twitter
    For Quick Alerts
    ALLOW NOTIFICATIONS  
    For Daily Alerts

    'ಧೂಮ್ 3' ವಿಮರ್ಶೆ: ಧೂಮ್ ಧಾಮ್ ಚಿತ್ರ

    By ಉದಯರವಿ
    |

    ಈ ವರ್ಷದಲ್ಲೇ ಬಹುನಿರೀಕ್ಷಿತ ಚಿತ್ರ ಎಂದರೆ 'ಧೂಮ್ 3'. ಚಿತ್ರದಲ್ಲಿ ಅಮೀರ್ ಖಾನ್ ಇದ್ದಾರೆ ಎಂಬ ಕಾರಣಕ್ಕೋ ಅಥವಾ ಯಶ್ ರಾಜ್ ಚಿತ್ರ ಎಂಬ ಉದ್ದೇಶಕ್ಕೋ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಸರಿಸುಮಾರು 4,000 ಚಿತ್ರಮಂದಿರಗಳಲ್ಲಿ ಭಾರತಾದ್ಯಂತ ಚಿತ್ರ ತೆರೆಕಂಡಿದೆ. ರು. 150 ಕೋಟಿ ಬಜೆಟ್ ಸಿನಿಮಾ ಎಂದರೆ ನಿರೀಕ್ಷೆಗಳು ಏನೆಲ್ಲಾ ಇರಬೇಡ.

    ಯಶ್ ರಾಜ್ ಬ್ಯಾನರ್ ಚಿತ್ರಕ್ಕೆ ಸಾಕಷ್ಟು ಪ್ರಚಾರ ಕೊಡದಿದ್ದರೂ ಅಮೀರ್ ಖಾನ್ ಹಾಗೂ ಕತ್ರಿನಾ ಕೈಫ್ ಮೇಲಿನ ಮೋಹಕ್ಕೆ ಚಿತ್ರ ತನ್ನಷ್ಟಕ್ಕೆ ತಾನೆ ಪ್ರಚಾರ ಪಡೆದುಕೊಳ್ತು. ಮೂರು ಗಂಟೆಗಳ ಕಾಲ ಸಾಗುವ ಆಕ್ಷನ್ ಪ್ರಧಾನ ಚಿತ್ರ ಎಲ್ಲೂ ಬೋರು ಹೊಡೆಸದಂತೆ ನೀಟಾಗಿ ತೆರೆಗೆ ತಂದಿದ್ದಾರೆ ವಿಜಯ್ ಕೃಷ್ಣ ಆಚಾರ್ಯ. ['ಧೂಮ್ 3' ತೆರೆಗೆ; ಎಲ್ಲಾ ದಾಖಲೆ ಧೂಳಿಪಟ?]

    'ಧೂಮ್ 3' ಚಿತ್ರ ತಾಂತ್ರಿಕವಾಗಿ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದಲ್ಲಿನ ಆಕ್ಷನ್ ಸನ್ನಿವೇಶಗಳು, ಬೈಕ್ ಸ್ಟಂಟ್ಸ್ ಮೈನವಿರೇಳಿಸುವಂತಿವೆ. ಈ ಹಿಂದಿನ 'ಧೂಮ್' ಸರಣಿಗೆ ಹೋಲಿಸಿದರೆ ಈ ಬಾರಿ ಚಿತ್ರಕಥೆ ಆಸಕ್ತಿಕರವಾಗಿ ಹೆಣೆದಿರುವುದು ವಿಶೇಷ.

    Rating:
    4.0/5

    ಚಿತ್ರ: ಧೂಮ್ 3
    ನಿರ್ಮಾಣ: ಯಶ್ ರಾಜ್ ಫಿಲಂಸ್
    ನಿರ್ದೇಶನ: ವಿಜಯ್ ಕೃಷ್ಣ ಆಚಾರ್ಯ
    ಛಾಯಾಗ್ರಹಣ:
    ಸಂಕಲನ: ರಿತೇಶ್ ಸೋನಿ
    ಸಂಗೀತ:ಪ್ರೀತಂ, ಜೂಲಿಯಸ್ ಪ್ಯಾಕಿಯಂ
    ಪಾತ್ರವರ್ಗ: ಅಮೀರ್ ಖಾನ್, ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಕತ್ರಿನಾ ಕೈಫ್.

