twitter
    For Quick Alerts
    ALLOW NOTIFICATIONS  
    For Daily Alerts

    'ಸುಂದರಾಂಗ ಜಾಣ'ನ ನಗಿಸುವ ಸೂತ್ರಕ್ಕೆ ವಿಮರ್ಶಕರು ಖುಷಿಯಾದ್ರಾ?

    By Bharath Kumar
    |

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿ, ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದ 'ಸುಂದರಾಂಗ ಜಾಣ' ಚಿತ್ರಕ್ಕೆ ಮೊದಲ ದಿನ ಉತ್ತಮ ಒಪನಿಂಗ್ ಸಿಕ್ಕಿದ್ದು, ಯಶಸ್ವಿ ಪ್ರದರ್ಶನವಾಗುತ್ತಿದೆ.

    ಔಟ್ ಅಂಡ್ ಔಟ್ ಕಾಮಿಡಿ ಮನರಂಜನೆಯಾಗಿದ್ದ 'ಸುಂದರಾಂಗ ಜಾಣ'ನನ್ನ ನೋಡಿ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದರು. ಆದ್ರೆ, 'ಜಾಣ'ನ ಮೋಡಿಗೆ ವಿಮರ್ಶಕರು ಏನಂದ್ರು?[ವಿಮರ್ಶೆ: ಜಾಣನ 'Memory' ಪುರಾಣ 'ಸರಳ' ಸುಂದರ]

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಸುಂದರಾಂಗ ಜಾಣ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ''ಸುಸ್ತಾಗುವಷ್ಟು ನಗಿಸುವ ಸುಂದರಾಂಗ''-ವಿಜಯ ಕರ್ನಾಟಕ

    ''ಸುಸ್ತಾಗುವಷ್ಟು ನಗಿಸುವ ಸುಂದರಾಂಗ''-ವಿಜಯ ಕರ್ನಾಟಕ

    ಗಣೇಶ್ ಅಭಿನಯದ 'ಸುಂದರಾಂಗ ಜಾಣ' ಪ್ರೇಕ್ಷಕರನ್ನ ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ರೋಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಎಲ್ಲೂ ಬೋರಾಗದಂತೆ ರಮೇಶ್ ಅರವಿಂದ ನಿರ್ದೇಶಸಿದ್ದಾರೆ. ಸ್ಟಾರ್ ನಟ ಹೀರೋ ಆಗಿದ್ದರೂ, ರಮೇಶ್ ಅರವಿಂದ್ ಎಲ್ಲೂ ಸ್ಕ್ರಿಪ್ಟ್ ಗೆ ಚ್ಯುತಿ ಬರದಂತೆ ಎಚ್ಚರಿಕೆ ವಹಿಸಿದ್ದಾರೆ. ಹಾಸ್ಯ ಅಶ್ಲೀಲದ ಗಡಿದಾಟದಂತೆ, ನಟನೆ ಎಲ್ಲೆ ಮೀರದಂತೆ ಲವಲವಿಕೆಯಿಂದ ನೋಡುವಂತಿದೆ ಇಡೀ ಚಿತ್ರ.

    ಗಣೇಶ್ ಲಕ್ಕಿ ಪಾತ್ರಕ್ಕೆ ಫರ್ಫೆಕ್ಟ್ ಮ್ಯಾಚ್. ದೇವರಾಜ್ ನಟನೆಗೆ ಹೆಚ್ಚು ಅಂಕ. ರಂಗಾಯಣ ರಘು, ವೀಣಾ ಸುಮದರ್, ರವಿಶಂಕರ್ ಗೌಡ ಗಮನ ಸೆಳೆಯುತ್ತಾರೆ. ಛಾಯಗ್ರಹಣ ಚಿತ್ರದ ಮೈನಸ್ ಪಾಯಿಂಟ್. ಎಡಿಟಿಂಗ್ ಚೆನ್ನಾಗಿದೆ. ಕಾಮಿಡಿ ಟೈಮಿಂಗ್ ಮತ್ತು ಸಂಭಾಷಣೆ ಚಿತ್ರದ ಹೈಲೈಟ್. ಹಾಡುಗಳು ಮನಸ್ಸಿನಲ್ಲಿ ಉಳಿಯುವುದಿಲ್ಲ. ಈ ವಿಕೇಂಡ್ ನಲ್ಲಿ ಇಡೀ ಫ್ಯಾಮಿಲಿ ನೋಡಬಹುದಾದ ಚಿತ್ರವಿದು.

