twitter
    For Quick Alerts
    ALLOW NOTIFICATIONS  
    For Daily Alerts

    ರಾಟೆ ಚಿತ್ರವಿಮರ್ಶೆ: ಎ ಪಿ ಅರ್ಜುನ್ ಸಾಧಿಸಿಬಿಟ್ಟೆ ಬಿಡಪ್ಪಾ

    |

    ನಮ್ಮ ಕನ್ನಡದ ಕೆಲವು ಯುವ ನಿರ್ದೇಶಕರು ಸಖತ್ ಟ್ಯಾಲೆಂಟ್ ಆಗಿದ್ದರೂ, ಸುಖಾಸುಮ್ಮನೆ ಏನಾದರೂ ಒಂದು ವಿವಾದದಲ್ಲಿ ಗಿರಿಗಿಟ್ಲೆ ಹೊಡೆಯುತ್ತಿರುತ್ತಾರೆ. ಅದು ನೇಮಿಗೋ, ಫೇಮಿಗೋ ಅಥವಾ ಇನ್ನೊಂದಕ್ಕೋ ಹೇಳುವುದು ಕಷ್ಟ.

    ನಾವು ಹೇಳುತ್ತಿರುವುದು ಅಂಬಾರಿ, ಅದ್ದೂರಿ ಅಂತಹ ಫ್ರೆಷ್ ಚಿತ್ರವನ್ನು ನೀಡಿ ಜನಮನ ಗೆದ್ದ ನಿರ್ದೇಶಕ ಎ ಪಿ ಅರ್ಜುನ್ ಬಗ್ಗೆ. ಇವರ ನಿರ್ದೇಶನದ ಮತ್ತು ಯಾವತ್ತೋ ಪ್ರೇಕ್ಷಕರ ಮುಂದೆ ಬರಬೇಕಾಗಿದ್ದ 'ರಾಟೆ' ಚಿತ್ರ ಶುಕ್ರವಾರ, ಮಾ 20 ಸುಮಾರು 160ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. (ಧನಂಜಯ್ - ಅರ್ಜುನ್ ನಡುವೆ ಕರಾಟೆ)

    Rating:
    3.5/5
    Star Cast: ಧನಂಜಯ, ಶ್ರುತಿ ಹರಿಹರನ್, ಬುಲೆಟ್ ಪ್ರಕಾಶ್, ಉದಯ್
    Director: ಎ.ಪಿ ಅರ್ಜುನ್

    ಚಿತ್ರದಲ್ಲಿ ನಾಯಕ ಕೇಬಲ್ ಆಪರೇಟರ್

    ಚಿತ್ರದಲ್ಲಿ ನಾಯಕ ಕೇಬಲ್ ಆಪರೇಟರ್

    ರಾಟೆ ಚಿತ್ರ ರಾಜ (ಧನಂಜಯ್) ಮತ್ತು ರಾಣಿ (ಶ್ರುತಿ) ನಡುವಣ ಸಾಗುವ ಸುಂದರ ಪ್ರೇಮಕಥಾನಕ. ಇಬ್ಬರೂ ಅನಾಥರು, ನಾಯಕ ಕೇಬಲ್ ಆಪರೇಟರ್. ಇವರಿಬ್ಬರದ್ದು ಇವರದ್ದೇ ಆದ ಪ್ರಪಂಚ. ಹದಿನೈದು ವರ್ಷಗಳಿಂದ ಒಬ್ಬರೊನ್ನೊಬ್ಬರು ಗಾಢವಾಗಿ ಪ್ರೀತಿಸುವ ಈ ಜೋಡಿಹಕ್ಕಿಗಳು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ.

    ನಾಯಕಿ ದರ್ಶನ್ ಕಟ್ಟಾ ಅಭಿಮಾನಿ

    ನಾಯಕಿ ದರ್ಶನ್ ಕಟ್ಟಾ ಅಭಿಮಾನಿ

    ನಾಯಕಿ ರಾಣಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೈಹಾರ್ಡ್ ಅಭಿಮಾನಿ. ಮದುವೆಯ ಶಾಪಿಂಗ್ ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರ ವೀಕ್ಷಿಸಲು ನಾಯಕ ಮತ್ತು ನಾಯಕಿ ಬೆಂಗಳೂರಿಗೆ ಬರುತ್ತಾರೆ. ಗೋಕರ್ಣದಿಂದ ಆರಂಭವಾಗುವ ಚಿತ್ರಕ್ಕೆ ಟ್ವಿಸ್ಟ್ ಸಿಗುವುದೇ ಬೆಂಗಳೂರಿನಲ್ಲಿ. ಇಲ್ಲಿಂದ ಹೆಜ್ಜೆ ಹೆಜ್ಜೆಗೂ ತಿರುವು ಪಡೆದುಕೊಳ್ಳುವ ಚಿತ್ರದ ಕ್ಲೈಮ್ಯಾಕ್ಸ್ ಹ್ಯಾಪಿ ಎಂಡಿಂಗ್ ಆಗುತ್ತೋ ಅಥವಾ ಬೇರೇನಾದರೂ ಆಗುತ್ತೋ ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡಿದರೇ ಚೆಂದ.

