»   » ಫೇಸ್ ಬುಕ್ ನಲ್ಲಿ 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಅಬ್ಬರ.!

ಫೇಸ್ ಬುಕ್ ನಲ್ಲಿ 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಅಬ್ಬರ.!

Posted by:
Subscribe to Filmibeat Kannada

ಹುಚ್ಚ ವೆಂಕಟ್ ಗೆ ಇಲ್ಲಿಯವರೆಗೂ 'ಯೂಟ್ಯೂಬ್ ಸ್ಟಾರ್' ಅಂತ ಬಿರುದು ಇತ್ತು. ಆದ್ರೀಗ, ಬರೀ ಯೂಟ್ಯೂಬ್ ನಲ್ಲಿ ಮಾತ್ರ ಅಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಎಲ್ಲಾ ಕಡೆ ಹುಚ್ಚ ವೆಂಕಟ್ ರದ್ದೇ ಹವಾ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸೂಪರ್ ಎಂಟರ್ ಟೇನರ್ ಆಗಿರುವ ಹುಚ್ಚ ವೆಂಕಟ್ 'ಬಿಗ್ ಬಾಸ್'ಗೆ ಬಾಸ್ ಆಗಿದ್ದಾರೆ. 'ಬಿಗ್ ಬಾಸ್-3' ಮನೆಯಲ್ಲಿ ಡೈಲಾಗ್ ಕಿಂಗ್ ಆಗ್ಬಿಟ್ಟಿದ್ದಾರೆ. 'ಬಾಸ್ ಗೆ ಬಾಸ್' ಹುಚ್ಚ ವೆಂಕಟ್ ಬಗ್ಗೆ ಫೇಸ್ ಬುಕ್ ನಲ್ಲಿ ಹಲವಾರು Meme ಗಳು ಹರಿದಾಡುತ್ತಿವೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಅದನ್ನೆಲ್ಲಾ ನೀವು ನೋಡ್ಬಿಟ್ಟರೆ, ಬಿದ್ದು ಬಿದ್ದು ನಗುವುದು ಗ್ಯಾರೆಂಟಿ. ಬನ್ನಿ ಹುಚ್ಚ ವೆಂಕಟ್ ರವರ ಜನಪ್ರಿಯ Meme ಗಳನ್ನ ನಿಮಗೆ ತೋರಿಸ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸುತ್ತಾ ಹೋಗಿ......

'ಕತ್ತಲೆ ಭಾಗ್ಯ' ಎಫೆಕ್ಟ್.!

ಕರ್ನಾಟಕ ಸರ್ಕಾರದ 'ಕತ್ತಲೆ ಭಾಗ್ಯ' ಯೋಜನೆಯಿಂದ ಆಗಾಗ ಪವರ್ ಕಟ್ ಆಗುತ್ತಲೇ ಇರುತ್ತೆ. ಬಾಕಿ ಟೈಮ್ ನಲ್ಲಿ ಕರೆಂಟ್ ಹೋದ್ರೆ ಪರ್ವಾಗಿಲ್ಲ, ಅಪ್ಪಿ-ತಪ್ಪಿ ರಾತ್ರಿ 9 ಗಂಟೆಗೆ ಕರೆಂಟ್ ಹೋಗ್ಬಿಟ್ರೆ ಪರಿಣಾಮ ಏನ್ ಗೊತ್ತಾ? {Image Courtesy - Kirik Keerthi}

ಕಣ್ಣೀರಿಗೂ - ರಕ್ತಕ್ಕೂ ವ್ಯತ್ಯಾಸ ಏನು?

ಕಣ್ಣೀರಿಗೂ-ರಕ್ತಕ್ಕೂ ಇರುವ ವ್ಯತ್ಯಾಸವನ್ನ ಹುಚ್ಚ ವೆಂಕಟ್ ವಿವರಿಸಿದ್ದಾರೆ. ನಿಮಗೆ ಅರ್ಥ ಆಯ್ತಾ? {Image Courtesy - Kirik Keerthi}

ಸಲ್ಮಾನ್ ಖಾನ್ ಗೂ ಏಕವಚನ.!

