಗಳಲ್ಲೇ ತೃಪ್ತಿ ಕಾಣುತ್ತಿದ್ದ ಮಹೇಶ್ ಈ ಚಿತ್ರದ ಮುಖಾಂತರ ಪೂರ್ಣ ಪ್ರಮಾಣದ ನಾಯಕರಾಗಿದ್ದರು. ಅವರ ದುರಾದೃಷ್ಟವೋ ಏನೋ ಚಿತ್ರ ಇನ್ನೂ ಡಬ್ಬಾದಲ್ಲಿಯೇ ಕುಳಿತಿದೆ. ಭಾಗ್ಯರಾಜ್ ಚಿತ್ರ ನೋಡುವ 'ಭಾಗ್ಯ' ಪ್ರೇಕ್ಷಕರಿಗೆ ಸಿಗುವುದು ಯಾವಾಗ?

English summary
Why Loose Mada Yogesh brother Mahesh's Bhagyaraj release is getting delayed? The Kannada movie went on floor two years back. The heroine Jahnavi Kamath is acting in Kannada TV serial, but Mahesh and his brother Yogesh are not to be seen.
Please Wait while comments are loading...

Kannada Photos

Go to : More Photos