»   » ಸಿಂಪಲ್ ಸ್ಟಾರ್ ಜತೆ ಭಟ್ಟರ 'ವಾಸ್ತು ಪ್ರಕಾರ' ಶುರು

ಸಿಂಪಲ್ ಸ್ಟಾರ್ ಜತೆ ಭಟ್ಟರ 'ವಾಸ್ತು ಪ್ರಕಾರ' ಶುರು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಸ್ಟಾರ್ ನಿರ್ದೇಶಕ ಯೋಗರಾಜ ಭಟ್ಟರ ಹೊಸ ಚಿತ್ರ 'ವಾಸ್ತು ಪ್ರಕಾರ' ಬೆಂಗಳೂರಿನಲ್ಲಿ ಶುಕ್ರವಾರ ಅಕ್ಷಯ ತದಿಗೆ ಶುಭ ದಿನದಂದು ಸರಳವಾಗಿ ಸೆಟ್ಟೇರಿದೆ.

ಬೆಂಗಳೂರಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ಇರುವ ಗಣೇಶ ದೇವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ನವರಸ ನಾಯಕ ಜಗ್ಗೇಶ್ ಅವರು ಕ್ಲಾಪ್ ಮಾಡಿದರು. ನಂತರ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಾಯಕನಾಗಿ ಉಳಿದವರು ಕಂಡಂತೆ ಖ್ಯಾತಿಯ ರಕ್ಷಿತ್ ಶೆಟ್ಟಿ ಇದ್ದಾರೆ, ಮಂಗಳೂರಿನ ಆಯಿಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ ಉಳಿದಂತೆ ಜಗ್ಗೇಶ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುಮಾರು 25 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ಭಟ್ಟರು ಹಾಕಿಕೊಂಡಿದ್ದಾರೆ. ಯೋಗರಾಜ್ ಫಿಲಮ್ಸ್ ಮೂಲಕ ಚಿತ್ರಕ್ಕೆ ಹಣ ಹೂಡಿಕೆ ಮಾಡಲಿರುವ ಭಟ್ಟರು ಮುಂದಿನ ಸೆಪ್ಟೆಂಬರ್ -ಅಕ್ಟೋಬರ್ ವೇಳೆಗೆ ಚಿತ್ರವನ್ನು ಬೆಳ್ಳಿ ತೆರೆಗೆ ತರುವ ಯತ್ನದಲ್ಲಿದ್ದಾರೆ.

ಯೋಗರಾಜ ಭಟ್ಟರ ನಿರ್ದೇಶನದ ಹೊಸ ಚಿತ್ರ
  

ಯೋಗರಾಜ ಭಟ್ಟರ ನಿರ್ದೇಶನದ ಹೊಸ ಚಿತ್ರ

ಯೋಗರಾಜ ಭಟ್ಟರ ನಿರ್ದೇಶನದ ಮುಂಗಾರು ಮಳೆ ಚಿತ್ರದ ಮುಹೂರ್ತ ಕೂಡಾ ಬೆಂಗಳೂರಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ಇರುವ ಗಣೇಶ ದೇವಸ್ಥಾನದಲ್ಲೇ ನಡೆದಿತ್ತು ಎಂಬುದು ವಿಶೇಷ.

  

ಸಿಂಪಲ್ ಮುಹೂರ್ತಕ್ಕೆ ಅಕ್ಷಯ ತದಿಗೆ ಕಾರಣವೇ?

ವಾಸ್ತು ಪ್ರಕಾರ ಮುಹೂರ್ತ ಸರಳವಾಗಿ ನೆರವೇರಿಸಲು ಅಕ್ಷಯ ತದಿಗೆ ಕಾರಣವೇ? ಏನೋ ಜಗ್ಗೇಶ್ ಟ್ವೀಟ್ ಮಾಡಿದ್ದಾರಪ್ಪ

  

ಮುಹೂರ್ತ ಸಿಂಪಲ್ ಸ್ಕ್ರಿಪ್ಟ್ ಸೂಪರ್ : ಜಗ್ಗೇಶ್

ವಾಸ್ತು ಪ್ರಕಾರ ಮುಹೂರ್ತ ಸಿಂಪಲ್ ಆಗಿದ್ದರೂ ಸ್ಕ್ರಿಪ್ಟ್ ಸೂಪರ್ ಎಂದಿರುವ ಜಗ್ಗೇಶ್

  

ನಾಯಕ ನಟ ರಕ್ಷಿತ್ ಶೆಟ್ಟಿ ಟ್ವೀಟ್

ನಾಯಕ ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ಚಿತ್ರದ ಸರಳ ಸಮಾರಂಭದಲ್ಲಿ ಸೆಟ್ಟೇರಲಿದೆ ಎಂದಿದ್ದಾರೆ.

  

ವಾಸ್ತುಪ್ರಕಾರ ಭಟ್ಟರ ವಿಡಿಯೋ

ವಾಸ್ತುಪ್ರಕಾರಕ್ಕಾಗಿ ಯೋಗರಾಜ ಭಟ್ಟರು ವಿಡಿಯೋ ರಿಲೀಸ್ ಮಾಡಿ ಸದ್ದು ಮಾಡಿದ್ದರು.

English summary
Director Yograj Bhat's new film Vaastu Prakara Starring Rakshit Shetty and Aishaani was officially launched on Friday morning at Ganesha Temple on Chord Road, Bangalore. Yograj Bhat, Jaggesh, Rakshit Shetty, Karisubbu, M N Kumar were among those present.
Please Wait while comments are loading...

Kannada Photos

Go to : More Photos