»   » ಟ್ವಿಟ್ಟರ್ ನಲ್ಲಿ ಸುನಿ-ಕಿಟ್ಟಿ ಜೋಡಿಗೆ 'ಬಹುಪರಾಕ್'

ಟ್ವಿಟ್ಟರ್ ನಲ್ಲಿ ಸುನಿ-ಕಿಟ್ಟಿ ಜೋಡಿಗೆ 'ಬಹುಪರಾಕ್'

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಅಬ್ ಕೀ ಬಾರ್, ಬಹುಪರಾಕ್ ದರ್ಬಾರ್‌' ಎಂಬ ಅಡಿ ಬರಹದೊಂದಿಗೆ ಕರ್ನಾಟಕದಾದ್ಯಂತ ತೆರೆಗೆ ಬಂದಿರುವ ಬಹುಪರಾಕ್ ಚಿತ್ರ ನಿಜಕ್ಕೂ ಎಲ್ಲೆಡೆ ದರ್ಬಾರ್ ಆರಂಭಿಸಿದೆ ಎಂಬ ಸಂತಸದ ಸುದ್ದಿ ಬಂದಿದೆ.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಂತರ ನಿರ್ದೇಶಕ ಸುನಿ ಅವರು ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರ ಕಾಂಬಿನೇಷನ್ ನಲ್ಲಿ ಅರ್ಥಪೂರ್ಣ ಚಿತ್ರವನ್ನು ನೀಡುವ ಮೂಲಕ ಕಿಟ್ಟಿ ಅವರ ವೃತ್ತಿ ಜೀವನ ಸಿಲ್ವರ್ ಜ್ಯುಬಿಲಿಗೆ ಒಳ್ಳೆ ಉಡುಗೊರೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. [ಜ್ಯೂಕ್ ಬಾಕ್ಸ್ ಬಗ್ಗೆ ಓದಿ]

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಂಗೀತ ನೀಡಿದ್ದ ಭರತ್ ಬಿ.ಜೆ ಅವರು ಈ ಚಿತ್ರಕ್ಕೆ ಸಂದರ್ಭಕ್ಕೆ ತಕ್ಕ ರಾಗ ಸಂಯೋಜನೆ ಮಾಡುವ ಮೂಲಕ ಸಿನಿರಸಿಕರ ಮನಸೂರೆ ಮಾಡಿದ್ದಾರೆ. ಎಂದಿನಂತೆ ಸುನಿ ಚಿತ್ರದ ಸರಳ ಸಾಹಿತ್ಯ ಕೂಡಾ ಜನ ಮೆಚ್ಚುಗೆಯಾಗಿದೆ.

ಮನಸ್, ಮಣಿ, ಮೌನಿ ಎಂಬ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀನಗರ ಕಿಟ್ಟಿಗೆ ಮೇಘನಾ ರಾಜ್ ಅವರು ಸ್ನೇಹಾ, ಪ್ರೀತಿಯಾಗಿ ಕಾಡಲಿದ್ದಾರೆ. ಚಿತ್ರಕ್ಕೆ ನಟ, ನಟಿಯರು, ಸಿನಿ ರಸಿಕರು ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಬಹುಪರಾಕ್ ಹವಾ ಹೇಗಿದೆ ನೋಡೋಣ ಬನ್ನಿ...

ಆರಂಭದ ದೃಶ್ಯಕ್ಕೆ ಪ್ರೇಕ್ಷಕ ಫುಲ್ ಫಿದಾ
  

ಆರಂಭದ ದೃಶ್ಯಕ್ಕೆ ಪ್ರೇಕ್ಷಕ ಫುಲ್ ಫಿದಾ

ಆರಂಭದ ದೃಶ್ಯಕ್ಕೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾನೆ. ಮನಸ್, ಮೌನಿ, ಮಣಿ ಪಾತ್ರಗಳ ಪರಿಚಯ ಉತ್ತಮವಾಗಿ ಬಂದಿದೆ

  

ಚಿತ್ರದ ನಾಯಕಿ ಮೇಘನಾ ರಾಜ್ ಟ್ವೀಟ್

ಚಿತ್ರದ ನಾಯಕಿ ಮೇಘನಾ ರಾಜ್ ನಿನ್ನೆ ಟ್ವೀಟ್ ಚಿತ್ರದ ಪ್ರದರ್ಶನದ ಬಗ್ಗೆ ಕಾತುರರಾಗಿರುವುದಾಗಿ ಹೇಳಿದ್ದಾರೆ.

