»   » ದಿಲ್ವಾಲೆ: ಶಾರುಖ್ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು

ದಿಲ್ವಾಲೆ: ಶಾರುಖ್ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಚಿತ್ರರಂಗಕ್ಕೆ 'ರೀಮಿಕ್ಸ್' ಚಿತ್ರಗಳನ್ನು ಪರಿಚಯಿಸಿ ಗೆದ್ದಿರುವ ರೋಹಿತ್ ಶೆಟ್ಟಿ ಅವರ ನಿರ್ದೇಶನದ ಹೊಚ್ಚ ಹೊಸ ಚಿತ್ರ ದಿಲ್ವಾಲೆ ಆರಂಭದಿಂದಲೂ ಸದ್ದು ಮಾಡುತ್ತಲೇ ಇದೆ.

ಕಿಂಗ್ ಖಾನ್ ಶಾರುಖ್ ಹಾಗೂ ಕಾಜೋಲ್ ಒಟ್ಟಿಗೆ ನಟಿಸಿದ್ದಾರೆ ಎಂಬ ಕಾರಣಕ್ಕೆ ಕುತೂಹಲ ಕಾಯ್ದುಕೊಂಡ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಚಿತ್ರದಲ್ಲಿ ಶಾರುಖ್ ಬಿಟ್ರೆ ಮತ್ತೇನಿಲ್ಲ, ಹಳೆ ಕಥೆ ಹೊಸ ರೂಪ ಆದ್ರೆ, ಹಳಸಿದ ಚಿತ್ರಾನ್ನ ಎಂದು ವಿಮರ್ಶಕರು ಷರಾ ಬರೆದುಬಿಟ್ಟಿದ್ದಾರೆ. [ಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್]

ಅಂದ ಹಾಗೆ, ಈ ಚಿತ್ರದಲ್ಲಿ ಶಾರುಖ್ ಕಾಜೋಲ್ ಹಳೆ ರೋಮ್ಯಾಂಟಿಕ್ ಜೋಡಿ ಅಲ್ಲದೆ, ವರುಣ್ ಧವನ್ ಹಾಗೂ ಕೀರ್ತಿ ಹೊಸ ಜೋಡಿ ಕೂಡಾ ಇದೆ. ಯೂನಸ್ ಸಜಾವಾಲ್ ಅವರಿಗೆ ಸ್ಕ್ರಿಪ್ಟ್ ಬರೆಯಲು ಹೆಚ್ಚು ಕಷ್ಟವಾಗಿಲ್ಲ. [ಹೀರೋಯಿಸಂಗಿಂತ ಸೋದರ ಪ್ರೇಮವೇ ದೊಡ್ಡದು : ಶಾರುಖ್]

ಹಿಂದಿಯಲ್ಲೇ ಬಂದಿರುವ ಬಿಗ್ ಬಿ, ರಜನಿ, ಗೋವಿಂದ ನಟಿಸಿದ 'ಹಮ್' ನಿಂದ ಹಿಡಿದು ತಮಿಳಿನ 'ಬಾಷಾ' ತನಕ ತೆಲುಗಿನ ನೆವರ್ ಎಂಡಿಂಗ್ ರಾಯಲ್ ಸೀಮಾ ಮನೆ ಮನೆ ಫ್ಯಾಮಿಲಿ ಫಾಕ್ಷನ್ ವಾರ್ ತನಕ ಅನೇಕ ಚಿತ್ರಗಳ ಸಿಡಿಗಳು ಇದ್ದರೆ ಸಾಕು. ಹತ್ತು ಹದಿನೈದು ವರ್ಷಗಳ ಕಾಲ ಬಿಟ್ಟು ಮತ್ತೊಮ್ಮೆ ಒಂದಾಗುವ ಕಥೆ ಪ್ರೇಕ್ಷಕರಿಗೆ ಹೊಸದೇನಲ್ಲ.ಶಾರುಖ್ ಚಿತ್ರಕ್ಕೆ ಈ ರೀತಿ ಪ್ರತಿಕ್ರಿಯೆ ಏಕೆ, ವಿಮರ್ಶಕರು ಹೇಳಿದ್ದೇನು ಮುಂದೆ ಓದಿ...

