»   » ವಿಮರ್ಶೆ: ರೌಡಿಗಳನ್ನ ಕೊಂದು, 'ರೌಡಿಸಂ'ನ್ನ ಕೊಲ್ಲದ 'ಬೆಂಗಳೂರು ಅಂಡರ್ ವರ್ಲ್ಡ್'

ವಿಮರ್ಶೆ: ರೌಡಿಗಳನ್ನ ಕೊಂದು, 'ರೌಡಿಸಂ'ನ್ನ ಕೊಲ್ಲದ 'ಬೆಂಗಳೂರು ಅಂಡರ್ ವರ್ಲ್ಡ್'

Posted by:
Subscribe to Filmibeat Kannada

''ರೌಡಿಸಂ'ಲ್ಲಿ ಒಳ್ಳೆತನದಿಂದ ಕ್ಷಮಿಸೋದು ಮಹಾಪಾಪ. ರೌಡಿಗಳಿಗೆ ಯಾವತ್ತಿದ್ರೂ ರೌಡಿಗಳಿಂದಲೇ ಸಾವು. ರೌಡಿಗಳು ಸತ್ತರು, ರೌಡಿಸಂ ಮಾತ್ರ ಸಾಯಲ್ಲ. ಉದ್ದೇಶ ಪೂರ್ವಕವಾಗಿ ರೌಡಿಗಳು ಹುಟ್ಟಲ್ಲ. ಯಾವುದೋ ಒಂದು ಬಲವಾದ ಕಾರಣದಿಂದ ಈ ಭೂಗತ ಜಗತ್ತಿಗೆ ಬರಬೇಕಾಗುತ್ತೆ'' ಎಂಬುದನ್ನ ನಿರ್ದೇಶಕರು ಹಸಿಹಸಿಯಾಗಿ ತೆರೆಮೇಲೆ ತೋರಿಸಿದ್ದಾರೆ.

Rating:
3.0/5

ಚಿತ್ರ : 'ಬೆಂಗಳೂರು ಅಂಡರ್ ವರ್ಲ್ಡ್'
ಕಥೆ-ನಿರ್ದೇಶನ : ಪಿ.ಎನ್.ಸತ್ಯ
ಚಿತ್ರಕಥೆ-ಸಂಭಾಷಣೆ: ಪಿ.ಎನ್.ಸತ್ಯ
ನಿರ್ಮಾಣ : ಆನಂದ್
ಛಾಯಾಗ್ರಹಣ: ಆರ್ಯವರ್ಧನ್
ಸಂಗೀತ : ಅನೂಪ್ ಸೀಳಿನ್
ತಾರಾಗಣ : ಆದಿತ್ಯ, ಹರೀಶ್ ರೈ, ಶೋಭ್ ರಾಜ್, ಪಯಲ್ ರಾಧಕೃಷ್ಣ, ಭಾವನಾ, ಪೆಟ್ರೋಲ್ ಪ್ರಸನ್ನ, ಆನಂದ್, ಮತ್ತು ಇತರರು.
ಬಿಡುಗಡೆ : ಮಾರ್ಚ್ 10, 2017

'ಬೆಂಗಳೂರು ಭೂಗತ' ಜಗತ್ತಿನ ಚಿತ್ರಣ!

'ಬೆಂಗಳೂರು ಭೂಗತ' ಜಗತ್ತಿನ ಚಿತ್ರಣ!

ಯುವತಿಯರ ಮೇಲೆ ಅತ್ಯಾಚಾರ, ಗಾಂಜಾ ಮಾಫಿಯಾ, ಹಫ್ತಾ ವಸೂಲಿ, ಕೊಲೆ, ಸುಲಿಗೆ, ಅಪಹರಣ, ದರೋಡೆ ಇದು ಬೆಂಗಳೂರಿನ ಭೂಗತ ಜಗತ್ತಿನಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳು.

'ಅಂಡರ್ ವರ್ಲ್ಡ್' ಅಧಿಪತಿಯಾಗಲು ಮಾರಣಹೋಮ!

'ಅಂಡರ್ ವರ್ಲ್ಡ್' ಅಧಿಪತಿಯಾಗಲು ಮಾರಣಹೋಮ!

ಇಂತಹ ಅಕ್ರಮ, ಅನಾಚಾರಗಳು ನಡೆಸುವ 'ಅಂಡರ್ ವರ್ಲ್ಡ್'ಗೆ ಸಾಮ್ರಾಟ್ ನಂತೆ ಅಟ್ಟಹಾಸ ಮಾಡುತ್ತಿರುವ ಆಸೀಡ್ ಬಾಬು (ಹರೀಶ್ ರೈ) ಮತ್ತು ಕೊತ್ವಾಲ್ (ಶೋಭರಾಜ್) ಗ್ಯಾಂಗ್ ಮಧ್ಯೆ ಹೋರಾಟ. ಆಸೀಡ್ ಬಾಬುನ ಕೊಲ್ಲಲು ಜೈಲಿನಲ್ಲಿ ಸ್ಕೆಚ್ ಹಾಕಿ ಕುಳಿತಿರುವ ಕೊತ್ವಾಲ್ ಒಂದು ಕಡೆಯಾದ್ರೆ, ಕೊತ್ವಾಲ್ ನನ್ನ ಜೈಲಿನಿಂದ ಹೊರಬಾರದಂತೆ ನಿಯಂತ್ರಿಸಿಕೊಂಡು 'ಅಂಡರ್ ವರ್ಲ್ಡ್' ಆಳುತ್ತಿರುವ ಆಸೀಡ್ ಬಾಬು ಮತ್ತೊಂದೆಡೆ.