    ಮೂರು ಗಂಟೆಗಳ ಕಾಲ ಸಾಗುವ ಕಥೆ

    ಮೂರು ಗಂಟೆಗಳ ಕಾಲ ಸಾಗುವ ಕಥೆ

    ಮೂರು ಗಂಟೆಗಳ ಕಾಲ ಚಿತ್ರವನ್ನು ಎಳೆದಿರುವುದು ಚಿತ್ರದ ಮೈನಸ್ ಪಾಯಿಂಟ್ ಗಳಲ್ಲಿ ಒಂದು. ಚಿತ್ರ ಇಷ್ಟು ಸುದೀರ್ಘವಾಗಿ ಇದ್ದರೂ ಎಲ್ಲೂ ಬೋರು ಹೊಡೆಸುವುದಿಲ್ಲ. ಚಿತ್ರದಲ್ಲಿನ ಅಮೀರ್ ಹಾಗೂ ಕತ್ರಿನಾ ಅವರ ಕೆಲವು ರೊಮ್ಯಾಂಟಿಕೆ ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು.

    ಪ್ರತಿಯೊಬ್ಬರೂ ನೋಡುವಂತಹ ಚಿತ್ರ

    ಪ್ರತಿಯೊಬ್ಬರೂ ನೋಡುವಂತಹ ಚಿತ್ರ

    ಧೂಮ್ 3 ಚಿತ್ರ ಆಕ್ಷನ್ ಪ್ರಿಯರಿಗಷ್ಟೇ ಅಲ್ಲ ಹಿಂದಿ ಚಿತ್ರಗಳನ್ನು ಆರಾಧಿಸುವ ಪ್ರತಿಯೊಬ್ಬರೂ ನೋಡುವಂತಹ ಚಿತ್ರ. ಚಿತ್ರದ ಇನ್ನೊಂದು ಆಕರ್ಷಣೆ ಎಂದರೆ ಛಾಯಾಗ್ರಹಣ. ಕಥೆಯ ಓಟಕ್ಕೆ ತಕ್ಕಂತೆ ಆಕ್ಷನ್, ಥ್ರಿಲ್ಲಿಂಗ್ ಸನ್ನಿವೇಶಗಳು ಇವೆ.

    ಚಿಕಾಗೋದಲ್ಲಿನ ಸನ್ನಿವೇಶಗಳ ಮೂಲಕ ಆರಂಭ

    ಚಿಕಾಗೋದಲ್ಲಿನ ಸನ್ನಿವೇಶಗಳ ಮೂಲಕ ಆರಂಭ

    ಚಿಕಾಗೋದಲ್ಲಿನ ಸನ್ನಿವೇಶಗಳ ಮೂಲಕ ಚಿತ್ರ ಆರಂಭವಾಗುತ್ತದೆ. ಒಂದು ಸರ್ಕಸ್ ಕಂಪನಿ ಮಾಲೀಕನ ಮಗನಾಗಿ ಅಮೀರ್ ಖಾನ್ ಅಭಿನಯಿಸಿದ್ದಾರೆ. ಸರ್ಕಸ್ ಕಂಪನಿಯ ಮಾಲೀಕ ಇಕ್ಬಾಲ್ (ಜಾಕಿ ಶ್ರಾಫ್) ತನ್ನ ಕಂಪನಿ ನಡೆಸಲು ಸಾಧ್ಯವಾಗದೆ ಸಾಲಕ್ಕೆ ಬಿದ್ದು ಗುಂಡು ಹಾರಿಸಿಕೊಂಡು ಸಾವಪ್ಪುತ್ತಾನೆ.

    ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸಹಿಲ್

    ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸಹಿಲ್

    ಇಕ್ಬಾಲ್ ಪುತ್ರನೇ ಸಹಿರ್ (ಅಮೀರ್ ಖಾನ್) ಕಂಪನಿಯನ್ನು ಮುನ್ನಡೆಸಲು ಮುಂದಾಗುತ್ತಾನೆ. ಅದೇ ಸಂದರ್ಭದಲ್ಲಿ ಚಿಕಾಗೋ ಬ್ಯಾಂಕ್ ದರೋಡೆಯಾಗುತ್ತದೆ. ಅದಕ್ಕೂ ಈ ಕಂಪನಿಗೂ ಸಂಬಂಧ ಇದೆ ಎಂಬ ಆರೋಪದಲ್ಲಿ ಬಾಂಬೆ ಪೊಲೀಸರು ಸಹಿಲ್ ಗೆ ಸಮನ್ಸ್ ಕಳುಹಿಸುತ್ತಾರೆ.

    ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ. ಸಹಿಲ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಎಸಿಪಿ ಜೈ (ಅಭಿಷೇಕ್ ಬಚ್ಚನ್) ಹಾಗೂ ಆಲಿ (ಉದಯ್ ಚೋಪ್ರಾ) ಬ್ಯಾಂಕ್ ದರೋಡೆ ಮಾಡಿಸುತ್ತಾರಾ? ಎಂಬುದನ್ನು ತೆರೆಯ ಮೇಲೆ ನೋಡಿದರೇನೆ ಚೆಂದ.

    ಸನ್ನಿವೇಶದಿಂದ ಸನ್ನಿವೇಶಕ್ಕೆ ಕುತೂಹಲಕಾರಿ

    ಸನ್ನಿವೇಶದಿಂದ ಸನ್ನಿವೇಶಕ್ಕೆ ಕುತೂಹಲಕಾರಿ

    ಸನ್ನಿವೇಶದಿಂದ ಸನ್ನಿವೇಶಕ್ಕೆ ಕಥೆ ಕುತೂಹಲ ಉಳಿಸಿಕೊಳ್ಳುತ್ತಾ ಸಾಗುತ್ತದೆ. ಕಥೆಯಲ್ಲಿನ ಬಿಗಿ ನಿರೂಪಣೆಯ ಪ್ರೇಕ್ಷಕರನ್ನು ಸೀಟಿಗೆ ಅಂಟಿಕುಳಿತುಕೊಳ್ಳುವಂತೆ ಮಾಡುತ್ತದೆ. ಚಿತ್ರದಲ್ಲಿ ಕಥೆಯದೇ ಒಂದು ಹಂತದಲ್ಲಿ ಹೀರೋ ಅನ್ನಿಸಿಕೊಳ್ಳುತ್ತದೆ.

    ಅಮೀರ್ ಖಾನ್ ತಮ್ಮ ಪಾತ್ರಕ್ಕೆ ಉಸಿರು ತುಂಬಿದ್ದಾರೆ

    ಅಮೀರ್ ಖಾನ್ ತಮ್ಮ ಪಾತ್ರಕ್ಕೆ ಉಸಿರು ತುಂಬಿದ್ದಾರೆ

    ಅಮೀರ್ ಖಾನ್ ನಟನೆ ಬಗ್ಗೆ ಅವರ ಪಾತ್ರದ ಬಗ್ಗೆ ಏನೂ ಕೆಮ್ಮಂಗಿಲ್ಲ. ಅಷ್ಟೊಂಡು ಪರ್ಫೆಕ್ಟ್. ತಮ್ಮ ಪಾತ್ರಕ್ಕೆ ಅವರು ಉಸಿರುತುಂಬಿದ್ದಾರೆ.