ಕಥೆ, ನಿರ್ದೇಶನ ಬಿಡಿ, ಶಾರುಖ್- ಕಾಜೋಲ್ ನೋಡಿ

ಕಥೆ, ನಿರ್ದೇಶನ ಬಿಡಿ, ಶಾರುಖ್- ಕಾಜೋಲ್ ನೋಡಿ

ರೀಡಿಫ್, ಹಿಂದೂಸ್ತಾನ್ ಟೈಮ್ಸ್, ಇಂಡಿಯನ್ ಎಕ್ಸ್ ಪ್ರೆಸ್, ಕೊಯಿಮೊಯಿ ಸೇರಿದಂತೆ ಅನೇಕ ವೆಬ್ ಸೈಟ್ ಗಳು 5ಕ್ಕೆ 3ಕ್ಕಿಂತ ಕಡಿಮೆ ಸ್ಟಾರ್ ಕೊಟ್ಟಿವೆ. ಶಾರುಖ್ ಚಿತ್ರಕ್ಕೆ ಈ ರೀತಿ ಪ್ರತಿಕ್ರಿಯೆ ಏಕೆ, ವಿಮರ್ಶಕರು ಹೇಳಿದ್ದೇನು ಮುಂದೆ ಓದಿ...

ಕಥೆ ಚಿತ್ರಕಥೆ ನಿಮಗೆ ಗೊತ್ತಿರುತ್ತೆ ಬಿಡಿ

ಕಥೆ ಚಿತ್ರಕಥೆ ನಿಮಗೆ ಗೊತ್ತಿರುತ್ತೆ ಬಿಡಿ

ಬಲ್ಗೇರಿಯಾದಲ್ಲಿ ಡಾನ್ ರಣಧೀರ್ ಭಕ್ಷಿ ಹಾಗೂ ಮಲ್ಲಿಕ್ ನಡುವಿನ ಕಿತ್ತಾಟ. ರಣಧೀರ್ ದತ್ತು ಪುತ್ರ ರಾಜ್ (ಶಾರುಖ್) ಹೇಗೆ ಅಪ್ಪನ ಆಸೆ ಪೂರೈಸುತ್ತಾನೆ. ಮೀರಾ(ಕಾಜೋಲ್) ಜೊತೆ ಹಾಡಿ ನಲಿಯುತ್ತಾನೆ. 15 ವರ್ಷ ಇಬ್ಬರು ಏಕೆ ಬೇರೆಯಾಗುತ್ತಾರೆ. ಮೀರಾ ತಂಗಿ ಕೀರ್ತಿಯನ್ನು ರಾಜ್ ಬಣದ ವೀರ್ (ವರುಣ್) ಪ್ರೀತಿಸುತ್ತಾನೆ. ಮುಂದೇನಾಗುತ್ತದೆ

ಇಂಡಿಯನ್ ಎಕ್ಸ್ ಪ್ರೆಸ್ 1/5

ಇಂಡಿಯನ್ ಎಕ್ಸ್ ಪ್ರೆಸ್ 1/5

ಏನು ಹೊಸದಿಲ್ಲ, ರೋಹಿತ್ ಶೆಟ್ಟಿ ಚಿತ್ರ ಎಂದ ಮೇಲೆ ಕಥೇ ಕೇಳಬೇಡಿ, ಗಿಮಿಕ್, ಹೊಡಿ ಬಡಿ, ಒಳ್ಳೆ ಲೋಕೇಷನ್, ಪಂಚಿಂಗ್ ಡೈಲಾಗ್,ಕಾಮಿಡಿ ಇರುತ್ತೆ. ನೋಡಿ ಎಂಜಾಯ್ ಮಾಡಿ. ಶಾರುಖ್ -ಕಾಜೋಲ್ ಬಿಟ್ಟರೆ ಮತ್ತೇನಿಲ್ಲ. ಚಿತ್ರದಲ್ಲಿ ಫ್ರೆಶ್ ನೆಸ್ ಇಲ್ಲ, ನಮಗೂ ಹಳೆ ವೈನ್ ಹೊಸ ಬಾಟಲಿ ಎಂಬ ಡೈಲಾಗ್ ಹೊಡೆದು ಸಾಕಾಗಿದೆ- ಶುಭ್ರ ಗುಪ್ತಾ