    ಲೇಟಾದರೂ ಲೇಟೆಸ್ಟಾಗಿ ಬಂದಿದೆ

    ಲೇಟಾದರೂ ಲೇಟೆಸ್ಟಾಗಿ ಬಂದಿದೆ

    2013ರಲ್ಲೇ ತೆರೆಗೆ ಬರಬೇಕಾಗಿದ್ದ ಈ ಸಿನಿಮಾ ಲೇಟಾದರೂ ಲೇಟೆಸ್ಟಾಗಿ ಬಂದಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರೇ ಚಿತ್ರದ ನಿರ್ಮಾಪಕರು ಆಗಿರೋದ್ರಿಂದ, ಜೊತೆಗೆ ಇದು ಅವರ ಮೊದಲ ನಿರ್ಮಾಣದ ಸಿನಿಮಾ ಕೂಡ. ಹೀಗಾಗಿ ಒಳ್ಳೆಯ ಸಮಯಕ್ಕಾಗಿ ಕಾದಿದ್ದು ವ್ಯರ್ಥವಾಗಿಲ್ಲ.

    ಫೋಟೋಗ್ರಾಫಿ ಚಿತ್ರದ ಪ್ಲಸ್ ಪಾಯಿಂಟ್

    ಫೋಟೋಗ್ರಾಫಿ ಚಿತ್ರದ ಪ್ಲಸ್ ಪಾಯಿಂಟ್

    ಸತ್ಯ ಹೆಗಡೆ ಅವರ ಫೋಟೋಗ್ರಾಫಿ ಚಿತ್ರದ ಪ್ಲಸ್ ಪಾಯಿಂಟ್. ಹಳ್ಳಿ ಮತ್ತು ಕಾಡಿನ ದೃಶ್ಯಗಳನ್ನು ಹೆಗಡೆ ಸುಂದರವಾಗಿ ಸೆರೆಹಿಡಿದಿದ್ದಾರೆ. ಇನ್ನು ಚಿತ್ರದ ಹಾಡು, ಹಾಡಿನ ಚಿತ್ರೀಕರಣ, ರವಿವರ್ಮ ಅವರ ಸಾಹಸ ಸನ್ನಿವೇಶಗಳು ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿಬಂದಿದೆ.

    ಬುಲೆಟ್ ಪ್ರಕಾಶ್ ಅಭಿನಯ

    ಬುಲೆಟ್ ಪ್ರಕಾಶ್ ಅಭಿನಯ

    ಇಡೀ ಚಿತ್ರದಲ್ಲಿ ಪ್ರೇಕ್ಷಕರ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳುವುದು ಬುಲೆಟ್ ಪ್ರಕಾಶ್ ಅಭಿನಯ. ಅಲ್ಲಲ್ಲಿ ಇವರದ್ದು ಡಬಲ್ ಮೀನಿಂಗ್ ಡೈಲಾಗುಗಳು ಇದ್ದರೂ ಅದು ಸನ್ನಿವೇಶಕ್ಕ ತಕ್ಕಂತಿದೆ. ಸುಚೇಂದ್ರ ಪ್ರಸಾದ್ ಅವರದ್ದೂ ಗಂಭೀರ ಅಭಿನಯ.

    ಡೋಂಟ್ ಮಿಸ್ ಇಟ್

    ಡೋಂಟ್ ಮಿಸ್ ಇಟ್

    ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಧನಂಜಯ್ ಮತ್ತು ಶ್ರುತಿ ಇಬ್ಬರೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ರಾಟೆ ಚಿತ್ರ ಹಲವು ಅಡೆತಡೆಗಳ ನಡುವೆಯೂ ನಿರ್ದೇಶಕ ಎ ಪಿ ಅರ್ಜುನ್ ಸುಂದರ ಪ್ರೇಮಕಥೆಯನ್ನು, ಎಲ್ಲೂ ಬೋರ್ ಹೊಡೆಸದೆ ತೆರೆ ಮೇಲೆ ತಂದಿದ್ದಾರೆ. ಯುಗಾದಿ ಹಬ್ಬಕ್ಕೆ ರಾಟೆ ಚಿತ್ರ ಉತ್ತಮ ಟ್ರೀಟ್ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ.

    English summary
    A P Arjun directed Raate movie review. Dhananjay and Shruthi Hariharan in the lead role. Movie is worth watching.
    Thursday, September 27, 2018, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X