ಭೂಗತ ಲೋಕಕ್ಕೆ 'ಮಾಲೀಕ್' ಎಂಟ್ರಿ!

ಭೂಗತ ಲೋಕಕ್ಕೆ 'ಮಾಲೀಕ್' ಎಂಟ್ರಿ!

ಹೀಗಿರುವ ಬೆಂಗಳೂರಿನ 'ಅಂಡರ್ ವರ್ಲ್ಡ್'ಗೆ ಮಾಲೀಕ್ (ಆದಿತ್ಯ) ಎಂಟ್ರಿಯಾಗುತ್ತಾನೆ. ತನ್ನದೇ ಆದ ಮಾಸ್ಟರ್ ಪ್ಲ್ಯಾನ್ ಬಳಸಿ ಈ ಕತ್ತಲ ಲೋಕಕ್ಕೆ ಡಾನ್ ಆಗುತ್ತಾನೆ. ಆದ್ರೆ, ಮಾಲೀಕ್ ಈ 'ಅಂಡರ್ ವರ್ಲ್ಡ್'ಗೆ ಯಾಕೆ ಬಂದ ಎಂಬುದಕ್ಕೆ ಒಂದು ಸೆಂಟಿಮೆಂಟಲ್ ಫ್ಲ್ಯಾಶ್ ಬ್ಯಾಕ್. ಅದು ಏನೂ ಅಂತ ಚಿತ್ರಮಂದಿರದಲ್ಲೇ ನೋಡಿ....

ರೌಡಿಸಂನಲ್ಲೊಂದು ಲವ್ ಸ್ಟೋರಿ!

ರೌಡಿಸಂನಲ್ಲೊಂದು ಲವ್ ಸ್ಟೋರಿ!

ಅಂದ್ಹಾಗೆ, 'ಬೆಂಗಳೂರು ಅಂಡರ್ ವರ್ಲ್ಡ್' ಅಂದಾಕ್ಷಣ ಇದು ಮರಿ ಮಚ್ಚು, ಲಾಂಗ್ ಗಳ ಕಥೆ ಅಂದುಕೊಳ್ಳಬೇಡಿ. ಇಲ್ಲೊಂದು ಪ್ರೇಮಕಥೆಯೂ ಇದೆ. ರೌಡಿಸಂ ಅಟ್ಟಹಾಸದಲ್ಲಿ ಬಲಿಯಾಗುವ ಒಂದು ಮಧುರ ಪ್ರೇಮ ಕಥೆ ಗಮನ ಸೆಳೆಯುತ್ತೆ.

ಡೆಡ್ಲಿ ಆದಿತ್ಯ ಅಭಿನಯ!

ಡೆಡ್ಲಿ ಆದಿತ್ಯ ಅಭಿನಯ!

'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ಆಧಾರಸ್ತಂಭ ನಾಯಕ ನಟ ಆದಿತ್ಯ. ತಮ್ಮ ಡೆಡ್ಲಿ ಅಭಿನಯದ ಮೂಲಕ ಇಡೀ ಸಿನಿಮಾವನ್ನ ಹಿಡಿದಿಡುತ್ತಾರೆ. ರೌಡಿಸಂ ಕಥೆಗಳಿಗೆ ಹೇಳಿಮಾಡಿಸಿದ ನಟ ಆದಿತ್ಯ ಎಂಬ ಶೀರ್ಷಿಕೆಯನ್ನ ಇಲ್ಲಿ ಕೂಡ ಸಾಬೀತು ಪಡಿಸಿದ್ದಾರೆ. ಡ್ಯಾನ್ಸ್, ಫೈಟ್ ಜೊತೆಗೆ ಲವರ್ ಬಾಯ್ ಆಗಿಯೂ ಇಷ್ಟವಾಗುತ್ತಾರೆ.

ವಿಶೇಷ ಅತಿಥಿಯಂತಿರುವ ನಾಯಕಿ ಪಾತ್ರ!

ವಿಶೇಷ ಅತಿಥಿಯಂತಿರುವ ನಾಯಕಿ ಪಾತ್ರ!

ಚಿತ್ರದಲ್ಲಿ ರೌಡಿಸಂಗೆ ಹೆಚ್ಚು ಮಹತ್ವ ಕೊಟ್ಟಿರುವುದ್ರಿಂದ ಇಲ್ಲಿ ನಾಯಕಿಯ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದ್ರು, ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ಅಭಿನಯಿಸಿ ಭರವಸೆ ಮೂಡಿಸಿದ್ದಾರೆ ನಾಯಕಿ ನಟಿ ಪಯಲ್ ರಾಧಕೃಷ್ಣನ್.

