twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಪ್ರಾಣಿ ಪ್ರಿಯರು ಧಾರಾಳವಾಗಿ 'ದನ ಕಾಯ್ಬೋದು'.!

    |

    'ಪ್ರಾಣಿ ಆಗಲಿ, ಮನುಷ್ಯ ಆಗಲಿ, ಬಗ್ಗುವುದು ಪ್ರೀತಿಗೆ ಮಾತ್ರ' - ಇದು 'ದನ ಕಾಯೋನು' ಚಿತ್ರದ ಡೈಲಾಗ್ ಮಾತ್ರ ಅಲ್ಲ. 'ದನ ಕಾಯೋನು' ಸಿನಿಮಾ ನೋಡುವವರಿಗೆ ಸಿಗುವ ಸಂದೇಶ ಕೂಡ ಹೌದು.

    'ಪ್ರಾಣಿಗಳೇ ಗುಣದಲ್ಲಿ ಮೇಲು, ಮಾನವರು ಅಂದಕ್ಕಿಂತ ಕೀಳು' ಎಂಬ ಮಾತಿಗೆ ದೃಶ್ಯ ರೂಪಕ ಕೊಟ್ಟು, ಎಲ್ಲರ ಮನ ಮುಟ್ಟುವ ರೀತಿಯಲ್ಲಿ 'ದನ ಕಾಯೋನು' ಚಿತ್ರವನ್ನ ತೆರೆಗೆ ತಂದಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

    Rating:
    4.0/5
    Star Cast: ದುನಿಯಾ ವಿಜಯ್, ಪ್ರಿಯಾಮಣಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ವೈಜನಾಥ್ ಬಿರಾದಾರ್
    Director: ಯೋಗರಾಜ್ ಭಟ್

    ಕಥಾಹಂದರ

    ಕಥಾಹಂದರ

    ದನ ಕಾಯುವ ಕೆಂಪ ಅಲಿಯಾಸ್ ಡಾಕ್ಟರ್ ಡೊಕೊಮೊ (ದುನಿಯಾ ವಿಜಯ್)ಗೆ ಹಾಲಿನ ಡೈರಿ ಓಪನ್ ಮಾಡುವ ಬಯಕೆ. ಜೇಬಲ್ಲಿ ನಯಾ ಪೈಸಾ ದುಡ್ಡಿಲ್ಲ. ಸಾಲ ಕೇಳಲು ಹೋದರೆ, ಅಡಮಾನ ಇಡಲು ಏನೂ ಇಲ್ಲ. ಊರಿನ ಚೇರ್ ಮ್ಯಾನ್ ಗೆ ಕೆಂಪ ಮತ್ತು ಕುಟುಂಬದ ಮೇಲೆ ಹಳೇ ಸೇಡು ಬೇರೆ. ಇವೆಲ್ಲದರ ನಡುವೆ 'ಗೊಡ್ಡು' ಹೋರಿ.!

    ದುಡ್ಡು ತರುವ 'ಗೊಡ್ಡು' ಹೋರಿ

    ದುಡ್ಡು ತರುವ 'ಗೊಡ್ಡು' ಹೋರಿ

    ಊರಿನ ಜನರಿಂದ 'ಗೊಡ್ಡು' ಹೋರಿ ಅಂತ ಮೂದಲಿಸಿಕೊಳ್ಳುವ ಕೆಂಪನ ಹೋರಿ ಬರೋಬ್ಬರಿ 9 ಕೋಟಿ ಬೆಲೆ ಬಾಳುತ್ತೆ ಅಂತ ಗೊತ್ತಾದಾಗಲೇ 'ದನ ಕಾಯೋನ' ನಿಜವಾದ ಕಥೆ ಆರಂಭ. ಅಲ್ಲಿಂದ ನಡೆಯುವ ಸನ್ನಿವೇಶಗಳನ್ನ ನೀವು ಚಿತ್ರಮಂದಿರಕ್ಕೆ ಹೋಗಿ ನೋಡಿರಿ....

    'ದನ ಕಾಯುವ' ದುನಿಯಾ ವಿಜಯ್

    'ದನ ಕಾಯುವ' ದುನಿಯಾ ವಿಜಯ್

    'ದನ ಕಾಯುವ' ಕೆಂಪ ಅಲಿಯಾಸ್ ಡಾಕ್ಟರ್ ಡೊಕೊಮೊ ಆಗಿ ದುನಿಯಾ ವಿಜಯ್ ನಟನೆ 'ನೈಜ'ವಾಗಿದೆ. ಸ್ಟಂಟ್ಸ್ ವಿಷಯಕ್ಕೆ ಬಂದ್ರೆ ವಿಜಯ್ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಸೆಂಟಿಮೆಂಟ್ ದೃಶ್ಯಗಳಲ್ಲಿ ವಿಜಯ್ ಅಭಿನಯ ಮನ ಮುಟ್ಟುತ್ತದೆ. ವಿಜಯ್ ರವರ ಕಾಮಿಡಿ ಟೈಮಿಂಗ್ ಕೂಡ ಚೆನ್ನಾಗಿದೆ.

