»   » ಪುನೀತ್ ಅಪ್ಪಟ ಅಭಿಮಾನಿಯಿಂದ 'ದೊಡ್ಮನೆ ಹುಡ್ಗ' ಮೊದಲ ವಿಮರ್ಶೆ

ಪುನೀತ್ ಅಪ್ಪಟ ಅಭಿಮಾನಿಯಿಂದ 'ದೊಡ್ಮನೆ ಹುಡ್ಗ' ಮೊದಲ ವಿಮರ್ಶೆ

Written by: ಸಾಗರ್ ಮನಸು
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮಷ್ಟೇ ಪವರ್ ಫುಲ್ ಆಗಿ. 'ದೊಡ್ಮನೆ ಹುಡ್ಗ' ಚಿತ್ರದ ಮೂಲಕ ಇಂದು (ಸೆಪ್ಟೆಂಬರ್ 30) ತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಮೊದಲ ಕಾಂಬಿನೇಷನ್ ಎಲ್ಲರಿಗೂ ಸಖತ್ ಆಗಿ ಹಿಡಿಸಿದೆ.

ಜೊತೆಗೆ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ಕೂಡ ಎರಡನೇ ಬಾರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ಜೊತೆಯಾಗಿದ್ದಾರೆ. ದುನಿಯಾ ಸೂರಿ ಮತ್ತು ಪುನೀತ್ ಅವರ ಹ್ಯಾಟ್ರಿಕ್ ಚಿತ್ರಕ್ಕೆ ಅಭಿಮಾನಿಗಳು ಕೂಡ ಭಾರಿ ರೆಸ್ಪಾನ್ಸ್ ಮಾಡಿದ್ದಾರೆ.['ದೊಡ್ಮನೆ ದರ್ಬಾರ್' ಮೊದಲ ಶೋ ನೋಡಿದವರ ಟ್ವೀಟ್ ವಿಮರ್ಶೆ]


ಈಗಾಗಲೇ ಮೊದಲ ಶೋ ನೋಡಿದ ಅಭಿಮಾನಿಗಳು ಮತ್ತು ಕೆಲವು ವಿಮರ್ಶಕರು ತಮ್ಮ ವಿಮರ್ಶೆಯನ್ನು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ಅವರ ಕಟ್ಟಾ ಅಭಿಮಾನಿ ಸಾಗರ್ ಮನಸು ಎಂಬುವವರು ಮೊದಲ ವಿಮರ್ಶೆ ಬರೆದಿದ್ದು, ಅದನ್ನು ನಿಮಗಾಗಿ ಹೊತ್ತು ತಂದಿದ್ದೇವೆ. ಓವರ್ ಟು ಸಾಗರ್ ಮನಸು....


ಮನರಂಜನೆಯ ಭೂರಿ ಭೋಜನ

ಮನರಂಜನೆಯ ಭೂರಿ ಭೋಜನ

'ನಾವು ದೊಡ್ಮನೆಯವರು, ಕೊಡೋದಷ್ಟೇ ಗೊತ್ತು ಬೇರೆಯವರಿಂದ ಏನು ಅಪೇಕ್ಷೆ ಪಡಲ್ಲ. ಹೌದು 'ದೊಡ್ಮನೆ ಹುಡ್ಗ' ಚಿತ್ರದ ಸಾರಂಶ ದಂತೆ ಅಕ್ಷರಶಃ ಪ್ರೇಕ್ಷಕರಿಗೆ ಅದ್ದೂರಿ ಮನರಂಜನೆಯ ಊಟ ಬಡಿಸಿದ್ದಾನೆ'.[ಅಂಬರೀಶ್ ವಿರುದ್ಧ ಆಕ್ರೋಶ: 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ]


ದಸರಾ ಬೋನಸ್

ದಸರಾ ಬೋನಸ್

ಒಬ್ಬ ಸಾಮಾನ್ಯ ಚಿತ್ರ ಪ್ರೇಮಿಗೆ ಏನು ಬೇಕೋ, ಅವೆಲ್ಲಾ ಚಿತ್ರದುದ್ದಕ್ಕೂ ಇದೆ. ಅಭಿಮಾನಿ ದೇವರ ಕಾಸು, ಅಪ್ಪು ಹೋಳಿ ಸಾಹಸದ ಆಗಮನ ಹಾಗೂ 'ಅಭಿಮಾನಿಗಳೇ ನಮ್ಮನೆ ದೇವ್ರು' ಹಾಡಿನಲ್ಲೇ ಬಡ್ಡಿ ಸಮೇತ ವಸೂಲಾಗಿಬಿಡುತ್ತದೆ. ಮಿಕ್ಕಿದ್ದೆಲ್ಲಾ ದಸರಾ ಬೋನಸ್.['ದೊಡ್ಮನೆ ಹುಡ್ಗ' ಟ್ರೈಲರ್ ನಲ್ಲಿ ಅದೆಷ್ಟು ವಿಶೇಷತೆಗಳಿವೆ ಗೊತ್ತಾ.?]