  

ಮೈಸೂರಿನಲ್ಲಿ ಹೌಸ್ ಫುಲ್ ಆಗಿದೆಯಂತೆ

ಬೆಂಗಳೂರಿನಲ್ಲಷ್ಟೇ ಅಲ್ಲ ಮೈಸೂರಿನ ಪ್ರಮುಖ ಚಿತ್ರಮಂದಿರಗಳೂ ಹೌಸ್ ಫುಲ್ ಆಗಿದೆಯಂತೆ

  

ನಟ ಪಟ್ರೆ ಅಜಿತ್ ರಿಂದ ಶುಭ ಹಾರೈಕೆ

ನಟ ಪಟ್ರೆ ಅಜಿತ್ ರಿಂದ ಬಹುಪರಾಕ್ ಚಿತ್ರ ತಂಡಕ್ಕೆ ಶುಭ ಹಾರೈಕೆ

ಮಧ್ಯಂತರದ ತನಕ ಬಹುಪರಾಕ್ ಹೇಗಿದೆ?
  

ಮಧ್ಯಂತರದ ತನಕ ಬಹುಪರಾಕ್ ಹೇಗಿದೆ?

* ಆರಂಭದಲ್ಲಿ ಟೈಟಲ್ ಕಾರ್ಡ್ ತೋರಿಸುವುದು ವಿಭಿನ್ನವಾಗಿದ್ದು, ದೇವನಿರುವನು ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತದೆ
* ರಕ್ಷಿತ್ ಶೆಟ್ಟಿ ಹಾಗೂ ಶ್ರೀನಗರ ಕಿಟ್ಟಿ ಮುಖಾ ಮುಖಿ ದೃಶ್ಯಕ್ಕೆ ಫುಲ್ ವಿಷಲ್, ಕ್ಲಾಪ್ಸ್
* 'ಘರ್ಷಣೆಗಿಂತ ಆಕರ್ಷಣೆ ಮುಖ್ಯ', ಸುನಿ ಒನ್ ಲೈನರ್ ಪಂಚ್ ಇಲ್ಲೂ ಮುಂದುವರಿಕೆ
* ಮನಸ್, ಮೌನಿ, ಮಣಿ ಮೂರು ಪಾತ್ರಗಳ ಕಥೆ ಪ್ಯಾರಲೆಲ್ ಆಗಿ ಹೇಳುವ ಪ್ರಯತ್ನ

ಸಾಂಗ್ಸ್, ಫೈಟ್, ಕಿಟ್ಟಿ ಡೈಲಾಗ್ ಟೈಮಿಂಗೂ
  

ಸಾಂಗ್ಸ್, ಫೈಟ್, ಕಿಟ್ಟಿ ಡೈಲಾಗ್ ಟೈಮಿಂಗೂ

* ಸ್ನೇಹಾ ಎಂಬುದು ಗೀತೆ ಹಿತಾನುಭವ ನೀಡುತ್ತದೆ. ಚಿತ್ರದ ಸಿನಿಮಾಟೋಗ್ರಾಫಿ ಅದ್ಭುತ.
* ಉಲ್ಟಾ ಇರ್ಲಿ ಸೀದಾ ಇರ್ಲಿ ಲಾಂಗ್ ಮೇಲೆ ಗ್ರಿಪ್ ಇರಲಿ ಎಂದು ಕಿಟ್ಟಿ ಫೈಟ್ ಮಾಡೋ ಸೀನ್ ಗೆ ಫುಲ್ ಪ್ರಶಂಸೆ
* 'ಈ ಲವ್ವು ರೌಡಿಸಂ ಆಫರ್ ಗಳನ್ನ ಅರ್ಜೆಂಟಾಗಿ ಒಪ್ಪಿಕೊಳ್ಳಬಾರ್ದು' ಒಂದು ಡೈಲಾಗ್
* ಗೆದ್ದೆ ಗೆಲ್ತಾನಂತಾ ಮೊದಲೇ ಹೇಳಿದ್ದೆ ಹಾಡಿಗೆ ಪ್ರೇಕ್ಷಕರ ಡ್ಯಾನ್ಸ್
* ಮೊದಲರ್ಧ ಚಿತ್ರ ಸಾಗಿದ್ದೇ ತಿಳಿಯುವುದಿಲ್ಲ, ಚಿತ್ರಕಥೆಯಲ್ಲಿ ವೇಗವಿದೆ ಐದಕ್ಕೆ ಮೂರುವರೆ ಅಂಕ

