twitter
    For Quick Alerts
    ALLOW NOTIFICATIONS  
    For Daily Alerts

    'ದನ ಕಾಯೋನು' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    By Harshitha
    |

    'ಯೋಗರಾಜ್ ಭಟ್ ರವರ ಸಿನಿಮಾಗಳಲ್ಲಿ ಕಥೆ ಇರುವುದೇ ಇಲ್ಲ', 'ಭಟ್ರ ತಲೆ ಖಾಲಿ ಆಗಿದೆ' ಅಂತ ಗಾಂಧಿನಗರದಲ್ಲಿ ಆಡಿಕೊಂಡವರ ಬಾಯಿಗೆ ಗೋದ್ರೆಜ್ ಬೀಗ ಜಡಿಯುವ ಮಟ್ಟಕ್ಕೆ ನಿರ್ದೇಶಕ ಯೋಗರಾಜ್ ಭಟ್ 'ದನ ಕಾಯೋನು' ಚಿತ್ರವನ್ನ ತೆರೆಗೆ ತಂದಿದ್ದಾರೆ.

    ನಿನ್ನೆಯಷ್ಟೇ ಬಿಡುಗಡೆ ಆಗಿರುವ 'ದನ ಕಾಯೋನು' ಚಿತ್ರದಲ್ಲಿನ ಅಪ್ಪಟ ಗ್ರಾಮೀಣ ಸೊಗಡಿನ ಕಥೆಯಲ್ಲಿ ದುನಿಯಾ ವಿಜಯ್, ಪ್ರಿಯಾಮಣಿ ನೈಜ ಅಭಿನಯ ಕಂಡು ಪ್ರೇಕ್ಷಕರು ಮನ ಸೋತಿದ್ದಾರೆ. ಆದ್ರೆ, ವಿಮರ್ಶಕರ ಅಭಿಪ್ರಾಯವೇನು.? [ವಿಮರ್ಶೆ: ಪ್ರಾಣಿ ಪ್ರಿಯರು ಧಾರಾಳವಾಗಿ 'ದನ ಕಾಯ್ಬೋದು'.!]

    ಕರ್ನಾಟಕದ ಜನಪ್ರಿಯ ದಿನ ಪತ್ರಿಕೆಗಳು ಪ್ರಕಟಿಸಿರುವ 'ದನ ಕಾಯೋನು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ....

    'ದನ ಕಾಯೋನು' ಮತ್ತು ಜಾಗತೀಕರಣ : ವಿಜಯ ಕರ್ನಾಟಕ

    'ದನ ಕಾಯೋನು' ಮತ್ತು ಜಾಗತೀಕರಣ : ವಿಜಯ ಕರ್ನಾಟಕ

    ದನ ಕಾಯೋನು ಚಿತ್ರದ ಮೂಲಕ ಎರಡು ಭಯಂಕರ ಆರೋಪಗಳಿಂದ ಮುಕ್ತವಾಗಿದ್ದಾರೆ ನಿರ್ದೇಶಕ ಯೋಗರಾಜ್ ಭಟ್‌ ಮತ್ತು ನಟ ದುನಿಯಾ ವಿಜಯ್‌. ಸಾಮಾನ್ಯವಾಗಿ ಭಟ್ಟರ ಸಿನಿಮಾಗಳಲ್ಲಿ ಕತೆಯೇ ಇರುವುದಿಲ್ಲ ಅನ್ನುವ ಮಾತಿತ್ತು. ಇತ್ತೀಚೆಗೆ ವಿಜಯ್‌ ಕೇವಲ ಸಾಹಸ ಸನ್ನಿವೇಶಗಳಿರುವ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ ಅನ್ನುವ ಅಸಹನೆ ಇತ್ತು. ಅವೆರಡೂ ಇಲ್ಲಿ ಮಾಯವಾಗಿವೆ. ಈ ಬಾರಿ ನಿರ್ದೇಶಕರು ಗಂಭೀರ ವಿಷಯವನ್ನೇ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ವಿಜಯ್‌ ಮತ್ತೆ ಹಳೆಯ ದಿನಗಳಿಗೆ ಮರಳಿದ್ದಾರೆ. ಈ ಕಾರಣಕ್ಕಾಗಿ ದನ ಕಾಯೋನು ವಿಶೇಷ ಸಿನಿಮಾ ಅನಿಸುತ್ತದೆ. ಇಂದು ಜಾಗತೀಕರಣದ ಬಿಸಿ ಹಳ್ಳಿಯನ್ನೂ ಬಿಟ್ಟಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನ ನಮಗರಿವಿಗೆ ಬಾರದೇ ದೇಸಿತನದ ಜತೆಗಿನ ಮಾನವ ಸಂಬಂಧದವನ್ನು ನುಂಗಿ ಹಾಕುತ್ತಿವೆ. ಈ ಸೂಕ್ಷ್ಮವಾದ ಎಳೆಯೇ ಸಿನಿಮಾ ಆಗಿದೆ - ಶರಣು ಹುಲ್ಲೂರು