ಉಳಿದವರ ಅಭಿನಯ!

ಉಳಿದವರ ಅಭಿನಯ!

ಇನ್ನೂ ಉಳಿದಂತೆ, ಹರೀಶ್ ರೈ, ಶೋಭ್ ರಾಜ್, ಭಾವನಾ, ಕೋಟೆ ಪ್ರಭಾಕರ್, ಉದಯ್, ಡ್ಯಾನೀಲ್ ಬಾಲಾಜಿ, ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ತಕ್ಕ ಅಭಿನಯ ಮಾಡಿದ್ದಾರೆ.

ಪಿ.ಎನ್.ಸತ್ಯ ನಿರ್ದೇಶನ!

ಪಿ.ಎನ್.ಸತ್ಯ ನಿರ್ದೇಶನ!

'ಅಂಡರ್ ವರ್ಲ್ಡ್' ಸಿನಿಮಾಗಳನ್ನ ಮಾಡುವುದ್ರಲ್ಲಿ ನಿರ್ದೇಶಕ ಪಿ.ಎನ್.ಸತ್ಯ ನಿಪುಣರು ಎಂಬುದನ್ನ ಇಲ್ಲಿಯೂ ಸಾಬೀತು ಪಡಿಸಿದ್ದಾರೆ. ಈಗಾಗಲೇ 'ಬೆಂಗಳೂರು ಅಂಡರ್ ವರ್ಲ್ಡ್'ನ್ನ ತಮ್ಮದೇ ಚಿತ್ರಗಳಲ್ಲಿ ವಿಭಿನ್ನವಾಗಿ ತೋರಿಸಿರುವ ಪಿ.ಎನ್.ಸತ್ಯ ಹೊಸದೊಂದು ಕಥೆ ಮೂಲಕ ಮತ್ತೆ ಕುತೂಹಲವಾಗಿ ಬಿಂಬಿಸಿದ್ದಾರೆ.

ಟೆಕ್ನಿಕಲಿ ಸಿನಿಮಾ!

ಟೆಕ್ನಿಕಲಿ ಸಿನಿಮಾ!

ಅನೂಪ್ ಸೀಳಿನ್ ಅವರ ಹಿನ್ನಲೆ ಸಂಗೀತ ಮತ್ತು ಆರ್ಯವರ್ಧನ್ ಅವರ ಕ್ಯಾಮೆರಾ ವರ್ಕ್ ನಿಂದ 'ಬೆಂಗಳೂರು ಅಂಡರ್ ವರ್ಲ್ಡ್' ಮತ್ತಷ್ಟು ಪರಿಣಾಮಕಾರಿಯಾಗಿದೆ. ಅದನ್ನ ಬಿಟ್ಟರೆ, ಕಂಟ್ಯೂನಿಟಿ ಕಾಪಾಡಿಕೊಳ್ಳುವಲ್ಲಿ ಸ್ವಲ್ಪ ಎಡವಿದ್ದಾರೆ.

'ಅಂಡರ್ ವರ್ಲ್ಡ್'ನಲ್ಲಿ ಹೊಸದೇನು ಇಲ್ಲ!

'ಅಂಡರ್ ವರ್ಲ್ಡ್'ನಲ್ಲಿ ಹೊಸದೇನು ಇಲ್ಲ!

ಈಗಾಗಲೇ ಹಲವು ಅಂಡರ್ ವರ್ಲ್ಡ್ ಸಿನಿಮಾಗಳು ನೋಡಿರೋರಿಗೆ ಅದೇ ರೌಡಿಸಂ, ಅದೇ ಕ್ಲೈಮ್ಯಾಕ್ಸ್, ಜೊತೆಗೊಂದು ಲವ್ ಸ್ಟೋರಿ ಅಂತನೂ ಅನಿಸುವುದ್ರಲ್ಲಿ ಅನುಮಾನವಿಲ್ಲ. ಇನ್ನೂ ಆದಿತ್ಯ ಅಭಿನಯದ 'ಡೆಡ್ಲಿ ಸೋಮ', 'ಡೆಡ್ಲಿ2', 'ಎದೆಗಾರಿ'ಕೆ ಸಿನಿಮಾಗಳನ್ನ ನೋಡಿದವರಿಗೆ ಇದರಲ್ಲಿ ಹೊಸತನವಿದೆ ಎನಿಸುವುದಿಲ್ಲ. ಆದ್ರೆ, ಪಿ.ಎನ್ ಸತ್ಯ ಅವರ ಮೇಕಿಂಗ್ ಮತ್ತು ಆದಿತ್ಯ ಅವರ ಫರ್ಫಾಮೆನ್ಸ್ ಕೂತುಹಲ ಹುಟ್ಟಿಸುತ್ತೆ. ಅದೇ ತರ ಸಿನಿಮಾನೂ ಮೂಡಿಬಂದಿದೆ.

English summary
Kannada Actor Aditya Starrer 'Banglore underworld' Movie Has hit the Screens today (March 10th). The Movie is Directed by PN Sathya. Here is the complete Review of 'Banglore underworld'
Please Wait while comments are loading...

Kannada Photos

Go to : More Photos