    ''ಜಾಣ ಮರೆವು ಸುಂದರ ಸ್ವಪ್ನ''-ಉದಯವಾಣಿ

    ''ಜಾಣ ಮರೆವು ಸುಂದರ ಸ್ವಪ್ನ''-ಉದಯವಾಣಿ

    ಪ್ರೇಕ್ಷಕನನ್ನು ರಂಜಿಸುವಲ್ಲಿ "ಸುಂದರಾಂಗ ಜಾಣ' ಯಶಸ್ವಿಯಾಗಿದ್ದಾನೆ. ಮೂಲಕಥೆಗೆ ಧಕ್ಕೆಯನ್ನಿಟ್ಟುಕೊಂಡು ನಿರ್ದೇಶಕ ರಮೇಶ್‌ ಅರವಿಂದ್‌ ಇಲ್ಲಿನ ನೇಟಿವಿಟಿಗೆ ಹಾಗೂ ಗಣೇಶ್‌ ಮ್ಯಾನರೀಸಂಗೆ ತಕ್ಕಂತೆ ಸಿನಿಮಾ ಮಾಡಿರುವ ಪರಿಣಾಮ "ಸುಂದರಾಂಗ'ನ ಮಜಾ ಸಿನಿಮಾದುದ್ದಕ್ಕೂ ಮುಂದುವರೆಯುತ್ತದೆ.

    ಮರೆವಿನ "ಲಕ್ಕಿ'ಯಾಗಿ ಗಣೇಶ್‌ ಇಷ್ಟವಾಗುತ್ತಾರೆ. ನಾಯಕಿ ಸಾನ್ವಿ ಕ್ಯೂಟ್ ಬೆಡಗಿಯಾಗಿ ಇಷ್ಟವಾಗುತ್ತಾರೆ. ಗಣೇಶ್‌ ಪಾತ್ರದ ಜೊತೆ ಜೊತೆಗೆ ಶಿಸ್ತಿನ ವ್ಯಕ್ತಿಯಾಗಿ, ಕಾಳಜಿಯ ತಂದೆಯಾಗಿ ದೇವರಾಜ್‌ ಅವರು ಇಷ್ಟವಾಗುತ್ತಾರೆ. ಉಳಿದಂತೆ ವಸಿಷ್ಠ, ರವಿಶಂಕರ್‌, ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್‌, ಸಿಹಿಕಹಿ ಚಂದ್ರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಜನೀಶ್ ಲೋಕನಾಥ್‌ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ. ಮನೋಹರ್‌ ಜೋಷಿ ಛಾಯಾಗ್ರಹಣ ಚಿತ್ರಕ್ಕೆ ಪೂರಕ.

    ''ನೆನಪಿನಲ್ಲುಳಿಯುವ ಮರೆವಿನ ಜಾಣ''-ವಿಜಯವಾಣಿ

    ''ನೆನಪಿನಲ್ಲುಳಿಯುವ ಮರೆವಿನ ಜಾಣ''-ವಿಜಯವಾಣಿ

    ''ತೆಲುಗಿನ ‘ಭಲೇ ಭಲೇ ಮಗಾಡಿವೋಯ್' ಚಿತ್ರವನ್ನು ಕನ್ನಡದ ಸೊಗಡಿಗೆ ತಂದಿರುವ ನಿರ್ದೇಶಕ ರಮೇಶ್ ಅರವಿಂದ್, ಯಥಾವತ್ ರಿಮೇಕ್ ಮಾಡದೆ ಅಲ್ಲಲ್ಲಿ, ತಮ್ಮದೇ ಶೈಲಿ ಕಾಪಾಡಿಕೊಂಡಿದ್ದಾರೆ. ಮರೆಗುಳಿ ಜಾಣನಾಗಿ ಗಣೇಶ್ ಮಜಾ ಕೊಡುತ್ತಾರೆ. ಶಾನ್ವಿ ಕೂಡ ಪಾತ್ರಕ್ಕೆ ಡೀಸೆಂಟ್ ಆಗಿಯೇ ಜೀವ ತುಂಬಿದ್ದಾರೆ. ಸಿಡುಕ ಅಪ್ಪನಾಗಿ ದೇವರಾಜ್​ರದ್ದು ಪ್ರಬುದ್ಧ ಅಭಿನಯ. ಗಣೇಶ್ ಜತೆಗೆ ನಗಿಸುವುದಕ್ಕೆಂದೇ ದೊಡ್ಡ ತಾರಾಬಳಗವಿದೆ. ಅದರಲ್ಲಿ ರವಿಶಂಕರ್​ಗೌಡ ಹೆಚ್ಚು ಗಮನಸಳೆಯುತ್ತಾರೆ. ಮನೋಹರ್ ಜೋಷಿ ಛಾಯಾಗ್ರಹಣಕ್ಕೆ ಒಳ್ಳೆಯ ಮಾರ್ಕ್ಸ್ ಸಿಕ್ಕರೆ, ಅಜನೀಶ್ ಸಂಗೀತಕ್ಕೆ ಪಾಸ್​ಮಾರ್ಕ್ಸ್. ಪ್ರಥಮಾರ್ಧ ಚೂರು ನಿಧಾನವಾದರೂ, ದ್ವಿತೀಯಾರ್ಧ ವೇಗದಿಂದ ಮುಂದುವರಿಯುತ್ತದೆ.