ಸುದೀಪ್ ಗೆ ಮಾತ್ರ ಅಲ್ಲ, ಹುಚ್ಚ ವೆಂಕಟ್ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಗೂ 'ಹೋಗೋ...ಬಾರೋ' ಅಂತ ಕರೀತಾರಂತೆ.! {Image Courtesy - Kirik Keerthi}

ಹುಚ್ಚ ವೆಂಕಟ್ ಮೈಯಲ್ಲಿ ರಕ್ತ ಬರುತ್ತೆ ಗೊತ್ತಾ?

''ಹುಡುಗೀರ ಕಣ್ಣಲ್ಲಿ ನೀರು ಬಂದ್ರೆ, ಹುಚ್ಚ ವೆಂಕಟ್ ಮೈಯಲ್ಲಿ ರಕ್ತ ಬರುತ್ತೆ'' ಗೊತ್ತಾ?!! {Image Courtesy - Kirik Keerthi}

'ಬಿಗ್ ಬಾಸ್'ಗೆ ಚಾನ್ಸ್.!

ಹುಚ್ಚ ವೆಂಕಟ್ 'ಬಿಗ್ ಬಾಸ್'ಗೆ ಬಾಸ್ ಆಗಿರುವುದು ಇದೇ ಕಾರಣಕ್ಕೆ.! {Image Courtesy - Kirik Keerthi}

ಹುಚ್ಚ ವೆಂಕಟ್ ಹೀರೋ.!

ಹುಚ್ಚ ವೆಂಕಟ್ ಏನ್ ಬೇಕಾದರೂ ಹುಚ್ಚಾಟ ಮಾಡಿಕೊಳ್ಳಲಿ, ಆದ್ರೆ ಎಷ್ಟೋ ಜನ ಅವರಿಗೆ ಫ್ಯಾನ್ಸ್ ಆಗಿರುವುದಕ್ಕೆ ಕಾರಣ ಇದೇ.! {Image Courtesy - Kirik Keerthi}

ಹುಚ್ಚ ವೆಂಕಟ್ Quote.!

ಹುಚ್ಚ ವೆಂಕಟ್ ರವರ ನುಡಿ ಮುತ್ತು ಇದು. ಓದಿ, ನೆನಪಿನಲ್ಲಿಟ್ಟುಕೊಳ್ಳಿ..!

ಯಾಕೆ ಮದ್ಯಪಾನ ಮಾಡ್ಬಾರ್ದು?

ಮದ್ಯಪಾನ ಆರೋಗ್ಯದ ಜೊತೆಗೆ ಹೃದಯಕ್ಕೂ, ಕುಟುಂಬಕ್ಕೂ ಹಾನಿಕರ..! {Image Courtesy - Kirik Keerthi}

ಹುಚ್ಚ ವೆಂಕಟ್ ಗೆ ಜೈಕಾರ.!

ಹುಚ್ಚ ವೆಂಕಟ್ ಗೆ ಬೀದಿ ನಾಯಿಗಳು ಕೂಡ ಜೈಕಾರ ಹಾಕ್ತಿವೆ ಅನ್ನೋದು ನಿಮಗೆ ಗೊತ್ತಾ? {Image Courtesy - Namma Krnataka Memes}

ಇತಿಹಾಸ ಸೃಷ್ಟಿಸಿದ ಹುಚ್ಚ ವೆಂಕಟ್

'ಬಿಗ್ ಬಾಸ್' ಇತಿಹಾಸದಲ್ಲೇ ಟಾಸ್ಕ್ ಮಾಡದೆ, ಪನಿಶ್ಮೆಂಟ್ ಕೊಡದೇ ಇರೋದು ಹುಚ್ಚ ವೆಂಕಟ್ ಗೆ ಮಾತ್ರವಂತೆ. {Image Courtesy - Kirik Keerthi}

ಡೈಲಾಗ್ ಹೊಡೆಯೋರು ಯಾರು?