    ಪ್ರಿಯಾಮಣಿ ನಟನೆ ಹೇಗಿದೆ?

    ಪ್ರಿಯಾಮಣಿ ನಟನೆ ಹೇಗಿದೆ?

    ಎಂಥಾ ಪಾತ್ರ ಕೊಟ್ಟರೂ, ನಟಿ ಪ್ರಿಯಾಮಣಿ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಎನ್ನುವುದಕ್ಕೆ 'ದನ ಕಾಯೋನು' ಚಿತ್ರವೇ ಸಾಕ್ಷಿ. ಜಗದಾಂಬೆ ಅಲಿಯಾಸ್ ಜಿಮ್ಮಿ ಪಾತ್ರದಲ್ಲಿ ನಟಿ ಪ್ರಿಯಾಮಣಿ ನಟನೆ ಮೆಚ್ಚುವಂಥದ್ದು.

    ಉಳಿದಂತೆ....

    ಉಳಿದಂತೆ....

    ಅಲ್ಲಲ್ಲಿ ರಂಗಾಯಣ ರಘು (ಸಬ್ಸಿಡಿ) ಅಭಿನಯ ಸ್ವಲ್ಪ ಅತಿ ಅನಿಸುತ್ತೆ. ಬಿರಾದರ್, ಸುಚೇಂದ್ರ ಪ್ರಸಾದ್, ಯೋಗರಾಜ್ ಭಟ್ರ ಶಿಷ್ಯ ಮಹೇಶ್ ಅಭಿನಯ ಅಚ್ಚುಕಟ್ಟಾಗಿದೆ.

    ಶಿಳ್ಳೆ ಗಿಟ್ಟಿಸುವ 'ಹೋರಿ' ಶಂಕ್ರ.!

    ಶಿಳ್ಳೆ ಗಿಟ್ಟಿಸುವ 'ಹೋರಿ' ಶಂಕ್ರ.!

    ಇವರೆಲ್ಲರ ಜೊತೆಗೆ 'ಹೋರಿ' ಶಂಕ್ರ ಕೂಡ ಪ್ರೇಕ್ಷಕರ ಶಿಳ್ಳೆ-ಚಪ್ಪಾಳೆ ಗಿಟ್ಟಿಸುತ್ತಾನೆ. ಅದ್ಹೇಗೆ ಎಂಬ ಕುತೂಹಲ ಇದ್ರೆ, ನೀವು ಸಿನಿಮಾ ನೋಡಿ...

    ಸೆಕೆಂಡ್ ಹಾಫ್ ನಲ್ಲಿ ಕಥಾ'ಹೂರಣ'

    ಸೆಕೆಂಡ್ ಹಾಫ್ ನಲ್ಲಿ ಕಥಾ'ಹೂರಣ'

    'ದನ ಕಾಯೋನು' ಚಿತ್ರದ ನಿಜವಾದ ಕಥೆ ಶುರುವಾಗುವುದೇ ಸೆಕೆಂಡ್ ಹಾಫ್ ನಲ್ಲಿ. ಮೊದಲಾರ್ಧ ಖಾಲಿ ಪಲಾವ್ ಆದ್ರೂ, ರುಚಿಗೆ ಮೋಸ ಇಲ್ಲ. ಸಂಕಲನ ಚುರುಕಾಗಿರುವುದರಿಂದ ಅಷ್ಟಾಗಿ ಎಲ್ಲೂ ಬೋರ್ ಆಗಲ್ಲ.

    ಸಂಭಾಷಣೆ ಕಷ್ಟ ಕಷ್ಟ.!

    ಸಂಭಾಷಣೆ ಕಷ್ಟ ಕಷ್ಟ.!

    ಹಳ್ಳಿ ಸೊಗಡು ಹೇರಳವಾಗಿರುವ 'ದನ ಕಾಯೋನು' ಚಿತ್ರದ ಸಂಭಾಷಣೆ ಬೆಂಗಳೂರು ಜನರಿಗೆ ಕಬ್ಬಿಣದ ಕಡಲೆ ಆದ್ರೆ, ಗ್ರಾಮೀಣ ಜನರು ಮಾತ್ರ ಚಪ್ಪರಿಸಿಕೊಂಡು ಸವಿಯುವಂಥದ್ದು.