    ಬೆಲೆ ಕಟ್ಟಲಾಗದ ಹೋರಿಗೆ ಬರೀ ಮಾತಿನ ಬರೆ! - ಉದಯವಾಣಿ

    ಬೆಲೆ ಕಟ್ಟಲಾಗದ ಹೋರಿಗೆ ಬರೀ ಮಾತಿನ ಬರೆ! - ಉದಯವಾಣಿ

    'ದನ ಕಾಯೋನು' ಒಂದು ಪಕ್ಕಾ ಭಟ್ಟರ ಶೈಲಿಯ ಸಿನಿಮಾ. ಆರಂಭದಿಂದ ಅಂತ್ಯದವರೆಗೂ ತಮ್ಮ ಶೈಲಿಯನ್ನು ಬಿಟ್ಟುಕೊಡದೆ ಸಿನಿಮಾ ಮಾಡಿದ್ದಾರೆ ಭಟ್ಟರು. ಅದರ ಪರಿಣಾಮವಾಗಿಯೇ ಮಾತು ಮಾತು ಮತ್ತು ಮಾತು. ಯಾವುದೇ ಏರಿಳಿತಗಳಿಲ್ಲದೇ, ನೋಡುಗರಿಗೆ, ಕೇಳುಗರಿಗೆ ಈ ಅತಿಯಾದ ಮಾತು ಸುಸ್ತಾಗಬಹುದೆಂಬ ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೇ ಭಟ್ಟರು ತಮ್ಮ 'ಮಾತಿನ ವರಸೆ'ಯಲ್ಲೇ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ - ರವಿಪ್ರಕಾಶ್ ರೈ