    ಕತ್ರಿನಾ ಕೈಫ್ ಪಾತ್ರ ಸೊಗಸಾಗಿದೆ

    ಕತ್ರಿನಾ ಕೈಫ್ ಪಾತ್ರ ಸೊಗಸಾಗಿದೆ

    ಇನ್ನು ಕತ್ರಿನಾ ಕೈಫ್ ಅವರನ್ನು ಪ್ರತಿ ಸನ್ನಿವೇಶದಲ್ಲೂ ಸೊಗಸಾಗಿ ತೋರಿಸಿದ್ದಾರೆ ನಿರ್ದೇಶಕರು. ಡಾನ್ಸ್ ಹಾಗೂ ಆಕ್ಟಿಂಗ್ ನಲ್ಲೂ ಅಷ್ಟೇ ಪರ್ಫೆಕ್ಟ್. ಆದರೆ ಅವರ ಪಾತ್ರಕ್ಕೆ ಹೆಚ್ಚಿನ ಎಮೋಷನಲ್ ಟಚ್ ಕೊಟ್ಟಿಲ್ಲ. ಜೈ ದೀಕ್ಷಿತ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ಮಿಂಚಿದ್ದಾರೆ.

    ಉದಯ್ ಚೋಪ್ರಾ ಕಾಮಿಡಿ ಟೈಮಿಂಗ್ ಸೂಪರ್

    ಉದಯ್ ಚೋಪ್ರಾ ಕಾಮಿಡಿ ಟೈಮಿಂಗ್ ಸೂಪರ್

    ಉದಯ್ ಚೋಪ್ರಾ ಸಹ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕಾಮಿಡಿ ಸನ್ನಿವೇಶಗಳಲ್ಲಿ ತಮ್ಮದೇ ಆದಂತಹ ಟೈಮಿಂಗ್ ಮೂಲಕ ಅವರು ನಗಿಸುತ್ತಾರೆ.

    ವಿಜಯ್ ಕೃಷ್ಣ ಆಚಾರ್ಯ ಗೆದ್ದಿದ್ದಾರೆ

    ವಿಜಯ್ ಕೃಷ್ಣ ಆಚಾರ್ಯ ಗೆದ್ದಿದ್ದಾರೆ

    ಚಿತ್ರದ ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಗೆದ್ದಿದ್ದಾರೆ. ಚಿತ್ರಕಥೆಯನ್ನು ನೀಟಾಗಿ ತೆರೆಗೆ ತರುವಲ್ಲಿ ಅವರ ಶ್ರಮ ಎದ್ದು ಕಾಣುತ್ತದೆ. ಚಿತ್ರ ಸುದೀರ್ಘ ಮೂರು ಗಂಟೆಗಳಷ್ಟಿದ್ದರೂ ಸಂಕಲನವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ರಿತೇಶ್ ಸೋನಿ.

    ಧೂಮ್ 3 ಖಂಡಿತ ನಿರಾಸೆಪಡಿಸಲ್ಲ

    ಧೂಮ್ 3 ಖಂಡಿತ ನಿರಾಸೆಪಡಿಸಲ್ಲ

    ಒಟ್ಟಾರೆಯಾಗಿ ಕಮರ್ಷಿಯ ಚಿತ್ರಕ್ಕೆ ಏನೆಲ್ಲಾ ಬೇಕೋ ಅಷ್ಟನ್ನೂ ಈ ಚಿತ್ರ ಭರ್ಜರಿಯಾಗಿ ಕೊಟ್ಟಿದೆ. ಇದೊಂದು ಅಮೀರ್ ಖಾನ್ ಚಿತ್ರ ಎಂದು ನೋಡುವುದಕ್ಕೆ ಬದಲಾಗಿ ಆಕ್ಷನ್, ಥ್ರಿಲ್, ಸಸ್ಪೆನ್ಸ್ ಹಾಗೂ ಮೇಕಿಂಗ್ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಚಿತ್ರವನ್ನು ವೀಕ್ಷಿಸಿದರೆ ಖಂಡಿತ ನಿರಾಸೆಪಡಿಸಲ್ಲ.

    English summary
    Dhoom 3 movie review. The film will definitely find a place for itself in the crowd and will be enjoyed by a great number of audience. However, it is not for those who rely on logic!
    Friday, December 20, 2013, 17:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X