    ಅನವಶ್ಯಕ ಹಾಡುಗಳಿಲ್ಲ.!

    ಅನವಶ್ಯಕ ಹಾಡುಗಳಿಲ್ಲ.!

    ಒಂದು ಸಮಾಧಾನದ ಸಂಗತಿ ಅಂದ್ರೆ, 'ದನ ಕಾಯೋನು' ಚಿತ್ರದಲ್ಲಿ ಅನವಶ್ಯಕವಾಗಿ ಹಾಡುಗಳನ್ನ ತುರುಕಿಲ್ಲ. ಚಿತ್ರಕಥೆಗೆ ತಕ್ಕ ಹಾಗೆ, ವಿ.ಹರಿಕೃಷ್ಣ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಬ್ಯಾಕ್ ಗ್ರೌಂಡ್ ಸಂಗೀತ ಚೆನ್ನಾಗಿದೆ.

    'ವಾಸ್ತು ಪ್ರಕಾರ' ದನ ಮೇಯ್ಸಿದ್ದಾರೆ ಭಟ್ರು

    'ವಾಸ್ತು ಪ್ರಕಾರ' ದನ ಮೇಯ್ಸಿದ್ದಾರೆ ಭಟ್ರು

    ಸಿನಿಮಾಗೆ 'ವಾಸ್ತು ಪ್ರಕಾರ' ಏನೇನು ಇರಬೇಕೋ, ಎಲ್ಲವೂ ಈ ಚಿತ್ರದಲ್ಲಿ ಇರಬೇಕಾದ ಜಾಗದಲ್ಲಿ ಹಿತವಾಗಿ, ಮಿತವಾಗಿ ಇದೆ. ಕಾಮಿಡಿಗಾಗಿ ಕಲಾವಿದರನ್ನು ತರದೆ, ಸಂಭಾಷಣೆಯಲ್ಲೇ ಕಿಕ್ ನೀಡಿ ತಮ್ಮ ಶೈಲಿಯಲ್ಲೇ ಭಟ್ರು ಪ್ರೇಕ್ಷಕರನ್ನು ರಂಜಿಸಿದ್ದಾರೆ

    ಮೇಕಿಂಗ್ ಚೆನ್ನಾಗಿದೆ

    ಮೇಕಿಂಗ್ ಚೆನ್ನಾಗಿದೆ

    ಮೂಕ ಪ್ರಾಣಿಗಳನ್ನಿಟ್ಟುಕೊಂಡು ಚಿತ್ರೀಕರಣ ಮಾಡುವುದು ಸುಲಭದ ಮಾತಲ್ಲ. ಆದರೂ, ಈ ಸಾಹಸಕ್ಕೆ ಕೈಹಾಕಿ ಭಟ್ರು ಯಶಸ್ವಿ ಆಗಿದ್ದಾರೆ. ಹೀಗಾಗಿ, 'ಪ್ರಾಣಿ ಪ್ರಿಯರು' ದನ ಕಾಯೋನಿ'ಗೆ ಬಹುಪರಾಕ್ ಹೇಳ್ಬಹುದು. ಭಟ್ರು ಆಯ್ಕೆ ಮಾಡಿಕೊಂಡಿರುವ ಲೋಕೇಷನ್ ನೆನಪಲ್ಲಿ ಉಳಿಯುತ್ತೆ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ಫ್ಯಾಮಿಲಿ ಸೆಂಟಿಮೆಂಟ್, ಸೇಡಿನ ಫ್ಲಾಶ್ ಬ್ಯಾಕ್ ಕಥನ, ಲವ್ ಸ್ಟೋರಿ ಸಿನಿಮಾಗಳನ್ನೇ ನೋಡಿ ನೋಡಿ ಬೇಜಾರಾದವರು 'ದನ ಕಾಯೋನು' ಚಿತ್ರವನ್ನ ಒಮ್ಮೆ ಧಾರಾಳವಾಗಿ ನೋಡಬಹುದು. ದೇಸಿ ಮನರಂಜನೆ ಬಯಸುವ ಪ್ರೇಕ್ಷಕರಿಗೆ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಹೇಳಿ ಮಾಡಿಸಿದ ಸಿನಿಮಾ.

    'ದನ ಕಾಯೋನು' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

    'ದನ ಕಾಯೋನು' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

    'ದನ ಕಾಯೋನು' ಚಿತ್ರದ ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ, ವಿಡಿಯೋ ನೋಡಿ....

    English summary
    Kannada Actor Duniya Vijay starrer Kannada Movie 'Dana Kayonu' has hit the screens today (October 7th). 'Dana Kayonu' is a complete treat for Duniya Vijay and Yogaraj Bhat fans. Here is the complete review.
    Saturday, September 29, 2018, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X