ಪುನೀತ್ ನಟನೆ ಬಗ್ಗೆ

ಪುನೀತ್ ನಟನೆ ಬಗ್ಗೆ

ಚಿತ್ರದ ನಟನೆಯ ವಿಷಯಕ್ಕೆ ಬಂದರೆ ಪುನೀತ್ ನಟನೆ ಲೀಲಾಜಾಲ. ಚಿತ್ರದಿಂದ ಚಿತ್ರಕ್ಕೆ ಅಪ್ಪು ಅಭಿನಯ ಮಾಗಿದೆ. ಸಾಹಸದಲ್ಲಿ, ಸಾಹಸ ಸಾರ್ವಭೌಮನಾಗಿ ಮಿಂಚಿದರೆ, ನೃತ್ಯದಲ್ಲಿ ಪ್ರೇಕ್ಷಕರೇ ಎದ್ದು ಕುಣಿಯುವಂತೆ ಮಾಡುತ್ತಾರೆ.


ಅಂಬರೀಶ್/ರಾಧಿಕಾ ಪಂಡಿತ್ ನಟನೆ

ಅಂಬರೀಶ್/ರಾಧಿಕಾ ಪಂಡಿತ್ ನಟನೆ

ರೆಬೆಲ್ ಸ್ಟಾರ್ ಅಂಬರೀಶ್ ಅವರು ಪುನೀತ್ ತಂದೆಯ ಪಾತ್ರದಲ್ಲಿ ಮನಮಿಡಿಯುವ ಅಭಿನಯ, ಹೆಸರಿಗೆ ತಕ್ಕಂತೆ ಅವರದು ಚಿತ್ರದಲ್ಲಿ ರೆಬೆಲ್ ಪಾತ್ರ. ನಟಿ ರಾಧಿಕಾ ಪಂಡಿತ್ ಎರಡೂ ತರದ ಪಾತ್ರಗಳಲ್ಲಿ ಬಿಂದಾಸ್ ಆಗಿ ಅಭಿನಯಿಸಿದ್ದಾರೆ. ರವಿಶಂಕರ್ ಮೊದಲ ಬಾರಿಗೆ ಪುನೀತ್ ಎದುರು ಎದೆಯೊಡ್ಡಿ ನಿಂತಿದ್ದಾರೆ. ಅಪ್ಪು-ರವಿಶಂಕರ್ ಪಾತ್ರಗಳನ್ನು ತೆರೆಯ ಮೇಲೆಯೇ ನೋಡಿ ಆನಂದಿಸಬೇಕು.


ಇನ್ನುಳಿದವರು

ಇನ್ನುಳಿದವರು

ಕಾಮಿಡಿ ಕಿಂಗ್ ಚಿಕ್ಕಣ್ಣ ಭರ್ಜರಿಯಾಗಿ ನಗಿಸಿದ್ದಾರೆ, ರಂಗಾಯಣ ರಘು, ಅವಿನಾಶ್, ಸುಮಲತಾ, ಭಾರತಿ ವಿಷ್ಣುವರ್ಧನ್, ಡಾರ್ಲಿಂಗ್ ಕೃಷ್ಣ ಮತ್ತಿತ್ತರು ಪೈಪೋಟಿಯ ಅಭಿನಯ ನೀಡಿದ್ದಾರೆ.


ನಿರ್ದೇಶನ ಶೈಲಿ ಹೇಗಿದೆ

ನಿರ್ದೇಶನ ಶೈಲಿ ಹೇಗಿದೆ

ತಂತ್ರಜ್ಞರ ವಿಷಯಕ್ಕೆ ಬಂದರೆ ಒಂದು ಮಾಸ್ ಸಿನಿಮಾವನ್ನು ಹೀಗೂ ಮಾಡಬಹುದು ಎಂದು ದುನಿಯಾ ಸೂರಿ ಅವರನ್ನು ನೋಡಿಯೇ ಕಲಿಯಬೇಕು. ಎರಡೂ ಕಾಲು ಗಂಟೆ ಕಿಂಚಿತ್ತೂ ಎಡವದೆ ನಿರ್ದೇಶಿಸಿರುವ ಸೂರಿಗೆ ಒಂದು ಸಲಾಂ ಹೇಳಲೇ ಬೇಕು.