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಈಗ ಮಾತನಾಡುವ ಹಾಗಿಲ್ಲ. ಮಾತನಾಡುವ ಬದಲು ಹಾಡಿನ ಮೂಲಕ ಮನೆಯ ಇತರೆ ಸದಸ್ಯರ ಜೊತೆ ಅವರು ಸಂಭಾಷಣೆ ನಡೆಸಬೇಕು. ಹುಚ್ಚ ವೆಂಕಟ್ ಮಾತಾಡ್ದೆ ಇದ್ದರೆ ಡೈಲಾಗ್ ಹೊಡೆಯೋರು ಯಾರು ಅಂತ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. {Image Courtesy - Kirik Keerthi}

ಹುಚ್ಚ ವೆಂಕಟ್ ಕೋಟೆ ಅಂತೆ.!

ಹುಚ್ಚ ವೆಂಕಟ್ ಡೈಲಾಗ್ ನ ರವಿಶಂಕರ್ ಸ್ಟೈಲ್ ನಲ್ಲಿ ಹೇಳಿದ್ರೆ ಹೇಗ್ ಇರುತ್ತೆ? ಒಮ್ಮೆ ಊಹಿಸಿಕೊಳ್ಳಿ.....{Image Courtesy - Troll Anthammas}

Venkat ಅಂದ್ರೇನು ಗೊತ್ತಾ?

ತಮ್ಮ ಹೆಸರನ್ನ ಹುಚ್ಚ ವೆಂಕಟ್ ಡಿಫೈನ್ ಮಾಡಿಕೊಂಡಿರುವುದು ಹೀಗೆ...{Image Courtesy - Kirik Keerthi}

ಹುಚ್ಚ ವೆಂಕಟ್ ಫೇಮಸ್ ಡೈಲಾಗ್

ಹುಚ್ಚ ವೆಂಕಟ್ ಎಲ್ಲೇ ಹೋದರೂ, ಈ ಡೈಲಾಗ್ ಹೇಳುವುದನ್ನ ಮಾತ್ರ ಮರೆಯೋಲ್ಲ. {Image Courtesy - Kirik Keerthi}

ಹುಚ್ಚ ವೆಂಕಟ್ ಗೆ ಒಬಾಮಾ ಫ್ಯಾನ್.!

'ಬಿಗ್ ಬಾಸ್' ನಲ್ಲಿ ಹುಚ್ಚ ವೆಂಕಟ್ ಇರುವುದರಿಂದ ಪ್ರತಿದಿನ ಒಬಾಮಾ ಕೂಡ ಶೋ ಮಿಸ್ ಮಾಡ್ತಿಲ್ಲ ಗೊತ್ತಾ? {Image Courtesy - Kirik Keerthi}

ಕಿಚ್ಚ-ಹುಚ್ಚ

ಕಿಚ್ಚ ಸುದೀಪ್ ಮತ್ತು ಹುಚ್ಚ ವೆಂಕಟ್ ನಡುವೆ ಸಂಭಾಷಣೆ ಹೀಗೆ ನಡೆದ್ರೆ..? {Image Courtesy - Troll Haiklu}

ಪೊರ್ಕಿ ಹುಚ್ಚ ವೆಂಕಟ್ ಮಿಸ್ ಮಾಡಲ್ಲ.!

ಹುಚ್ಚ ವೆಂಕಟ್ ಈ ಲೆವೆಲ್ ಗೆ ಎಲ್ಲರನ್ನ ಮನರಂಜನೆ ಮಾಡುತ್ತಿರುವುದರಿಂದ ಅವರ ಎಲ್ಲಾ ಫ್ಯಾನ್ಸ್ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ನೋಡೋಕೆ ರೆಡಿಯಾಗಿದ್ದಾರೆ. {Image Courtesy - Kirik Keerthi}

ಇಂಗ್ಲೀಷ್ ಮಾತನಾಡಿದ್ರೆ ಏನ್ ಆಗುತ್ತೆ?

ಹುಚ್ಚ ವೆಂಕಟ್ ಮುಂದೆ ಕನ್ನಡ ಮಾತಾಡಿದ್ರೆ ಸರಿ, ಇಂಗ್ಲೀಷ್ ಮಾತನಾಡಿದ್ರೆ ಬೆಂಡೆತ್ಬುಡ್ತಾರೆ ಹುಷಾರ್.! {Image Courtesy - Kirik Keerthi}

English summary
YouTube Star Huccha Venkat is Sandalwood Sensation now. Check out the trending memes of Huccha Venkat here.
Please Wait while comments are loading...

Kannada Photos

Go to : More Photos