    ಮಾತಿನ ಅಬ್ಬರದಲ್ಲಿ ಕಳೆದುಹೋದ 'ಅಂಬಾ' - ಪ್ರಜಾವಾಣಿ

    ಮಾತಿನ ಅಬ್ಬರದಲ್ಲಿ ಕಳೆದುಹೋದ 'ಅಂಬಾ' - ಪ್ರಜಾವಾಣಿ

    ಶಂಕರನಾಗ್‌ ನಿರ್ದೇಶನದ ‘ಒಂದು ಮುತ್ತಿನ ಕಥೆ' ಸಿನಿಮಾದ ಆಧುನಿಕ ರೂಪ ಯೋಗರಾಜ ಭಟ್‌ ನಿರ್ದೇಶನದ ‘ದನ ಕಾಯೋನು'. ಅಲ್ಲಿನ ಬೆಲೆಬಾಳುವ ಮುತ್ತು, ಈ ಹೊತ್ತಿನ ಅಪರೂಪದ ತಳಿಯ ಹೋರಿ. ದುಡ್ಡಿನ ಕಾರಣದಿಂದಾಗಿ ಮನುಷ್ಯರ ಮುಖವಾಡಗಳು ಕಳಚಿಬೀಳುವುದು ಹಾಗೂ ಅಂತಃಕರಣವೇ ದೊಡ್ಡದೆನ್ನುವ ಆದರ್ಶ ಎರಡು ಚಿತ್ರಗಳಲ್ಲೂ ಇದೆ. ಆದರೆ, ‘ಒಂದು ಮುತ್ತಿನ ಕಥೆ' ಚಿತ್ರದಲ್ಲಿರುವ ದಟ್ಟ ಪ್ರಾದೇಶಿಕ ಆವರಣ ‘ದನ ಕಾಯೋನು' ಚಿತ್ರದಲ್ಲಿಲ್ಲ. ರಾಜಕುಮಾರ್‌, ಅರ್ಚನಾ ಅವರಂಥ ಅನುಭವಿ ಕಲಾವಿದರ ಪ್ರಭಾವಳಿ ಈ ಚಿತ್ರದಲ್ಲಿಲ್ಲ. ‘ಒಂದು ಮುತ್ತಿನ ಕಥೆ' ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಸುವ ಗಾಢ ವಿಷಾದ ಕೂಡ ಭಟ್ಟರ ಚಿತ್ರದಿಂದ ದಕ್ಕುವುದಿಲ್ಲ. ‘ಗಾಳಿಪಟ' ಚಿತ್ರದ ನಂತರ ಯೋಗರಾಜ ಭಟ್‌ ಅವರು ಹೆಚ್ಚು ಸಾಧ್ಯತೆಗಳಿರುವ ಕಥೆಯನ್ನು ಆಯ್ದುಕೊಂಡಿರುವುದು ‘ದನ ಕಾಯೋನು' ಚಿತ್ರದಲ್ಲಿಯೇ. ಊರವರ ದನಗಳನ್ನು ಕಾಯುವ ಕುಟುಂಬವೊಂದರ ತವಕತಲ್ಲಣಗಳ ಸಿನಿಮಾ ತನ್ನ ವಿಶಿಷ್ಟ ಕಥೆಯಿಂದಾಗಿ ಗಮನಸೆಳೆಯುತ್ತದೆ. ಅಪ್ಪನಾಗಿ ಬಿರಾದಾರ್ ಹಾಗೂ ಮಗನಾಗಿ ವಿಜಯ್‌ ಅಭಿನಯ ಚೆನ್ನಾಗಿದೆ - ರಘುನಾಥ.ಚ.ಹ

    Dana Kayonu Movie Review - Bangalore Mirror

    Dana Kayonu Movie Review - Bangalore Mirror

    Yograj Bhat seems to have reinvented himself. Dana Kayonu does not carry the usual irreverent tone of his films. It should rank among his best films. Instead of relying only on characterisation and dialogues, he weaves an impressive story and narrates a story of the underclass that is convincing and soothing. Picking an often heard village legend, he turns it into a narrative of the subaltern class; the cowherds. There are also glimpses of Geethapriya's film Premayana, a popular Kannada folk story and a nervous reference to the current politics over cow. A bull (Shankara) and a cow (Gowri) are among the principal characters, where Bhat once again shows his love for animal characters. Of course, Bhat cannot forego his love for dialogue overdose. Especially in the first half, Rangayana Raghu continues to ham his way through. The film is also too long for comfort. However it does not feel like a drag- Shyam Prasad

    Dana Kayonu Movie Review - Times of India

    Dana Kayonu Movie Review - Times of India

    Yogaraj Bhat is back in his vintage best with Dana Kayonu. This film is his own Thithi or Gods Must Be Crazy, only with more commercial elements, like fights, songs and more. Only, these can be pardoned because you end up rooting for the story, its unconventional heroes and it also has a subtle underlying message, if your can look beneath the surface. The story is simple. There are no extra frills. This is about a particular bull and its innocent owner and what happens when this almost good-for-nothing duo has a big price tag to it. This is when human emotions, rather the cardinal sins, take over and the village suddenly becomes a big political arena. This little hamlet becomes a mirror image of what could happen to people, rather what already has - Sunayana Suresh

    English summary
    Kannada Actor Duniya Vijay starrer Kannada Movie 'Dana Kayonu' has received positive response from the critics. Here is the collection of 'Dana Kayonu' reviews by Top News Papers of Karnataka.
    Saturday, October 8, 2016, 13:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X