  

ಸಿಂಪಲ್ ಪ್ರೀತಿ ಅಳಕ್ ಬುಳಕ್ ಸಾಂಗ್

* ಹಾಡುಗಳ ಸಂಯೋಜನೆ ಅದಕ್ಕೆ ತಕ್ಕಂತೆ ನಟನೆ ನಿರೂಪಿಸುವಲ್ಲಿ ಸುನಿ ಗೆದ್ದಿದ್ದಾರೆ.
* ರಾಜೇಶ್ ಕೃಷ್ಣನ್, ಅನುರಾಧಾ ಭಟ್ ಹಾಡಿರುವ ಉಸಿರಾಗುವೆ ಸೆಕೆಂಡ್ ಹಾಫ್ ನಲ್ಲಿ ಮಿಂಚಿನ ಸಂಚಾರ

  

ನಟಿ ಕಾರುಣ್ಯರಿಂದ ಶುಭ ಹಾರೈಕೆ

ನಿರ್ದೇಶಕ ಸುನಿ, ನಟ ಶ್ರೀನಗರ ಕಿಟ್ಟಿ, ಬಹುಪರಾಕ್ ಚಿತ್ರ ತಂಡಕ್ಕೆ ನಟಿ ಕರುಣ್ಯಾ ರಾಮ್ ರಿಂದ ಶುಭ ಹಾರೈಕೆ

  

ಆರ್ ಜೆ ಪ್ರದೀಪರಿಂದ ಚಿತ್ರಕ್ಕೆ ಶುಭ ಹಾರೈಕೆ

ಆರ್ ಜೆ ಕಮ್ ಚಿತ್ರ ನಿರ್ದೇಶಕ ಪ್ರದೀಪರಿಂದ ಚಿತ್ರಕ್ಕೆ ಶುಭ ಹಾರೈಕೆ

  

ಅಭಯ ಸಿಂಹ ರಿಂದ ಶುಭಾಶಯ

ನಿರ್ದೇಶಕ ಅಭಯಸಿಂಹರಿಂದ ಬಹುಪರಾಕ್ ಚಿತ್ರ ತಂಡಕ್ಕೆ ಶುಭ ಹಾರೈಕೆ

  

ನಟಿ ನಿಕ್ಕಿ ಗಲ್ ರಾಣಿ ರಿಂದ ಶುಭ ಹಾರೈಕೆ

ನಟಿ ಸಂಜನಾ ತಂಗಿ ನಿಕ್ಕಿ ಗಲ್ ರಾಣಿ ಶುಭ ಹಾರೈಕೆ

  

ಗಾಯಕಿ ಸಿ.ಆರ್ ಬಾಬ್ಬಿರಿಂದ ಶುಭ ಹಾರೈಕೆ

ಉಳಿದವರು ಕಂಡಂತೆ ಚಿತ್ರದ ಗಾಯಕಿ ಸಿ.ಆರ್ ಬಾಬ್ಬಿರಿಂದ ಶುಭ ಹಾರೈಕೆ

  

ನಟಿ ಮೇಘನಾ ಗಾಂವಕರ್ ರಿಂದ ಶುಭ ಹಾರೈಕೆ

ನಟಿ ಮೇಘನಾ ಗಾಂವಕರ್ ರಿಂದ ಸುನಿ ಹಾಗೂ ತಂಡಕ್ಕೆ ಶುಭ ಹಾರೈಕೆ

  

ಬಹುಪರಾಕ್ ಚಿತ್ರಕ್ಕೆ ಫುಲ್ ಮಾರ್ಕ್ಸ್

ಬಹುಪರಾಕ್ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ ನಮ್ ಸಿನಿಮಾ ತಂಡ

English summary
Srinagara Kitty and Meghna Raj Sterrer Bahuparak Kannada movie First day First Show Twitter report by enthusiastic Cinema fans and citizen journalists from across the Karnataka. This Movie is second venture by Director Suni.
Please Wait while comments are loading...

Kannada Photos

Go to : More Photos