    ''ನಗಿಸಿ ಕೆಟ್ಟವರಿಲ್ಲ''-ಪ್ರಜಾವಾಣಿ

    ''ನಗಿಸಿ ಕೆಟ್ಟವರಿಲ್ಲ''-ಪ್ರಜಾವಾಣಿ

    ಮದುವೆಯ ವಯಸ್ಸಿಗೆ ಬಂದ ಯುವಕನೊಬ್ಬ ತನ್ನ ಮರೆವಿನ ಕಾರಣದಿಂದಾಗಿ ಏನೆಲ್ಲ ಅವಾಂತರಗಳನ್ನು ಸೃಷ್ಟಿಸಿಕೊಳ್ಳುತ್ತಾನೆ, ಬಂದ ಸಂಬಂಧಗಳು ಹೇಗೆ ತಪ್ಪಿಹೋಗುತ್ತವೆ, ಒಲಿದ ಹುಡುಗಿಯನ್ನು ಪ್ರೀತಿಸಲು ಮತ್ತು ಆ ಪ್ರೀತಿಯನ್ನು ಉಳಿಸಿಕೊಳ್ಳಲು ಯಾವೆಲ್ಲ ನಾಟಕಗಳನ್ನು ಆಡುತ್ತಾನೆ ಎಂಬುದನ್ನು ‘ಸುಂದರಾಂಗ ಜಾಣ' ಚಿತ್ರದಲ್ಲಿ ನಿರ್ದೇಶಕ ರಮೇಶ್ ಅರವಿಂದ್ ನಗೆಬುಗ್ಗೆಗಳ ರೂಪದಲ್ಲಿ ನಿರೂಪಿಸಿದ್ದಾರೆ.

    ಶಾನ್ವಿ ನಗುವಿನಿಂದಲೇ ಗಮನ ಸೆಳೆದರೆ, ಗಣೇಶ್ ಹೊಸ ಗೆಟಪ್ ಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ತಾರಾಗಣ ದೊಡ್ಡದಿದ್ದರೂ ಮೂರ್ನಾಲ್ಕು ಪಾತ್ರಗಳಷ್ಟೇ ತೆರೆಯ ಮೇಲೆ ರಾರಾಜಿಸುತ್ತವೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರದ ಧನಾತ್ಮಕ ಅಂಶಗಳು.

    ''THIS IS A PERFECT HOLIDAY FILM FOR THE WHOLE FAMILY''-Bangalore Mirror

    ''THIS IS A PERFECT HOLIDAY FILM FOR THE WHOLE FAMILY''-Bangalore Mirror

    ''It is a perfect formula to generate laughs. Though a remake of Telugu film Bhale Bhale Magadivoy, the Ramesh Aravind touch is very evident in the film. It is decent, engaging and entertaining. Ganesh has a role that suits his style and screen image. Shanvi portrays a perfect blend of vulnerability and charm. Among the supporting cast, Devaraj and Ravishankar stand out. There is a minimalist approach, but the director has fleshed out each character to requirement.''

    English summary
    Golden Star Ganesh starrer Kannada Movie 'Sundaranga Jaana' has received Good response from the critics. Here is the collection of 'Sundaranga Jaana' reviews by Top News Papers of Karnataka.
    Saturday, December 24, 2016, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X