ಕ್ಯಾಮೆರಾ ಕೈ ಚಳಕ

ಕ್ಯಾಮೆರಾ ಕೈ ಚಳಕ

ಸತ್ಯ ಹೆಗಡೆಯ ದೃಶ್ಯ ವೈಭವ ಕಣ್ತುಂಬಿಕೊಳ್ಳಲು ಎರಡೂ ಕಣ್ಣು ಸಾಲದು. ಅದರಲ್ಲೂ ಮೊದಲನೇ ಹಾಡು ಮತ್ತು ನಂಜನಗೂಡಿನ ಸನ್ನಿವೇಶಗಳಲ್ಲಿ ಪ್ರೇಕ್ಷಕ ಚಿತ್ರದೊಳಗೆ ತಾನು ಪ್ರವೇಶ ಮಾಡಿರುತ್ತಾನೆ. ಅಷ್ಟರಮಟ್ಟಿಗೆ ಸತ್ಯ ಹೆಗಡೆ ಅವರ ಕ್ಯಾಮೆರಾ ಕೈ ಚಳಕ ಅದ್ಭುತ. ಸಾಹಸ ನಿರ್ದೇಶಕ ರವಿವರ್ಮ ಅವರ ಅದ್ದೂರಿ ಸಾಹಸಗಳು ಮೈನವಿರೇಳಿಸುತ್ತವೆ. ದೀಪು ಅವರ ಸಂಕಲನ ಇಷ್ಟವಾಗುತ್ತದೆ. ವಿ.ಹರಿಕೃಷ್ಣ ಅವರ ಹಾಡುಗಳು ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸುತ್ತವೆ.


ಸಾಮಾನ್ಯ ಪ್ರೇಕ್ಷಕನಾಗಿ ವಿಮರ್ಶೆ

ಸಾಮಾನ್ಯ ಪ್ರೇಕ್ಷಕನಾಗಿ ವಿಮರ್ಶೆ

ನೆನಪಿರಲಿ ಒಬ್ಬ ಅಭಿಮಾನಿಯಾಗಿ ನಾನು ಈ ವಿಮರ್ಶೆ ಬರೆದಿಲ್ಲ. ಸಾಮಾನ್ಯ ಪ್ರೇಕ್ಷಕನಾಗಿ ಹೇಳುವುದಾದರೆ, ಈ ಚಿತ್ರ ಪುನೀತ್ ಅವರ ಹಿಂದಿನ ಎಲ್ಲಾ ಚಿತ್ರಗಳನ್ನು ಮೀರಿ ನಿಲ್ಲುತ್ತದೆ. ಸಾಮಾನ್ಯರಾಗಿ, ಬಡವರಿಗೆ ನೆರವಾಗುವ ಪವರ್ ಸ್ಟಾರ್ ಅಲಿಯಾಸ್ ಸೂರ್ಯ, ಥಿಯೇಟರ್ ನಿಂದ ಹೊರಬರುವ ಹೊತ್ತಿಗೆ ನಿಮ್ಮನ್ನು ಖಂಡಿತ ಆವರಿಸಿಕೊಂಡಿರುತ್ತಾನೆ.


ಕುಟುಂಬ ಸಮೇತ ನೋಡಬಹುದಾದ ಸಿನಿಮಾ

ಕುಟುಂಬ ಸಮೇತ ನೋಡಬಹುದಾದ ಸಿನಿಮಾ

ಸಿನಿಮಾ ಮುಗಿದ ಮೇಲೂ ಅಂಬರೀಶ್ ಕಾಡುತ್ತಾರೆ. ತುಂಬ ದಿನಗಳ ನಂತರ ಒಂದು ಕುಟುಂಬ ಸಮೇತ ನೋಡುವಂತ ಅಪ್ಪಟ ಕನ್ನಡ ಸಿನಿಮಾ ಬಂದಿದೆ. ಮನೆ ಮಂದಿಯೆಲ್ಲಾ ಚಿತ್ರಮಂದಿರದತ್ತ ಮುಖಮಾಡಿ, ಭರಪೂರ ಮನರಂಜನೆಯ ಬಿರಿಯಾನಿ ತಿಂದು ತೇಗಿ ಬನ್ನಿ.. - ಸಾಗರ್ ಮನಸು.


ಅಭಿಮಾನಿ ಸಾಗರ್ ಮನಸು ಕೊಟ್ಟ ರೇಟಿಂಗ್: 5/5.


English summary
Kannada Actor Puneeth Rajkumar fan Sagar Manasu has taken his facebook account to appreciate Puneeth Rajkumar and Actress Radhika Pandith starrer, Duniya Soori Directorial 'Dodmane Huduga' movie.
Please Wait while comments are loading...

Kannada Photos

Go to : More Photos