ಶೆಟ್ಟಿ ಬದಲಾಗಲ್ಲ ಕಿಂಗ್ ಖಾನ್ ಗೆ ಜೈ 1.5/5

ಶೆಟ್ಟಿ ಬದಲಾಗಲ್ಲ ಕಿಂಗ್ ಖಾನ್ ಗೆ ಜೈ 1.5/5

"Dil sab ke paas hota hai lekin sab dilwale nahi hote" ಇದು ಇಡೀ ಚಿತ್ರದ ಬಗ್ಗೆ ಒಂದು ಸಾಲಿನ ಆಶಯ ಎನ್ನಬಹುದು. ಶಾರುಖ್- ಕಾಜೋಲ್ ಚಿತ್ರವನ್ನು ಗೆಲ್ಲಿಸಬಹುದು. ಶೆಟ್ಟಿ ಮತ್ತೆ ದುಡ್ಡು ಬಾಚಬಹುದು. ಆದರೆ, ಹೃದಯವಂತನ ಹೃದಯ ತುಂಬಾ ಚಿಕ್ಕದು, ಚಿತ್ರ ತುಂಬಾ ದೊಡ್ಡದು, ನೀವು ದಿಲ್ವಾಲೆಯಾಗಿದ್ದರೆ ಧೈರ್ಯವಾಗಿ ನೋಡಿ ಬನ್ನಿ ಹಾರ್ಟ್ ಅಟ್ಯಾಕ್ ಆದರೆ, ನಾವು ಜವಾಬ್ದಾರರಲ್ಲ. -ರೋಹಿತ್ ವತ್ಸ್.

ಟೈಮ್ ಪಾಸ್ ಚಿತ್ರ 2.5/5

ಟೈಮ್ ಪಾಸ್ ಚಿತ್ರ 2.5/5

ಈ ಚಿತ್ರದಲ್ಲಿ ಎಲ್ಲಾ ಇದೆ. ಸ್ಟಾರ್ ಜೋಡಿ, ಹಾಡು, ಒಳ್ಳೆ ಲೊಕೇಷನ್, ಕಾಮಿಡಿ ಎಂಜಾಯ್ ಮಾಡಬಹುದು. ಕಥೆ ಬಗ್ಗೆ ಕೇಳಬೇಡಿ ಶೆಟ್ಟಿಗೆ ಬೇಜಾರಾಗುತ್ತೆ. ಪೂರ್ತಿ ಪೈಸಾ ವಸೂಲ್ ಎನ್ನಲು ಆಗದಿದ್ದರೂ ವಾರಾಂತ್ಯದಲ್ಲಿ ಟಿಕೆಟ್ ಸಿಕ್ಕರೆ ಒಮ್ಮೆ ನೋಡಲು ಅಡ್ಡಿಯಿಲ್ಲ. ಶಾರುಖ್ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಇರಲಿ ವರುಣ್ ಧವನ್ -ಕೀರ್ತಿ ಪ್ರೋತ್ಸಾಹಿಸಲಾದರೂ ಚಿತ್ರ ನೋಡಿ-ಸುರಭಿ ರೇಡ್ಕರ್

English summary
Dilwale Movie Critics Review:This Rohit Shetty directorial has been making news from day one, from casting Shahrukh Khan as main lead, to bringing back SRK-Kajol together.Dilwale may not be an iconic classic like Bajirao Mastani but SRK and cast will entertain you, especially if you are a Shahrukh Khan fan!
Please Wait while comments are loading...

Kannada Photos

Go to : More Photos